ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
100 ಕೋಟಿಗೂ ಅಧಿಕ ಲಸಿಕೆ ವಿತರಿಸಿ ದೇಶವು ವಿಶೇಷ ಸಾಧನೆ ಮೆರೆದ ಹಿನ್ನೆಲೆಯಲ್ಲಿ ಅಭಿಯಾನದಲ್ಲಿ ಭಾಗವಹಿಸಿದ ಸೊನಲೆ ಆರೋಗ್ಯ ಕೇಂದ್ರದ ವೈದ್ಯಕೀಯ ಅಧಿಕಾರಿಗಳು, ಆರೋಗ್ಯ ಕಾರ್ಯಕರ್ತರು ಹಾಗೂ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಲಸಿಕಾ ಅಭಿಯಾನದ ಸಂಚಾಲಕ ಎಸ್. ದತ್ತಾತ್ರಿ, ಜಿಲ್ಲಾ ಕಾರ್ಯದರ್ಶಿ ಹಾಗೂ ಸಹ ಸಂಚಾಲಕ ಎ.ವಿ. ಮಲ್ಲಿಕಾರ್ಜುನ್, ವೈದ್ಯರಾದ ಡಾ. ಮಾರುತಿ, ಮಂಡಲ ಲಸಿಕಾ ಅಭಿಯಾನದ ಪ್ರಮುಖರಾದ ಶಿವಾನಂದ, ಸೊನಲೆ ಲಸಿಕಾ ಕೇಂದ್ರದ ಪ್ರಮುಖರಾದ ಬಾಲಚಂದ್ರ, ಗ್ರಾಮ ಪಂಚಾಯಿತಿ ಸದಸ್ಯ ಸತೀಶ್ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post