ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗಾಜನೂರಿನ ಮೂರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪವು ಶಾಲಾ ಆವರಣದಿಂದ ವಿದ್ಯಾರ್ಥಿಗಳ ವಸತಿ ಶಾಲೆಯೊಳಗೆ ಬರುತ್ತಿರುವುದನ್ನು ಗಮನಿಸಿದ ಶಾಲಾ ಮುಖ್ಯ ಶಿಕ್ಷಕರು ಕೂಡಲೆ ಉರಗ ರಕ್ಷಕರ ತಂಡದವರಿಗೆ ಕರೆ ಮಾಡಿ ಹಾವನ್ನು ಹಿಡಿ`ದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡುಗಡೆ ಮಾಡಿದ್ದಾರೆ.
ಸ್ನೇಕ್ ವಿಕ್ಕಿ, ಸ್ನೇಕ್ ರಂಜನ್, ಸ್ನೇಕ್ ಸುಹಾಸ್ ಮತ್ತು ಕುವೆಂಪು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಉರಗಗಳ ಸಂಶೋಧನ ವಿದ್ಯಾರ್ಥಿಯಾದ ಉರಗ ತಜ್ಞ ಹಾಗೂ ಉರಗ ರಕ್ಷಕ ಎಂ.ಎಸ್ ಜಯಂತ್ ಬಾಬು ರವರು ತಮ್ಮ ತಂಡದೊಂದಿಗೆ ಕಾಳಿಂಗ ಸರ್ಪವನ್ನು ಸುರಕ್ಷತವಾಗಿ ರಕ್ಷಿಸಿದರು ಮತ್ತು ಅರಣ್ಯ ಸಿಬ್ಬಂದಿಗಳ ಸಮ್ಮುಖದಲ್ಲಿ ಅರಣ್ಯಪ್ರದೇಶಕ್ಕೆ ಸುರಕ್ಷಿತವಾಗಿ ಬಿಡುಗಡೆ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post