ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಚಾರಣಾಧೀನ ಖೈದಿಯೊಬ್ಬರ ಮೇಲೆ ಆರು ಮಂದಿ ಸಹ ಖೈದಿಗಳು ಹಲ್ಲೆ ನಡೆಸಿದ ಘಟನೆ ಸಮೀಪದ ಸೋಗಾನೆ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ನಾಗರಾಜ್ ಹಲ್ಲೆಗೊಳಗಾದ ವಿಚಾರಣಾಧೀನ ಖೈದಿ. ಹಳೆ ದ್ವೇಷದ ಹಿನ್ನಲೆಯಲ್ಲಿ ಆರು ಮಂದಿ ಸಹ ಖೈದಿಗಳು ಈತನ ಮೇಲೆ ಕಾರಾಗೃಹದಲ್ಲಿಯೇ ಹಲ್ಲೆ ನಡೆಸಿದ್ದಾರೆ. ಸಚಿನ್, ದರ್ಶನ್, ಪರಶುರಾಮ, ಅನಿಲ್‍ಕುಮಾರ್, ವಿಶ್ವನಾಥ, ವಿಶಾಲ್ ಹಲ್ಲೆ ನಡೆಸಿದವರು ಎನ್ನಲಾಗಿದೆ. ಹಲ್ಲೆಯಿಂದ ಗಾಯಗೊಂಡಿದ್ದ ನಾಗರಾಜ್ ಎಂಬಾತನಿಗೆ ಕಾರಾಗೃಹದ ಸಿಬ್ಬಂದಿಗಳು ಚಿಕಿತ್ಸೆ ಕೊಡಿಸಿದ್ದಾರೆ.


ವಿಚಾರಣಾಧೀನ ಖೈದಿ ನಾಗರಾಜ್ ಭದ್ರಾವತಿಯ ಎರಡನೇ ಅಪರ ಸಿಜೆ ಮತ್ತು ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರಾಗಲು ಜೈಲಿನಲ್ಲಿರುವ ವಿಡಿಯೋ ಕಾನ್ಫರೆನ್ಸ್ ಕೊಠಡಿಗೆ ತೆರಳುವ ಸಂದರ್ಭದಲ್ಲಿ ಘಟನೆ ನಡೆದಿದೆ. ಸ್ಥಳದಲ್ಲಿದ್ದ ಕಾರಾಗೃಹ ಸಿಬ್ಬಂದಿಗಳು ತಕ್ಷಣವೇ ಗಲಾಟೆ ತಹಬದಿಗೆ ತಂದಿದ್ದಾರೆ. ಕಾರಾಗೃಹದ ಮುಖ್ಯ ಅಧೀಕ್ಷಕಿ ತುಂಗಾನಗರ ಠಾಣೆಗೆ ದೂರು ನೀಡಿದ್ದಾರೆ.
ಶಿವಮೊಗ್ಗದ ಜೈಲ್ ರಸ್ತೆಯಲ್ಲಿನ ಚಹದಂಗಡಿ ಮಾಲೀಕರೊಬ್ಬರ ಮೇಲೆ ಹಲ್ಲೆ ನಡೆಸಿದ ಹಾಗೂ ಅವರ ವಾಹನ ಸುಟ್ಟ ಪ್ರಕರಣದಲ್ಲಿ ಸಚಿನ್, ದರ್ಶನ್ ಜೈಲು ಸೇರಿದ್ದರು. ಪ್ರಕರಣದ ವಿಚಾರಣೆ ಹಂತದಲ್ಲಿರುವಾಗಲೇ ಜೈಲಿನ ಸಹ ಖೈದಿ ಮೆಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















