ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರತಿಷ್ಠಿತ ಪಿಇಎಸ್ ಪಬ್ಲಿಕ್ ಶಾಲೆಯು PES Public School ಗ್ರಾಮೀಣ ಹಾಗೂ ನಗರದ ವಿದ್ಯಾರ್ಥಿ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸುತ್ತಾ ಬಂದಿದ್ದು, ಸಿಬಿಎಸ್’ಇ 10ನೆಯ ತರಗತಿ ಟರ್ಮ್ 1ರಲ್ಲಿ ಶೇ.100 ಫಲಿತಾಂಶ ಗಳಿಸುವ ಮೂಲಕ ಸಾಧನೆ ಮಾಡಿದೆ.
10ನೆಯ ತರಗತಿ ವಿದ್ಯಾರ್ಥಿ ವಿ.ಎಸ್. ಶಿವಪ್ರೀತಮ್ ಅವರು ಇಂಗ್ಲಿಷ್, ಕನ್ನಡ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ 50ಕ್ಕೆ 50 ಅಂಕಗಳನ್ನು ಗಳಿಸಿ ಶಾಲೆಯ ಹಿರಿಮೆಗೆ ಕೀರ್ತಿ ತಂದಿದ್ದಾನೆ.
Also read: ಮಾ. 20ರಂದು ಡಾಕ್ಟರ್ಸ್ ಕಪ್-8 ಕ್ರಿಕೆಟ್ ಪಂದ್ಯಾವಳಿ: ಯಾವೆಲ್ಲಾ ಆಸ್ಪತ್ರೆಗಳು ಪಾಲ್ಗೊಳ್ಳಲಿವೆ?
ಶೇ.35ರಷ್ಟು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್’ನಲ್ಲಿ ಶೇ.54ರಷ್ಟು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ ಶೇ.10ರಷ್ಟು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಅಭೂತಪೂರ್ವ ಸಾಧನೆ ಮಾಡಿದ್ದು, ಈ ಫಲಿತಾಂಶ ಶಿಕ್ಷಕರೆಲ್ಲರ ಪರಿಶ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಪಿಇಎಸ್ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಎಲ್ಲ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post