ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಹಳೇ ಜೈಲು ಆವರಣದಲ್ಲಿ ನಾಳೆ ಸಂಜೆ ನಡೆಯಲಿರುವ ನಮ್ಮೊಲುಮೆ ಅಭಿನಂದನಾ ಸಮಾರಂಭದ ಸಂಗೀತ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ದತೆ ನಡೆಯುತ್ತಿದ್ದು, ಹಾಡಿನ ಮೂಲಕವೇ ಮಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಜೀವನ ಪಯಣವನ್ನು ವಿವರಿಸಲಾಗುವುದು ಎಂದು ಚಲನಚಿತ್ರ ಹಿನ್ನಲೆ ಗಾಯಕರಾದ ವಿಜಯ ಪ್ರಕಾಶ್ ಮತ್ತು ರಾಜೇಶ್ ಕೃಷ್ಣನ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಎಲ್‌ಇಡಿ, ಬ್ಯಾಂಡ್, ಸೌಂಡ್ ಎಲ್ಲಾ ಸೇರಿ 75 ಜನರ ತಂಡ ಈಗಾಗಲೇ ನಗರಕ್ಕೆ ಬಂದು ಇಳಿದಿದ್ದಾರೆ ಎಂದರು.
ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಇಂದು ರಿಹರ್ಸಲ್ ನಡೆಸಲಾಗುವುದು. ಹಾಡುಗಳ ಮಧ್ಯೆ ವಿಶೇಷವಾದ ಹಾಡಿರಲಿದೆ. ಮುಖ್ಯಮಂತ್ರಿ ಅವರಿಗೆ ಹಾಡಿನ ಮೂಲಕ ಅಭಿನಂದನೆ ಸಲ್ಲಿಸಲಾಗುವುದು ಎಂದರು.
ಹಾಡಿನ ಜೊತೆಗೆ ವಿಲಾಸ್ ನಾಯಕ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಭಾವ ಚಿತ್ರವನ್ನು ಬಿಡಿಸಲಿದ್ದಾರೆ. ಅಭಿನಂದನಾ ಹಾಡಿಗೆ ಕೆ. ಕಲ್ಯಾಣ್ ಸಾಹಿತ್ಯ ಬರೆದಿದ್ದಾರೆ. ಸಂಗೀತದ ಮೂಲಕ ಮುಖ್ಯಮಂತ್ರಿಯವರಿಗೆ ವಿಶೇಷ ಉಡುಗರೆ ನೀಡಲಾಗುತ್ತಿದ್ದು, ತಮ್ಮದೇ ಸಂಗೀತ ನಿರ್ದೇಶವಿದ್ದು, ೬ ನಿಮಿಷದಲ್ಲಿ ಯಡಿಯೂರಪ್ಪ ಅವರ ರಾಜಕೀಯ ಪ್ರಯಾಣ ಹೇಗೆ ಸಾಗಿ ಬಂದಿದೆ ಎಂದು ವಿವರಿಸಲಾಗುವುದು ಎಂದರು.
ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ನಮ್ಮೊಲುಮೆಗೆ ಭರದಿಂದ ಸಕಲ ಸಿದ್ದತೆ ನಡೆದಿದ್ದು, 40 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಬಿಎಸ್‌ವೈ ಹುಟ್ಟುಹಬ್ವದ ಪ್ರಯುಕ್ತ ಕಾರ್ಯಕ್ರಮದಲ್ಲಿ 40 ಸಾವಿರ ಲಾಡು ಹಂಚಲಾಗುತ್ತಿದೆ. ತಿನಿಸು ಅಂಗಡಿಗಳನ್ನು ಆವರಣದಲ್ಲಿಯೇ ನಿರ್ಮಿಸಲಾಗಿದ್ದು, ರಾತ್ರಿ 10:30 ರಿಂದ 11 ರವರೆಗೆ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ ಮಾಹಿತಿ ನೀಡಿದರು.
ಬಿಎಸ್‌ವೈ ಅಭಿನಂದನಾ ಸಮಿತಿಯ ಮುಖ್ಯಸ್ಥ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಡಿ.ಎಸ್. ಅರುಣ್ ಎಸ್. ದತ್ತಾತ್ರಿ, ಹಿರಣಯ್ಯ, ಸಂತೋಷ್ ಬಳ್ಳಾಕೆರೆ ಮೊದಲಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post