ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಗರ ರಸ್ತೆ ಆಟೋ ಕಾಂಪ್ಲೆಕ್ಸ್ ಆವರಣದಲ್ಲಿರುವ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳ ವರ ಅಂಧ ಮಕ್ಕಳ ಸಂಗೀತ ವಿದ್ಯಾ ಲಯ ಮತ್ತು ಶ್ರೀ ವೀರೇಶ್ವ ಪುಣ್ಯಾಶ್ರಮ ಉಚಿತ ಸಂಸ್ಕೃತ ಪಾಠಶಾಲೆಯಲ್ಲಿ ಜೂ.29ರ ಸಂಜೆ 6 ಗಂಟೆಗೆ ನಾದಋಷಿ ಗಾಯನ ಕೀರ್ತನ 77ನೇ ಅಮಾವಾಸ್ಯೆಯ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ರಾಜ್ಯ ಪ್ರಶಸ್ತಿ ಪುರಸ್ಕೃತ ಆರ್.ಬಿ. ಸಂಗಮೇಶ್ವರ ಗವಾಯಿಗಳು ಅಧ್ಯಕ್ಷತೆ ವಹಿಸಲಿದ್ದು, ನಗರಸಭೆ ಮಾಜಿ ಸದಸ್ಯೆ ಆಶಾ ಚನ್ನಬಸಪ್ಪ, ಉಪಸ್ಥಿತರಿರುವರು. ನಿಶಾದ್ ಹರ್ಲಾಪುರ, ಮೇಘಾ ಬಸವರಾಜ್‌ರಿಂದ ಗಾಯನ ನಡೆಯಲಿದೆ.
Also read: ಕಾರ್ಮಿಕರ ವಸತಿ ಸಮುಚ್ಚಯ ನಿರ್ಮಾಣಕ್ಕೆ ಅಗತ್ಯ ಅನುದಾನ: ಸಚಿವ ಅರಬೈಲು ಶಿವರಾಮ್ ಹೆಬ್ಬಾರ್
ಹೊನ್ನಾಳಿಯ ರುಕ್ಮಿಣಿ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ. ವೀರಭದ್ರಯ್ಯ ಶಾಸ್ತ್ರಿ, ತುಕಾರಾಮ್ ರಂಗಧೋಳ್, ಸಿದ್ದಣ್ಣ ಬಡಿಗೇರ್, ವೀರಣ್ಣ ಮಾಳೇನಹಳ್ಳಿ, ರಾಮಣ್ಣ ಭಜಂತ್ರಿ ಹಾಗೂ ಉಸ್ತಾದ್ ಹುಮಾಯುನ್ ಹರ್ಲಾಪುರ್ ಬಜನಾ ತಂಡಕ್ಕೆ ಸಾಥ್ ನೀಡಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post