ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಬಹುಮುಖಿಯ 60ನೇ ಕಾರ್ಯಕ್ರಮವಾಗಿ, ವಿಶ್ರಾಂತ ಪೊಲೀಸ್ ಆಯುಕ್ತ ಚಂದ್ರಶೇಖರ್ ಅವರ ಬಹುಚರ್ಚಿತ ಮೈ-ಸೊರ್-ಸ್ಟೋರಿ ಕೃತಿ ಕುರಿತು ಸಂವಾದ ಆಯೋಜಿಸಲಾಗಿದೆ.
ಅ.10ರ ಶುಕ್ರವಾರ ಸಂಜೆ 05.30ಕ್ಕೆ ಫ್ರೆಂಡ್ಸ್ ಸೆಂಟರ್ ಹಾಲ್ (ವಾಣಿಜ್ಯ ಕಾಲೇಜು ಆವರಣ)ನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕೃತಿಯನ್ನು ಕುರಿತು ಪೂರ್ವ ವಲಯ ಐಜಿಪಿ ರವಿಕಾಂತೆ ಗೌಡ #IGP Ravikanthe Gowda ಅವರು ಮಾತನಾಡಲಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷ ಕೆ.ವಿ. ಶಿವಕುಮಾರ್, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಜಿ.ಆರ್. ರಾಘವೇಂದ್ರಸ್ವಾಮಿ ಉಪಸ್ಥಿತರಿರಲಿದ್ದಾರೆ.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ಶಿವಮೊಗ್ಗ ಶಾಖೆ ಮತ್ತು ಶಿವಮೊಗ್ಗ ಬಾರ್ ಅಸೋಸಿಯೇಶನ್ ಈ ಸಂವಾದ ಕಾರ್ಯಕ್ರಮಕ್ಕೆ ಕೈಜೋಡಿಸಿವೆ.
ಕಾರ್ಯಕ್ರಮದಲ್ಲಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳುವಂತೆ ವಿನಂತಿಸಲಾಗಿದ್ದು, ಹೆಚ್ಚಿನ ಮಾಹಿತಿಗೆ ಮೊ.9449284495, 9845014229, “95380 20367ರಲ್ಲಿ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post