Read - 2 minutes
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿನ ಬಿ.ಎಚ್. ರಸ್ತೆಯ ಯೂನಿಯನ್ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಹೃದಯಾಘಾತದಿಂದ ರೈಲಿನ ಎಸಿ ಬೋಗಿಯ ಶೌಚಗೃಹದಲ್ಲೇ ಮೃತಪಟ್ಟಿದ್ದು ಭಾನುವಾರ ಬೆಳಗ್ಗೆ ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಮೃತದೇಹ ಪತ್ತೆಯಾಗಿದೆ.
ಅಶೋಕ್ ರೈ ಚೌಧರಿ (35) ಮೃತರು. ಅಸ್ಸಾಂ ಮೂಲದ ಚೌಧರಿ ಅವರು ಕಳೆದ ಎರಡು ವರ್ಷಗಳಿಂದ ಶಿವಮೊಗ್ಗದಲ್ಲಿ ನೆಲೆಸಿದ್ದರು. ಅಸ್ಸಾನಿಂದ ಶನಿವಾರ ರಾತ್ರಿ ಅಶೋಕ್ ಚೌಧರಿ ಅವರ ಪತ್ನಿ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಲಿದ್ದರು. ಹಾಗಾಗಿ ಶನಿವಾರ ಮಧ್ಯಾಹ್ನವೇ ಯಶವಂತಪುರ-ಶಿವಮೊಗ್ಗದ ಇಂಟರ್‌ಸಿಟಿ ರೈಲಿನ ಎಸಿ ಬೋಗಿಯಲ್ಲಿ ಬೆಂಗಳೂರಿಗೆ ಪತ್ನಿ ಕರೆ ತರಲು ಪ್ರಯಾಣಿಸಿದ್ದರು. ಮಾರ್ಗ ಮಧ್ಯೆ ಶೌಚಗೃಹಕ್ಕೆ ತೆರಳಿದ್ದಾಗ ಹೃದಯಾಘಾತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶೌಚಗೃಹದ ಒಳಗಡೆಯಿಂದ ಲಾಕ್ ಮಾಡಿದ್ದರಿಂದ ಸಹ ಪ್ರಯಾಣಿಕರ ಗಮನಕ್ಕೆ ಬಂದಿಲ್ಲ. ಕುಟುಂಬಸ್ಥರ ಮೊಬೈಲ್ ಕರೆಗಳನ್ನೂ ಸ್ವೀಕರಿಸಿರಲಿಲ್ಲ. ಹಾಗಾಗಿ ಕುಟುಂಬಸ್ಥರು ಆತಂಕಗೊಂಡಿದ್ದರು. ಭಾನುವಾರ ಬೆಳಗ್ಗೆ ಯಶವಂತರಪುರ-ಶಿವಮೊಗ್ಗ ಇಂಟರ್‌ಸಿಟಿ ರೈಲು ಶಿವಮೊಗ್ಗ ನಿಲ್ದಾಣಕ್ಕೆ ಬಂದಿದ್ದು, ರೈಲಿನ ಸಿಬ್ಬಂದಿ ಬೋಗಿಯನ್ನು ಸ್ವಚ್ಛಗೊಳಿಸಲು ಮುಂದಾದಾಗ ಶೌಚಗೃಹ ಒಳಗಡೆಯಿಂದ ಲಾಕ್ ಆಗಿತ್ತು. ಎಷ್ಟೊತ್ತಾದರೂ ಹೊರಗೆ ಬಾರದೇ ಇರುವುದರಿಂದ ಅನುಮಾನಗೊಂಡು ಪೊಲೀಸರ ಸಮ್ಮುಖದಲ್ಲಿ ಲಾಕ್ ತೆರೆದು ನೋಡಿದಾಗ ಅಶೋಕ್ ಚೌಧರಿ ಅವರ ಮೃತದೇಹ ಪತ್ತೆಯಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


Discussion about this post