ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಹೊಳೆಬಸ್ಟಾಪ್ ಬಳಿಯಿರುವ ಹೊಸ ಸೇತುವೆಯಿಂದ ಯುವಕನೋರ್ವ ನದಿಗೆ ಹಾರಿದ ಘಟನೆ ನಡೆದಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಕೆಲ ಯುವಕರು ನೀರಿಗೆ ಹಾರಿ ಮುಳುಗುತ್ತಿದ್ದ ಯುವಕನನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.

ಯುವಕನ ರಕ್ಷಣೆಯನ್ನು ಜನ ಕಿಕ್ಕಿರಿದು ನೋಡುತ್ತಿದ್ದ ಪರಿಣಾಮ ಸೇತುವೆಯ ಮೇಲೆ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಇನ್ನಷ್ಟು ಮಾಹಿತಿ ಬರಬೇಕಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















