ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆಯಲ್ಲದೆ 18 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿದ್ದನ್ನು ವಿರೋಧಿಸಿ ಜಿಲ್ಲಾ ಬಿಜೆಪಿಯು ಇಂದು ನಗರದ ಅಮೀರ್ ಅಹಮ್ಮದ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿತ್ತಲ್ಲದೆ ಮುಖ್ಯಮಂತ್ರಿಗಳ ಪ್ರತಿಕೃತಿಯನ್ನು ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ನಿರತರನ್ನುದ್ಧೇಶಿಸಿ ಮಾತನಾಡಿದ ಶಾಸಕ ಹಾಗೂ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ, ಭಾರತದ ಸಂವಿಧಾನವು 106 ಬಾರಿ ತಿದ್ದುಪಡಿಗೆ ಒಳಗಾಗಿದ್ದು ಅದರಲ್ಲಿ 76 ಬಾರಿ ಕಾಂಗ್ರಸ್ಸೇ ತಿದ್ದುಪಡಿ ಮಾಡಿ ಮುಸ್ಸಿಮರ ಓಲೈಕೆಗೆ ಏನು ಬೇಕೋ ಅದನ್ನು ಮಾಡಿಕೊಂಡಿದೆ. ಕಾಂಗ್ರೆಸ್ ಆವತ್ತು ದೇಶವನ್ನು ಇಬ್ಭಾಗ ಮಾಡಿತ್ತು. ಈಗ ಮುಸ್ಲಿಂ ತುಷ್ಠೀಕರಣ ಬಜೆಟ್ ಮೂಲಕ ಊರು ಊರನ್ನು ಒಡೆಯುತ್ತಿದೆ ಎಂದು ಕಿಡಿ ಕಾರಿದರು.

Also read: ದೌರ್ಜನ್ಯಗಳ ನಡುವೆ ‘ಮಹಿಳಾ ದಿನಾಚರಣೆ’ ಆಚರಿಸುವುದು ಹೇಗೆ?
ಇದೇ ಸಂದರ್ಭದಲ್ಲಿ ಕನ್ನಡ ಹೋರಾಟಗಾರರು, ವಿಚಾರವಾದಿಗಲಕು, ಬುದ್ದಿಜೀವಿಗಳನ್ನು ತರಾಟೆಗೆ ತೆಗೆದುಕೊಂಡ ಜ್ಞಾನೇಂದ್ರ ಎಲ್ಲದಕ್ಕೂ ನೀವೇ ಬಾಸ್ ಆಗಿದ್ದೀರಿ. ಬೇರೆ ವಿಷಯಗಳಿಗೆ ಹೋರಾಡುತ್ತೀರಿ. ಮುಸ್ಲಿಂ ತುಷ್ಠೀಕರಣದ ಬಗ್ಗೆ ನೀವೇಕೆ ಸಿನಿಕರಾಗಿದ್ದೀರಿ. ಭವಿಷ್ಯದ ಕರ್ನಾಟಕವನ್ನು ಮಣ್ಣು ಪಾಲು ಮಾಡುತ್ತಿದ್ದೀರಿ ಎಂದು ಕುಟುಕಿದರು.

ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. 9ವಿವಿಗಳನ್ನು ಮುಚ್ಚಿ ಆ ಹಣವನ್ನು ಮುಸ್ಲಿಂರಿಗೆ ನೀಡುತ್ತಿದೆ ಎಂದು ಹೇಳಿದರು.
ಸಭಾಧ್ಯಕ್ಷರು ಷರಿಯತ್ ಕಾನೂನನ್ನು ಅನುಸರಿಸುತ್ತಿದ್ದಾರೆ. ಅವರು ಪಕ್ಷಾತೀತವಾಗಿರಬೇಕು. ಆದರೆ ಕಾಂಗ್ರೆಸ್ ಬರೆದುಕೊಟ್ಟಿದ್ದನ್ನು ಸಭಾಧ್ಯಕ್ಷರು ಮಾಡುತ್ತಿದ್ದಾರೆ ಎಂದ ಅವರು ನಮ್ಮ ಅಮಾನತು ವಾಪಸ್ ಗೆ ಭಿಕ್ಷೆ ಬೇಡುವುದಿಲ್ಲ. ಸಂವಿಧಾನ ಬಾಹಿರವಾಗಿ ನಮ್ಮನ್ನು 6 ತಿಂಗಳು ಹೊರಗೆ ಹಾಕಿ ನೀವು ಹೇಗೆ ವಿಧಾನ ಸೌಧದಲ್ಲಿರುತ್ತೀರಿ ಎಂದು ಸವಾಲು ಹಾಕಿದರು. ಅವರು ಮಾತಾಡುತ್ತಿರುವಾಗಲೇ ಸಭಾಧ್ಯಕ್ಷರ ಬಗ್ಗೆ ಮಾತನಾಡಬೇಡಿ ಎಂಬ ಸೂಚನೆ ಸೂಚನೆ ಬಂದು, ಯಾರೇ ಹಿಂದೂ ವಿರೋಧಿ ಕೆಲಸ ಮಾಡಿದರೂ ನಾನು ಮಾತಾಡುವವನೇ. ಬಬೇಕಾದರೆ ಕೇಸ್ ಹಾಕಿ. ಹತ್ತರ ಕೂಡ ಹನ್ನೊಂದು. ನೋ ಪ್ರಾಬ್ಲಮ್ ಎಂದು ಗುಡುಗಿದರು.

ಈ ಸಂದರ್ಭದಲ್ಲಿ ಶಾಸಕ ಧನಂಜಯ ಸರ್ಜಿ, ಡಿ.ಎಸ್.ಅರುಣ್, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ, ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ಎಸ್. ಜ್ಞಾನೇಶ್ವರ್, ಎಸ್.ದತ್ತಾತ್ರಿ, ಡಾ.ರವೀಂದ್ರ, ಟಿ.ಡಿ.ಮೇಘರಾಜ್, ಹರಿಕೃಷ್ಣ, ಮೋಹನ್ ರೆಡ್ಡಿ, ಕೆ.ವಿ.ಅಣ್ಣಪ್ಪ, ಸಿ.ಎಚ್.ಮಾಲತೇಶ್, ರಶ್ಮಿ ಶ್ರೀನಿವಾಸ್, ಸುರೇಖಾ ಮುರಳೀಧರ, ಶಾಂತಾ ಸುರೇಂದ್ರ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post