ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಶ್ರೀ ಅವಿಚ್ಛಿನ್ನ ಪರಂಪರಾ ಕೂಡಲಿ ಶೃಂಗೇರಿ ಮಠದ ಉತ್ತರಾಧಿಕಾರಿ ಸ್ವೀಕಾರ ಕಾರ್ಯಕ್ರಮವು ಆಷಾಢ-ಶುದ್ಧ-ಚತುರ್ಥಿಯ ಜುಲೈ 13ರ ಮಂಗಳವಾರದಂದು ನಡೆಯಿತು.
ಸನ್ಯಾಸ ಸ್ವೀಕರಿಸಿದ ಗುರುಗಳಿಗೆ ಶ್ರೀ ವಿದ್ಯಾ ವಿಶ್ವೇಶ್ವರಭಾರತೀ ಎಂಬುದಾಗಿ ಯೋಗಪಟ್ಟವು ನೀಡಲಾಯಿತು. ಭಕ್ತ ಜನರ ಆಗ್ರಹಾನುಸಾರ ಉತ್ತರಾಯಣದ ಮುಹೂರ್ತದಲ್ಲಿ ತುಂಗಾತೀರ ಸ್ಥಿತ ಶ್ರೀಕ್ಷೇತ್ರ ಶಕಟಪುರದಲ್ಲಿ ವೇದಶಾಸ್ತ್ರ ವಿದ್ವಾಂಸರ ಸಮ್ಮುಖದಲ್ಲಿ ಪರಮಗುರುಗಳ ಬ್ರಹ್ಮೀಭೂತ ಶ್ರೀ ಯೊಗಾಭಿನವ ನೃಸಿಂಹ ಭಾರತಿ ಮಹಾಸ್ವಾಮಿಗಳ ಪೂರ್ವಾದೇಶದ ಅನುಸಾರ, ಶ್ರೀ ವಿದ್ಯಾಭಿನವ ವಿದ್ಯಾಶಂಕರ ಭಾರತೀ ಮಹಾಸ್ವಾಮಿಗಳ ಸಂಕಲ್ಪಾನುಸಾರ ಹಾಗೂ ಮಠದ ಉಪಾಸ್ಯ ದೇವ ವಿದ್ಯಾಶಂಕರರ ದಿವ್ಯಾನುಗ್ರಹದಿಂದ ಸಂನ್ಯಾಸ ಸ್ವೀಕಾರ ಕಾರ್ಯಗಳು ನಿರ್ವಿಘ್ನವಾಗಿ ನಡೆಯಿತು.
ಅದೇ ದಿನ ಪರಮಪೂಜ್ಯ ಶ್ರೀಗಳು ಬೆಂಗಳೂರಿನ ಚಾಮರಾಜಪೇಟೆಯ ಶ್ರೀಮಠದ ಪೀಠವನ್ನು ಅಲಂಕರಿಸಿದರು. ಮಠದಿಂದ ಪ್ರಮಾಣಿಕರಿಸಿದ ಸಮಿತಿಯ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post