ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೊಮ್ಮನಕಟ್ಟೆಯ ದೇವಂಗಿ ರತ್ನಾಕರ ಬಡಾವಣೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ Shri Raghavendra Swamy Mutt ಆ.31ರಿಂದ ಸೆ.2ರ ವರೆಗೆ ಮೂರು ದಿನಗಳ ಕಾಲ ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ 352ನೇ ಆರಾಧನಾ ಮಹೋತ್ಸವ ನಡೆಯಲಿದೆ ಎಂದು ಮಠದ ಪ್ರಮುಖ ಭಕ್ತರಾದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ KSEshwarappa ಹೇಳಿದ್ದಾರೆ.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂತ್ರಾಲಯ ಶ್ರೀ ಸುಬುದೇಂದ್ರ ತೀರ್ಥಂಗಳವರ ಆಜ್ಞಾನುಸಾರ ಈ ನೂತನ ಮಠ ಪ್ರತಿಷ್ಠಾಪನೆ ಆದ ಬಳಿಕ ಇದೇ ಮೊದಲ ಬಾರಿಗೆ ಈ ಆರಾಧನಾ ಮಹೋತ್ಸವ ನಡೆಯುತ್ತಿದೆ.
ಆ.30ರಂದು ಸಂಜೆ 6ಕ್ಕೆ ಗೋಪೂಜೆ, ಧ್ವಜಾರೋಹಣ, ಧನ, ಧಾನ್ಯ, ಪೂಜೆ ಲಕ್ಷ್ಮೀಪೂಜೆ ಸ್ವಸ್ತಿವಾಚನ, ಮಹಾಮಂಗಳಾರತಿ ಇದ್ದು, ಮುಖ್ಯ ಅತಿಥಿಗಳಾಗಿ ನಾನು ಭಾಗವಹಿಸಲಿದ್ದೇನೆ.
ಆ. 31ರಂದು ಪೂರ್ವಾರಾಧನೆ ಇದ್ದು, ಬೆಳಿಗ್ಗೆ 5-30ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸೆ.1ರಂದು ಶ್ರೀ ಗುರುರಾಜರ ಮಧ್ಯಾರಾಧನೆ ಜರುಗಲಿದ್ದು, ಸೆ.2ರ ಶನಿವಾರ ಉತ್ತಾರಾರಾಧನೆ ನಡೆಯಲಿದೆ. ಮೂರೂ ದಿನಗಳ ಕಾಲ ಸಂಜೆ 6ರಿಂದ ಭಜನೆ, ವೀಣಾವಾದನ. ಪ್ರವಚನ ನಡೆಯಲಿದ್ದು, ಪಲ್ಲಕ್ಕಿ ಸೇವೆ ಹಾಗೂ ಪ್ರಸಾದ ವಿತರಣೆ ನಡೆಯಲಿದ್ದು, ಸಾರ್ವಜನಿಕರು ಹಾಗೂ ಭಕ್ತರು ತನುಮನ ಧನ ನೀಡಿ ಸಹಕರಿಸುವಂತೆ ಅವರು ವಿನಂತಿಸಿದರು.
Also read: ಬಿಜೆಪಿ ಶಾಸಕರನ್ನು ಸೆಳೆಯುವ ಪ್ರಯತ್ನ ಫಲಿಸದು: ಮಾಜಿ ಡಿಸಿಎಂ ಈಶ್ವರಪ್ಪ
ಪತ್ರಿಕಾಗೋಷ್ಠಿಯಲ್ಲಿ ಧೀರೇಂದ್ರ ಆಚಾರ್, ಅಶ್ವತ್ಥನಾರಾಯಣ ಶೆಟ್ಟಿ, ಸುಧೀಂದ್ರ, ಮಧುಸೂದನ್ ಕುಬೇರಪ್ಪ, ಪ್ರಶಾಂತ್, ಅಣ್ಣಪ್ಪ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post