ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳ ಕೈಕೆಳಗೆ ಕೆಲಸ ಮಾಡುತ್ತಿರುವವರು ನಿವೃತ್ತರಾದಾಗ ಅಧಿಕಾರಿಗಳು ಅವರನ್ನು ಅತ್ಯಂತ ಸಂಭ್ರಮ ಸಡಗರದಿಂದ ಪ್ರೀತಿಯಿಂದ ಬೀಳ್ಕೊಡುತ್ತಿರುವುದು ಒಂದು ಅಪರೂಪದ ಸಂಗತಿಯಾಗಿದೆ.
Also read: ತಮಿಳುನಾಡಿನಲ್ಲಿ `ಎನ್ ಮನ್, ಎನ್ ಮಕ್ಕಳ್’ ಪಾದಯಾತ್ರೆಗೆ ಚಾಲನೆ ನೀಡಿದ ಅಮಿತ್ ಶ
ಕರಿಯಣ್ಣನವರಿಗಂತೂ ಈ ಸಂದರ್ಭ ಅತ್ಯಂತ ಭಾವುಕ ಕ್ಷಣವಾಗಿತ್ತು. ಅಧಿಕಾರಿಯೊಬ್ಬರು ತಮ್ಮನ್ನು ಕೂರಿಸಿ ಬಾಳೆಲೆ ಹಾಗಿ ಊಟ ಬಡಿಸಿದ್ದು ಕಂಡು ಕಣ್ಣು ತೇವವಾಗಿತ್ತು. ಏನೂ ಮಾತನಾಡದ ಸ್ಥಿತಿಯಲ್ಲಿ ಕರಿಯಣ್ಣ ತಮ್ಮ ಅಧಿಕಾರಿಗೆ ಕಣ್ಣಿನಲ್ಲಿಯೇ ಕೃತಜ್ಞತೆ ತೋರಿಸಿದರು.
ಇತ್ತೀಚಿನ ವರ್ಷಗಳಲ್ಲಿ ಅಧಿಕಾರಿಗಳು ತಮ್ಮ ಕೈಕೆಳಗೆ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಅತ್ಯಂತ ಗೌರವದಿಂದ ಬೀಳ್ಕೊಡುತ್ತಿರುವುದು ಸಾಮಾನ್ಯವಾಗಿದೆ. ಜೊತೆಗೆ ಅವರಿಗೆ ಹಿರಿಯರ ಸ್ಥಾನವನ್ನು ಕೂಡ ಈ ಅಧಿಕಾರಿಗಳು ನೀಡುತ್ತಾರೆ. ಈ ಹಿಂದೆಯೂ ಸಹ ಅನೇಕ ಅಧಿಕಾರಿಗಳು ತಮ್ಮ ಚಾಲಕ ನಿವೃತ್ತರಾದಾಗ ಅವರನ್ನು ತಾವೇ ಡ್ರೈವ್ ಮಾಡಿಕೊಂಡು ಮನೆಯವರೆಗೂ ಬಿಟ್ಟು ಬಂದ ಉದಾಹರಣೆಗಳಿವೆ. ಇಂತಹ ಘಟನೆಗಳಿಗೆ ಮೇಲ್ಕಂಡ ಘಟನೆಯೂ ಸಾಕ್ಷಿಯಾಗಿತ್ತು. ಈ ಸಂದರ್ಭವನ್ನು ಆಪ್ತ ಶಾಖೆಯ ಸಿಬ್ಬಂದಿಗಳು ಕಂಡು ಕಣ್ತುಂಬಿಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post