Read - 2 minutes
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಎಲ್ಲಾ ಶಿಕ್ಷಣ ತಜ್ಞರ ಜೊತೆ ಚರ್ಚಿಸಿಯೇ ಮಾಡಿದೆ. ಚಿಂತನ ಮಂಥನ ಕೂಡ ನಡೆಸಿದೆ. ಈಗ ವಿರೋಧಿಸುವವರು ಚಿಂತನ ಮಂಥನ ನಡೆಯುವಾಗ ತಮ್ಮ ಅಭಿಪ್ರಾಯವನ್ನು ಏಕೆ ಹೇಳಲಿಲ್ಲ. ಈಗ ಹೇಳುತ್ತಿರುವುದು ಸರಿಯಲ್ಲ. ಯಾಕಾಗಿ ವಿರೋಧ ಮಾಡುತ್ತಿದ್ದಾರೆ ಎಂಬುದೂ ಗೊತ್ತಿಲ್ಲ. ಶಿಕ್ಷಣ ತಜ್ಞರ ಜೊತೆ ಯಾವ ಅಭಿಪ್ರಾಯವನ್ನೂ ಸಂಗ್ರಹಿಸದೆ ರದ್ದುಮಾಡಲು ಹೊರಟಿರುವ ಕ್ರಮ ಖಂಡನೀಯ ಎಂದು ವಿದ್ಯಾರ್ಥಿಗಳು ದೂರಿದರು.
ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಕಾರ್ಯದರ್ಶಿ ಪ್ರೇಮಶ್ರೀ ಜೋಡಿದಾರ್, ಯಶಸ್ವಿನಿ, ರವಿ, ಶರಣ್, ವಿಧಾತ್ರಿ, ರಘು ಮುಂತಾದವರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯಾವುದೇ ಕಾರಣಕ್ಕೂ ಎನ್‍ಇಪಿಯನ್ನು ರದ್ದು ಮಾಡಬಾರದು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ABVP ಇಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸ್ವತಂತ್ರ ಭಾರತದ ಶಿಕ್ಷಣ ಬ್ರಿಟಿಷ್ ವಸಾಹತು ಶಾಲೆ ಶಿಕ್ಷಣ ಪದ್ಧತಿಯ ಮುಂದುವರಿದ ಭಾಗವೇ ಆಗಿದೆ. ಇದೊಂದು ರೀತಿಯ ಗುಲಾಮಗಿರಿಯ ಪಳೆಯುಳಿಕೆಯಂತಾಗಿದೆ. ಈ ಎಲ್ಲವನ್ನು ಗಮನಿಸಿ ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ National Education Policy ರೂಪಿಸಿದೆ. ಆದರೆ ರಾಜ್ಯ ಸರ್ಕಾರ ಇದನ್ನು ಜಾರಿಗೊಳಿಸಲು ಹಿಂದೆಮುಂದೆ ನೋಡುತ್ತಿದೆ. ಅಲ್ಲದೆ ರದ್ದುಗೊಳಿಸಲು ಹೊರಟಿರುವುದು ಖಂಡನೀಯ ಎಂದು ಪ್ರತಿಭಟನಕಾರರು ದೂರಿದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಎಲ್ಲಾ ಶಿಕ್ಷಣ ತಜ್ಞರ ಜೊತೆ ಚರ್ಚಿಸಿಯೇ ಮಾಡಿದೆ. ಚಿಂತನ ಮಂಥನ ಕೂಡ ನಡೆಸಿದೆ. ಈಗ ವಿರೋಧಿಸುವವರು ಚಿಂತನ ಮಂಥನ ನಡೆಯುವಾಗ ತಮ್ಮ ಅಭಿಪ್ರಾಯವನ್ನು ಏಕೆ ಹೇಳಲಿಲ್ಲ. ಈಗ ಹೇಳುತ್ತಿರುವುದು ಸರಿಯಲ್ಲ. ಯಾಕಾಗಿ ವಿರೋಧ ಮಾಡುತ್ತಿದ್ದಾರೆ ಎಂಬುದೂ ಗೊತ್ತಿಲ್ಲ. ಶಿಕ್ಷಣ ತಜ್ಞರ ಜೊತೆ ಯಾವ ಅಭಿಪ್ರಾಯವನ್ನೂ ಸಂಗ್ರಹಿಸದೆ ರದ್ದುಮಾಡಲು ಹೊರಟಿರುವ ಕ್ರಮ ಖಂಡನೀಯ ಎಂದು ವಿದ್ಯಾರ್ಥಿಗಳು ದೂರಿದರು.
Also read: ಗಾಂಧಿ ಪ್ರತಿಮೆ ದ್ವಂಸ ಪ್ರಕರಣ: ಇಬ್ಬರ ಬಂಧನ
ಎನ್‍ಇಪಿ ರದ್ದು ಮಾಡುವುದರಿಂದ ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯ ಕತ್ತಲೆಗೆ ದೂಡಿದಂತಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಎನ್‍ಇಪಿ ರದ್ದುಗೊಳಿಸಬಾರದು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಕಾರ್ಯದರ್ಶಿ ಪ್ರೇಮಶ್ರೀ ಜೋಡಿದಾರ್, ಯಶಸ್ವಿನಿ, ರವಿ, ಶರಣ್, ವಿಧಾತ್ರಿ, ರಘು ಮುಂತಾದವರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Discussion about this post