ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿನೋಬನಗರದ ಶುಭಮಂಗಳ ಸಮುದಾಯ ಭವನದಲ್ಲಿ ಜೂ.21ರಂದು 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ದಿ ಆಟ್ ಆಫ್ ಲಿವಿಂಗ್, ಸುಮೇರು ಯೋಗ ಕೇಂದ್ರ, ಕಣಾದ ಯೋಗ ಮತ್ತು ರಿಸರ್ಚ್ ಫೌಂಡೇಶನ್, ಅಮೃತ ಯೋಗ ಕೇಂದ್ರ, ಚಿರಂತನ ಯೋಗ ಹಾಗೂ ಸಂಗೀತ ಟ್ರಸ್ಟ್, ನಮ್ಮ ಯೋಗ ಕುಟುಂಬ, ಸಪ್ತಬಿಂದು ಯೋಗ ಮಂದಿರ, ನಿಹಾರಿಕ ಯೋಗ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಬೆಳಿಗ್ಗೆ 5:30ರಿಂದ 8:30ರವರೆಗೆ ಸಾಮೂಹಿಕ ಯೋಗಾಭ್ಯಾಸ, ಸೂರ್ಯ ನಮಸ್ಕಾರ, ಆಸನ, ಪ್ರಾಣಾಯಾಮ, ಧ್ಯಾನ ನಂತರ ಉಪನ್ಯಾಸ ಹಾಗೂ ಗುರುವಂದನಾ ಕಾರ್ಯಕ್ರಮ ಜರುಗಲಿದೆ.
ಪಾಸಿಟಿವ್ ಮೈಡ್ ಹಾಸ್ಪಿಟಲ್‌ನ ಮಾನಸಿಕ ಹಾಗೂ ನರರೋಗ ತಜ್ಞ ಡಾ. ಎಸ್.ಟಿ. ಅರವಿಂದ್ ಅವರಿಂದ ಯೋಗದಿಂದ ಮನೋಸ್ಪೂರ್ತಿ ಕುರಿತು ಉಪನ್ಯಾಸ ನಡೆಯಲಿದ್ದು, ಯೋಗಾಸಕ್ತರು, ಸಾರ್ವಜನಿಕರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿ ಕೋರಲಾಗಿದೆ.
Also read: ಅಮರನಾಥ ಯಾತ್ರಿಗರ ಮೇಲೆ ದಾಳಿಗೆ ಸ್ಕೆಚ್: ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಯೋಧರು
ಹೆಚ್ಚಿನ ಮಾಹಿತಿಗಾಗಿ 9964072793 (ಶಬರೀಶ್ ಕಣ್ಣನ್), 9481505853 ( ಶಶಿಭೂಷಣ್ ಶಾಸ್ತ್ರಿ) 9886674375 (ಅನಿಲ್ ಕುಮಾರ್ ಹೆಚ್. ಶೆಟ್ಟರ್) 9741103173 (ಸುಧಾ ಮಂಜುನಾಥ್), 9945150204 (ಶಾಂತಾ ಎಸ್. ಶೆಟ್ಟಿ) 9448554997 (ಮೋಹನಮೂರ್ತಿ), 9481500419 (ಮಮತಾ ಚಂದ್ರಶೇಖರ್) 8277542152 (ಲಕ್ಷ್ಮೀನಾರಾಯಣ ಕೌಶಿಕ್), 9901824699 – ( ರಾಜಶೇಖರ್) ಅವರನ್ನು ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post