ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೇಡಿಯೋ ಶಿವಮೊಗ್ಗ, ರಾಷ್ಟ್ರೀಯ ಶಿಕ್ಷಣ ಸಮಿತಿ ಹಾಗೂ ಸುಬ್ಬಯ್ಯ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪಾಲಕರಿಗೆ ಉಚಿತವಾಗಿ ವಿಶೇಷ ಕಾರ್ಯಾಗಾರವನ್ನು ಫೆ.18 ರ ಭಾನುವಾರ ಬೆಳಗ್ಗೆ 10ಕ್ಕೆ ಎ.ಟಿ.ಎನ್.ಸಿ ಕಾಲೇಜಿನ ಚಂದನ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಪರೀಕ್ಷಾ ಸಮಯದಲ್ಲಿ ಪಾಲಕರು ಹೇಗಿರಬೇಕು? ಕುರಿತು ಮನೋವಿಜ್ಞಾನಿ ಹಾಗೂ ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ದಯಾನಂದ ಸಾಗರ್ ಮಾತನಾಡಲಿದ್ದು, ಆಹಾರ ಕ್ರಮದ ಕುರಿತು ಆಹಾರ ತಜ್ಞರಾದ ನಿರಾಲಿ ಹಾಗೂ ಅರ್ಪಿತಾ ಶೆಟ್ಟಿ ಮಾತನಾಡಲಿದ್ದಾರೆ.
Also read: ಸಿದ್ದರಾಮಯ್ಯ ಬಜೆಟ್ | ಅಲ್ಪಸಂಖ್ಯಾತರಿಗೆ ಬಂಪರ್ | ಮುಸ್ಲೀಮರಿಗೆ ಎಕ್ಸ್ಟ್ರಾ ಬೋನಸ್!
ಕಾರ್ಯಕ್ರಮದಲ್ಲಿ ಭಾಗವಹಿಸಲು ಪೋಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ 7259176279 ಸಂಪರ್ಕಿಸಬಹುಗಾಗಿದೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post