No Result
View All Result
ABD Maestro Launches 3 Premium Whiskies in Hyderabad
English Articles

ABD Maestro Launches 3 Premium Whiskies in Hyderabad

by kalpa News
July 21, 2026
0

Kalpa Media House  |  Hyderabad  | Hyderabad emerges as a key destination for luxury spirits as AODH, WOODBURNS, and YELLO...

Read moreDetails
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
PM Modi Inaugurates Redeveloped Bantawala Railway Station through Video Conferencing

PM Narendra Modi Inaugurates Redeveloped Bantawala Railway Station through Video Conferencing

July 20, 2026
Indian Railway PM Modi to Inaugurate 4 Modern Railway Stations in Karnataka

Indian Railway | PM Modi To Launch 4 Stations In Karnataka

July 16, 2026
  • Advertise With Us
  • Grievances
  • About Us
  • Contact Us
Tuesday, July 21, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಭೂತದೊಂದಿಗೆ ಮಲೆನಾಡ ಹುಡುಗನ ಪಯಣ: ನಮಸ್ತೆ ಗೋಸ್ಟ್’ನಲ್ಲಿ ‘ಶಿವಮೊಗ್ಗ ಹರೀಶ್’

ಬಿಡುಗಡೆಗೂ ಮುನ್ನವೇ ಸ್ಯಾಂಡಲ್'ವುಡ್'ನಲ್ಲಿ ದಾಖಲೆ ಬರೆದ ಹೊಸಬರ ಚಿತ್ರ

kalpa News by kalpa News
July 12, 2023
in ಶಿವಮೊಗ್ಗ, ಸಿನೆಮಾ
0
ಭೂತದೊಂದಿಗೆ ಮಲೆನಾಡ ಹುಡುಗನ ಪಯಣ: ನಮಸ್ತೆ ಗೋಸ್ಟ್’ನಲ್ಲಿ ‘ಶಿವಮೊಗ್ಗ ಹರೀಶ್’
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |

ಕನ್ನಡ ಚಿತ್ರರಂಗಕ್ಕೆ ಹಲವಾರು ಪ್ರತಿಭೆಗಳನ್ನು ನೀಡಿರುವ ಶಿವಮೊಗ್ಗ ಸ್ಯಾಂಡಲ್’ವುಡ್’ಗಾಗಿ Sandalwood ಕೊಡುಗೆಯಾಗಿ ಕೊಟ್ಟಿರುವ ಮತ್ತೊಂದು ಪ್ರತಿಭೆ `ಶಿವಮೊಗ್ಗ ಹರೀಶ್’.

ಈಗಾಗಲೇ ಚಿತ್ರರಂಗ ಹಾಗೂ ಕಿರುತೆರೆದಯಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಶಿವಮೊಗ್ಗ ಹರೀಶ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ `ನಮಸ್ತೆ ಗೋಸ್ಟ್’ ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಇದು ಬಿಡುಗಡೆಗು ಮುನ್ನವೇ ದಾಖಲೆ ಬರೆದಿರುವುದು ಮಲೆನಾಡಿಗರ ಹೆಮ್ಮಯೂ ಹೌದು.

ಎಸ್… ಹೊಸಬರ ತಂಡವೇ ಸಿದ್ದಪಡಿಸಿರುವ ನಮಸ್ತೆ ಗೋಸ್ಟ್ Namaste Ghost ಚಿತ್ರ ಜುಲೈ 14ರಂದು ತೆರೆಗೆ ಬರಲಿದ್ದು, ಇದಕ್ಕೂ ಮುನ್ನವೇ ರಾಜ್ಯದ 30 ಕಾಲೇಜುಗಳಲ್ಲಿ ಸುಮಾರು 6000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿನೆಮಾ ತೋರಿಸಿ ಸ್ಯಾಂಡಲ್’ವುಡ್’ನಲ್ಲಿ ಹೊಸ ದಾಖಲೆಯನ್ನು ಬರೆದಿದೆ.

ಇದು ಭಯಾನಕ ಮತ್ತು ಹಾಸ್ಯಮಿಶ್ರಿತ ಚಿತ್ರವಾಗಿದೆ. ಇಯರ್’ಫೋನ್ ಬಳಕೆಯಿಂದ ಏನಾಗಬಹುದು ಎಂಬ ಸಂದೇಶ ಕೂಡ ಇದರಲ್ಲಿದೆ. ಯುವಕರನ್ನು ಹೆಚ್ಚಾಗಿ ಇದು ಆಕರ್ಷಿಸುತ್ತದೆ. ಮುಖ್ಯ ಪಾತ್ರದಲ್ಲಿ ನಿರ್ದೇಶಕ ಭರತ್ನಂದಾ, ನಾಯಕಿಯಾಗಿ ವಿದ್ಯಾರಾಜ್ ಕಾಣಿಸಿಕೊಂಡಿದ್ದಾರೆ. ಮುಖ್ಯ ಪಾತ್ರಗಳಲ್ಲಿ ನಾನೂ ಸೇರಿದಂತೆ ಬಾಲರಾಜ್ ವಾಡಿ, ಶಿವಕುರ್ಮಾ ಆರಾಧ್ಯ, ಅಖಿಲೇಶ್ ಮುಂತಾದವರು ನಟಿಸಿದ್ದಾರೆ. ತಂತ್ರಜ್ಞಾನದಲ್ಲೂ ಕೂಡ ಶಿವಮೊಗ್ಗದವರೇ ಹೆಚ್ಚಾಗಿದ್ದು, ರೂಪಾ ಹರೀಶ್ ಪ್ರಸಾದನ ಕೆಲಸ ಮಾಡಿದ್ದಾರೆ ಮಧುಸೂದನ್ ಅವರ ಛಾಯಾಗ್ರಹಣವಿದೆ. ಒಟ್ಟಾರೆ ಸಿನಿಮಾದಲ್ಲಿ ಶೇ.80ರಷ್ಟು ಶಿವಮೊಗ್ಗದವರೇ ಇದ್ದಾರೆ. ಶಿವಮೊಗ್ಗದ ಜನತೆ ಯುವಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು.
-ಶಿವಮೊಗ್ಗ ಹರೀಶ್

ಪೋಸ್ಟರ್ ಮೂಲಕವೇ ಸ್ಯಾಂಡಲ್’ವುಡ್’ನಲ್ಲಿ ಸದ್ದು ಮಾಡಿದ್ದ ನಮಸ್ತೆ ಗೋಸ್ಟ್’ದ ಟ್ರೇಲರ್ ಸಹ ಸಿನಿ ರಸಿಕರ ನಿರೀಕ್ಷೆಯನ್ನು ಹೆಚ್ಚಿಸಿತ್ತು. ಇದರ ಬೆನ್ನಲ್ಲೇ ರಾಜ್ಯದ ಸುಮಾರು ಆರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಿನಿಮಾವನ್ನು ಬಿಡುಗಡೆಗೂ ಮುನ್ನವೇ ತೋರಿಸಿದ್ದು, ಇದೊಂದು ದಾಖಲೆಯೇ ಆಗಿದೆ.
ಸಾಮಾನ್ಯವಾಗಿ ಸಿನಿಮಾ ಬಿಡುಗಡೆ ಅಂದರೆ ಸಹಜವಾಗಿ ಬಿಡುಗಡೆಗೂ ಒಂದು ದಿನ ಮುಂಚಿತವಾಗಿ ಪ್ರೀಮಿಯರ್ ಶೋ ಆಯೋಜಿಸುವುದು ವಾಡಿಕೆ. ಆ ಸಮಯದಲ್ಲಿ ಆಪ್ತರಿಗೆ, ಸಿನಿಮಾ ಸೆಲೆಬ್ರಿಟಿಗಳಿಗೆ ಮತ್ತು ಮಾಧ್ಯಮದವರಿಗೆ ತೋರಿಸುವುದು ರೂಢಿ. ಆದರೆ, ಇಂತಹ ಪ್ರಯತ್ನವೊಂದಕ್ಕೆ ಹೊಸಬರ ಸಿನೆಮಾ ತಂಡ ಕೈ ಹಾಕಿದ್ದು, ಅದರಲ್ಲೂ ಕಾಲೇಜು ವಿದ್ಯಾರ್ಥಿಗಳಿಗೆ ಪ್ರೀಮಿಯರ್ ಶೋ ರೀತಿ ಚಿತ್ರವನ್ನು ತೋರಿಸಿರುವುದು ಮೊದಲು.

ಈ ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜತೆಗೆ ನಿರ್ದೇಶನವನ್ನೂ ಮಾಡಿz್ದÁರೆ ಭರತ್ ನಂದ. ವಿದ್ಯಾ ರಾಜ್ ನಾಯಕಿಯಾಗಿದ್ದು, ಬಾಲ ರಾಜವಾಡಿ, ಶಿವಕುಮಾರ್ ಆರಾಧ್ಯ, ಶಿವಮೊಗ್ಗ ಹರೀಶ್ ಸೇರಿ ಹಲವು ಕಲಾವಿದರು ನಟಿಸಿದ್ದಾರೆ. ಹಾರರ್ ಥ್ರಿಲ್ಲರ್ ಶೈಲಿಯಲ್ಲಿ ತಯಾರಾಗಿರುವ ಈ ಸಿನಿಮಾದ ಕೆಲಸಗಳೆಲ್ಲವೂ ಮುಗಿದಿದ್ದು, ಇನ್ನೇನು ಶೀಘ್ರದಲ್ಲಿ ಪ್ರೇP್ಷÀಕರ ಮುಂದೆ ಬರಲು ಸಿದ್ಧತೆಯಲ್ಲಿದೆ. ರಮೇಶ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಯದುನಂದನ್ ಸಂಗೀತ, ವಿನಯ್ ಕುರ್ಮಾ ಸಂಕಲನ ಈ ಚಿತ್ರಕ್ಕಿದೆ.
ಶಿವಮೊಗ್ಗದ ಪ್ರತಿಭೆ ಹರೀಶ್
ಈಗಾಗಲೇ ಸ್ಯಾಂಡಲ್ ವುಡ್ ಹಾಗೂ ಕಿರುತೆರೆಯಲ್ಲಿ ಹಲವು ಪಾತ್ರಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿರುವ ಶಿವಮೊಗ್ಗ ಹರೀಶ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Also read: ವಿದ್ಯಾರ್ಥಿಗಳಲ್ಲಿ ಮಾದಕ ಪದಾರ್ಥ ಸೇವನೆ, ಗಾಂಜಾ ಬೆಳೆ ನಿಗ್ರಹ ಕುರಿತು ಡಿಸಿ ಹೇಳಿದ ಪ್ರಮುಖ ಅಂಶಗಳಿವು

ರಂಗಭೂಮಿ ಕಲಾವಿದರಾದ ಹರೀಶ್, ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ವಿಷ್ಣು ದಶಾವತಾರದಲ್ಲಿ ಬ್ರಾಹ್ಮಣರಾಗಿ, ರಕ್ಷಾಬಂಧನದಲ್ಲಿ ಭಲ್ಲಾಳನಾಗಿ, ಯಜಮಾನಿಯಲ್ಲಿ ಮಾದೇಶನಾಗಿ, ಗಿಣಿರಾಮದಲ್ಲಿ ವಿನೀತ್ ಆಗಿ, ಸರಸು ಧಾರವಾಹಿಯಲ್ಲಿ ಸಂಜೀವನಾಗಿ ಮನೆಮಾತಾದ ಹರೀಶ್ ಅತ್ಯಂತ ಪ್ರಮುಖವಾಗಿ ಶನಿ ಧಾರವಾಹಿಯಲ್ಲಿ ಕಾಕರಾಜನಾಗಿ ಕನ್ನಡಿಗರ ಮನಗೆದ್ದ ಮಲೆನಾಡ ಪ್ರತಿಭೆ.
ನಮ್ಮ ಮಲೆನಾಡಿನ ಈ ಪ್ರತಿಭೆ ಹರೀಶ್ ಅಭಿನಯಿಸಿರುವ ನಮಸ್ತೆ ಗೋಸ್ಟ್ ಚಿತ್ರ ಜುಲೈ 14ರ ಶುಕ್ರವಾರ ಬಿಡುಗಡೆಯಾಗುತ್ತಿದ್ದು, ಸಿನಿ ರಸಿಕರು ವೀಕ್ಷಿಸುವ ಮೂಲಕ ನಮ್ಮೂರಿನ ಹುಡುಗನನ್ನು ಪ್ರೋತ್ಸಾಹಿಸಿ ಎಂದು ಕಲ್ಪ ಮೀಡಿಯಾ ಹೌಸ್ ವಿನಂತಿಸುತ್ತದೆ.

http://kalpa.news/wp-content/uploads/2023/05/VID-20230516-WA0005-1.mp4

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Kalahamsa Infotech private limited   

 

Tags: KannadaNewsKannadaNewsLiveKannadaNewsOnline ShivamoggaKannadaNewsWebsiteKannadaWebsiteLatestNewsKannadaLocalNewsMalnadNewsNamaste GhostNewsinKannadaNewsKannadasandalwoodShimogaShivamoggaNewsನಮಸ್ತೆ ಗೋಸ್ಟ್ಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್ಸ್ಯಾಂಡಲ್’ವುಡ್
Share199Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ವಿದ್ಯಾರ್ಥಿಗಳಲ್ಲಿ ಮಾದಕ ಪದಾರ್ಥ ಸೇವನೆ, ಗಾಂಜಾ ಬೆಳೆ ನಿಗ್ರಹ ಕುರಿತು ಡಿಸಿ ಹೇಳಿದ ಪ್ರಮುಖ ಅಂಶಗಳಿವು

Next Post

ಆ.5, 6ರಂದು ಶಿವಮೊಗ್ಗ ಓಪನ್ ನಾಲ್ಕನೇ ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿ

kalpa News

kalpa News

Next Post
ಆ.5, 6ರಂದು ಶಿವಮೊಗ್ಗ ಓಪನ್ ನಾಲ್ಕನೇ ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿ

ಆ.5, 6ರಂದು ಶಿವಮೊಗ್ಗ ಓಪನ್ ನಾಲ್ಕನೇ ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿ

Leave a Reply Cancel reply

Your email address will not be published. Required fields are marked *

No Result
View All Result
ABD Maestro Launches 3 Premium Whiskies in Hyderabad
English Articles

ABD Maestro Launches 3 Premium Whiskies in Hyderabad

by kalpa News
July 21, 2026
0

Kalpa Media House  |  Hyderabad  | Hyderabad emerges as a key destination for luxury spirits as AODH, WOODBURNS, and YELLO...

Read moreDetails
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
PM Modi Inaugurates Redeveloped Bantawala Railway Station through Video Conferencing

PM Narendra Modi Inaugurates Redeveloped Bantawala Railway Station through Video Conferencing

July 20, 2026
Indian Railway PM Modi to Inaugurate 4 Modern Railway Stations in Karnataka

Indian Railway | PM Modi To Launch 4 Stations In Karnataka

July 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL