ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಮಾನತೆಯನ್ನು ಸಾರುವುದೇ ಹಿಂದೂ ಸಂಸ್ಕøತಿಯ ವಿಶಿಷ್ಟತೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ #MLA Channabasappa ಹೇಳಿದರು.
ಅವರು ಇಂದು ಸರ್ಕಾರಿ ನೌಕರರ ಭವನದಲ್ಲಿ ತುಂಗಭದ್ರಾ ಸೇವಾ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲರ ಜೀವನದಲ್ಲಿ ಮಾಡಲೇ ಬೇಕಾದ್ದು ಸೇವೆ. ಸೇವೆಗೆ ಶಕ್ತಿ ಕೊಡುವ ಕೆಲಸ ಆಗಬೇಕು ವ್ಯಕ್ತಿಯ, ಕುಟುಂಬದ ಶಕ್ತಿ ಹೆಚ್ಚಿಸುವಲ್ಲಿ ತುಂಗಭದ್ರಾ ಸೇವಾ ಸಮಿತಿಯ ಜವಾಬ್ದಾರಿ ಹೆಚ್ಚಿದೆ ಎಂದರು.
ಈ ಸೇವಾ ಸಮಿತಿ ಸಮಾಜಮುಖಿ ಆಲೋಚನೆ ಮಾಡಿ ಕಾರ್ಯಪ್ರವೃತ್ತವಾಗಬೇಕು ಎಂದು ಸಲಹೆ ನೀಡಿದರು.
ಇನ್ನೋರ್ವ ಶಾಸಕ ಡಿ.ಎಸ್.ಅರುಣ್ ಮಾತನಾಡಿ, ನಮ್ಮದು ವಸುದೈವ ಕುಟುಂಬಕಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟ ಸಮಾಜ. ಎಲ್ಲರೂ ಸಂಘಟನಾತ್ಮಕವಾಗಿ ಒಟ್ಟಿಗೇ ಸೇರಿ ಸೇವಾ ಕಾರ್ಯ ಮಾಡಬೇಕು ಎಂದು ಹೇಳಿದರಲ್ಲದೆ ಇಂದಿನ ಮಕ್ಕಳಿಗೆ ಸಂಸ್ಕಾರ ನೀಡುವ ಕೆಲಸವಾಗಬೇಕು ಎಂದು ಹೇಳಿದರು.
Also read: ಶಿವಮೊಗ್ಗ | ಮನುಕುಲದ ಉದ್ಧಾರಕ್ಕಾಗಿ ಸೇವೆ ಎಂಬುದು ಅಗತ್ಯ | ಕೆ.ಎಸ್. ಈಶ್ವರಪ್ಪ
ಸಂಸ್ಕಾರ ಯಾವ ಶಾಲಾ ಕಾಲೇಜುಗಳಲ್ಲಿ ಸಿಗುವ ಸಂಗತಿಯಲ್ಲ. ನಮ್ಮ ನಮ್ಮ ಮನೆಗಳಲ್ಲೇ ಸಂಸ್ಕಾರ ನೀಡುವಂತಾಗಬೇಕು. ಆ ಶಕ್ತಿ ತಾಯಂದಿರಲ್ಲಿ ಇರುತ್ತದೆ ಎಂದು ತಿಳಿಸಿದರು.
ಭದ್ರಗಿರಿಯ ಪ.ಪೂ.ಶ್ರೀ ಮುರುಗೇಶ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದ ಈ ಸಮಾರಂಭದಲ್ಲಿ ವೇಲೂರಿನ ಶ್ರೀ ನವದುರ್ಗಾ ಪೀಡಂನ ಶ್ರೀ ದುರ್ಗಾಅಮ್ಮ ಸ್ವಾಮಿಗಳು, ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಮೋಹನ ರೆಡ್ಡಿ, ಸಮಿತಿ ಅಧ್ಯಕ್ಷ ಮಣಿಕಂಠ ಡಿ., ಉಪಾಧ್ಯಕ್ಷ ಎಂ.ಜಿ.ಆರ್.ಮಣಿ, ಪ್ರಮುಖರಾದ ಎ.ಕೇಶವಕುಮಸರ್, ಕೃಷ್ಣ ನಾಯ್ಕ್, ಎ.ವಿ.ದೊರೈರಾಜ್, ಡಿ.ಮಂಜುನಾಥ, ಹರೀಶ್, ಮಹೇಶ್, ಮುರಳಿ, ಶ್ರೀದೇವಿ, ಸೆಲ್ವಿ, ಲಕ್ಷ್ಮೀ, ಕಲ್ಯಾಣಿ, ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post