ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದ್ವಿತೀಯ ಪಿಯುಸಿ ಫಲಿತಾಂಶ Second PUC Result ಪ್ರಕಟಗೊಂಡಿದ್ದು ನಗರದ ಪೇಸ್ ಕಾಲೇಜಿಗೆ Pace Collage of Shivamogga ಶೇ.99.5ರಷ್ಟು ಫಲಿತಾಂಶ ಸಂದಿದ್ದು, ಈ ಮೂಲಕ ಜಿಲ್ಲೆಯ ಪ್ರತಿಷ್ಠಿತ ಕಾಲೇಜುಗಳ ಅಗ್ರಗಣ್ಯ ಪಟ್ಟಿಯಲ್ಲಿ ಮತ್ತೊಮ್ಮೆ ಸಾಧನೆ ಮಾಡಿದೆ.
ಕಾಲೇಜು ಒಟ್ಟು ಶೇ.99.5ರಷ್ಟು ಫಲಿತಾಂಶ ದಾಖಲಿಸಿದ್ದು, 205 205 ಡಿಸ್ಟಿಂಕ್ಷನ್ ಹಾಗೂ 192 ಪ್ರಥಮ ದರ್ಜೆಯಲ್ಲಿ ಪಾಸ್ ಆಗಿದ್ದಾರೆ.
ಕನ್ನಡದಲ್ಲಿ 1, ಸಂಸ್ಕೃತ 3, ಫಿಸಿಕ್ಸ್ 5, ಮ್ಯಾಥ್ಸ್ 13, ಬಯಾಲಜಿ 2 ಹಾಗೂ ಕಂಪ್ಯೂಟರ್ ಸೈನ್ಸ್’ನಲ್ಲಿ 11 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.
ಕಾಲೇಜಿನ ಮಾಧ್ಯಂ ಸ್ವಾಮಿ 600ಕ್ಕೆ 588, ಎನ್.ಜಿ. ಪ್ರಣತಿ 583, ಪಿ. ಚಿನ್ಮಯ್ 583, ಎಸ್.ಎಂ. ಲಾವಣ್ಯ 582, ಎಂ.ಎನ್. ಅರ್ಜುನ್ 581, ಸಮೀಕ್ಷಾ ಮಿರಾಜ್’ಕರ್ 581, ಕೆ.ಎಲ್. ವರ್ಷಾ 581 ಹಾಗೂ ಋತ್ವಿಕ್ ಚೇತನ್ ನಾಯ್ಕ್ 580 ಅಂಕಗಳನ್ನು ಗಳಿಸುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
Also read: ಶಿಕಾರಿಪುರದ ಕುಮದ್ವತಿ ಬಿಎಡ್ ಕಾಲೇಜಿಗೆ ಎ+ ನ್ಯಾಕ್ ಮಾನ್ಯತ
ಅತ್ಯುತ್ತಮ ಸಾಧನೆ ಮಾಡಿರುವ ಪೇಸ್ ಕಾಲೇಜು ಹಾಗೂ ಈ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಕಲ್ಪ ಮೀಡಿಯಾ ಹೌಸ್ ಅಭಿನಂದಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post