ನಗರದ ಹೊರವಲಯದ ಬೀರನಕೆರೆ, ಬನ್ನೀಕೆರೆ, ಬಿಕ್ಕೋನಹಳ್ಳಿಗಳಲ್ಲಿ ಹಳ್ಳಿಗಳಿಗೆ ನುಗ್ಗಿ ಜನರಲ್ಲಿ ಭಯ ಹುಟ್ಟಿಸಿದ್ದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.
ಬಿಕ್ಕೋನಹಳ್ಳಿಯಲ್ಲಿ ಯಶೋಧಮ್ಮ ಎಂಬ ಮಹಿಳೆಯನ್ನು ಕೊಂದು ಹಾಕಿದ್ದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯವರು ಹರಸಾಹಸ ಪಟ್ಟಿದ್ದರು.
ಬನ್ನೀಕೆರೆಯಲ್ಲಿ ಹೊಲಕ್ಕೆ ಹೋಗಿದ್ದ ಯುವಕನೊಬ್ಬನಿಗೆ ಚಿರತೆ ಕಂಡಿತ್ತು. ತಕ್ಷಣ ಕಾರ್ಯೋನ್ಮುಖರಾದ ಅರಣ್ಯ ಇಲಾಖೆಯವರು ಬೋನನ್ನು ಸಿದ್ದಪಡಿಸಿದ್ದರು. ಕೊನೆಗೂ ಬಿಕ್ಕೋನಹಳ್ಳಿಯಲ್ಲಿ ಸೆರೆ ಸಿಕ್ಕ ಚಿರತೆಯನ್ನು ಅರಣ್ಯ ಇಲಾಖೆಯವರು ಲಯನ್ಸ್ ಸಫಾರಿಗೆ ಬಿಟ್ಟಿದ್ದಾರೆ. ಆ ಭಾಗದ ಜನರು ನಿಟ್ಟುಸಿರು ಬಿಡುವಂತಾಗಿದೆ.
Also read: ಅಖಿಲ ಭಾರತ ಸಸಿ ನೆಡುವ ಅಭಿಯಾನದಡಿ 4ನೇ ಕೋಟಿಯ ಸಸಿ ನೆಟ್ಟ ಅಮಿತ್ ಶಾ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















