ನಾಳೆ ನಡೆಯುವ ಹಿಂದು ಮಹಾಸಭಾ ಗಣಪತಿಯ ಮೆರವಣಿಗೆ ಹಿನ್ನೆಲೆಯಲ್ಲಿ ಇಡೀ ಶಿವಮೊಗ್ಗ ನಗರ ಕೇಸರಿಮಯವಾಗಿದೆ. ನಗರದ ಬಹುತೇಕ ಎಲ್ಲಾ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಕೇಸರಿ ತೋರಣಗಳು. ಭಗವಾಧ್ವಜಗಳು, ಬಂಟಿಂಗ್ಸ್‍ಗಳು ರಾರಾಜಿಸುತ್ತಿವೆ.
Also read: ನಾಳೆ ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ: ಭದ್ರತೆಗೆ ಎಷ್ಟು ಪೊಲೀಸರ ನಿಯೋಜನೆ?
ಇದಲ್ಲದೆ ಶಿವಪ್ಪನಾಯಕ ವೃತ್ತದಲ್ಲಿ ಚಂದ್ರಯಾನ ರಾಕೆಟ್‍ನ ಪ್ರತಿಕೃತಿಯನ್ನು ಕೂಡ ನಿರ್ಮಿಸಲಾಗಿದೆ.ಇದು ಕೂಡ ನೋಡುಗರ ಗಮನ ಸೆಳೆಯುತ್ತಿದೆ. ಈ ಬಾರಿ ಚಂದ್ರಯಾನ -3ರ Chandrayaana-3 ಯಶಸ್ಸಿನ ಹಿನ್ನೆಲೆಯಲ್ಲಿ ಇದನ್ನು ನಿರ್ಮಿಸಲಾಗಿದೆ. ಹಾಗೆಯೇ ಆಂಜನೇಯ ಮೂರ್ತಿಯನ್ನು ಕೂಡ ನಿರ್ಮಿಸಲಾಗಿದೆ.
ಈದ್‍ಮಿಲಾದ್ Eid-Milad ಮತ್ತು ಗಣೇಶ ಹಬ್ಬ Ganesha Festival ಒಂದೇ ಬಾರಿ ಬಂದಿದ್ದರಿಂದ ಮೆರವಣಿಗೆಯ ಆತಂಕವಿತ್ತು. ಆದರೆ ಮುಸಲ್ಮಾನ ಬಾಂಧವರು ಮೆರವಣಿಗೆ ಮುಂದಕ್ಕೆ ಹಾಕಿದ್ದಾರೆ. ಈಗಾಗಲೇ ಶಾಂತಿಯುತವಾಗಿ ಹಬ್ಬ ಆಚರಿಸುವ ಹಿನ್ನೆಲೆಯಲ್ಲಿ ಅನೇಕ ಬಾರಿ ಶಾಂತಿ ಸಭೆಗಳು ನಡೆದಿವೆ. ಕೆಲವು ಸಂಘ-ಸಂಸ್ಥೆಗಳು ಕೂಡ ಶಾಂತಿಗಾಗಿ ಮನವಿ ಮಾಡಿಕೊಂಡಿದ್ದಾರೆ. ಮುಸ್ಲಿಂ ಮುಖಂಡರು ಹಿಂದೂ ಮಹಾಸಭಾ ಪ್ರತಿಷ್ಠಾಪಿಸಿರುವ ಗಣಪತಿಯ ದರ್ಶನ ಪಡೆದು ಹಬ್ಬ ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ನಡೆಯಲೆಂದು ಆಶಯ ವ್ಯಕ್ತಪಡಿಸಿದ್ದಾರೆ.
Discussion about this post