ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೇ 29ರಂದು ಶಿವಮೊಗ್ಗ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅಮ್ ಆದ್ಮಿ ಪಕ್ಷದ ವಲಯ ಸಮಾವೇಶ ಶಿವಮೊಗ್ಗದಲ್ಲಿ ನಡೆಯಲಿದೆ ಎಂದು ಜಿಲ್ಲಾ ಸಂಚಾಲಕ ರವಿಕುಮಾರ್ ಹಾಗೂ ಅಮೃತ್ ರಾಸ್ ತಿಳಿಸಿದ್ದಾರೆ.
ಈ ಕುರಿತಂತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಂದು ಮಧ್ಯಾಹ್ನ ೩.೩೦ಕ್ಕೆ ನಗರದ ಮಿಷನ್ ಕಾಂಪೌಂಡಿನ ಸಂತ ಥಾಮಸ್ ಸಮುದಾಯ ಭವನದಲ್ಲಿ ಸಮಾವೇಶ ನಡೆಯಲಿದೆ ಎಂದು ತಿಳಿಸಿದ್ದಾರೆ.
ಈ ಸಮಾವೇಶಕ್ಕೆ ವೀಕ್ಷಕರಾಗಿ ದೆಹಲಿಯಿಂದ ಪುನೀತ್ ಸಿಂಗ್ ಮತ್ತು ಕರ್ನಾಟಕದ ಮುಖಂಡ, ಹೈಕೋರ್ಟ ವಕೀಲ ಕೆ. ದಿವಾಕರ ಆಗಮಿಸುವರು. ರಾಜ್ಯ ನಾಯಕ ಗೋಪಾಲ ಮಾರ್ಗದರ್ಶನ ನೀಡುವರು. ಈ ಕಾರ್ಯಕ್ರಮದಲ್ಲಿ ಗ್ರಾಮ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದರು.
ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ಚಾಲನೆ ನೀಡಲಾಗುವುದು. ದೆಹಲಿ ಮತ್ತು ಪಂಜಾಬ ಮಾದರಿಯಲಿ ಪಕ್ಷ ಸಂಘಟಿಸುವ ಜವಾಬ್ದಾರಿಯನ್ನು ಕಾರ್ಯಕರ್ತರಿಗೆ ವಹಿಸಲಾಗುವುದು. ಜೊತೆಗೆ ಜನರ ಸಮಸ್ಯೆ ಕೇಳಿ ಅದಕ್ಕೆ ಪರಿಹಾರ ಕಲ್ಪಿಸುವುದು, ಅರ್ಹರಿಗೆ ಸರಕಾರದ ಯೋಜನೆಗ ತಲುಪುವಂತೆ ಮಾಡುವುದು ಗುರಿಯಾಗಿದೆ ಎಂದರು.
Also read: ಅಂಗವಿಕಲ ವಿದ್ಯಾರ್ಥಿನಿಯ ಸಹಾಯಕ್ಕೆ ಮುಂದಾದ ನಟ ಸೋನು ಸೂದ್
ಪಕ್ಷದ ಜಿಲ್ಲಾ ಮಹಿಳಾ ನಾಯಕಿ ನೇತ್ರಾ ಗೌಡ, ವಿವಿಧ ತಾಲೂಕು ಸಂಚಾಲಕರಾದ ಚಂದ್ರಕಾಂತ ರೇವಣರ್ಕ ಶಿಕಾರಿಪುರ, ರಮೇಶ್ ಮೈತ್ರಿ ಭದ್ರಾವತಿ, ಸುರೇಶ್ ಕೋಟೇಕರ ಶಿವಮೊಗ್ಗ, ಮದನ್ ತೀರ್ಥಹಳ್ಳಿ, ಸೋಗೋಡು ಗಣೇಶ್ ಹೊಸನಗರ ಮತ್ತು ಶಿವಮೊಗ್ಗ ಗ್ರಾಮಾಂತರದ ನವಿಲೇಶ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post