ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ಹೆಚ್ಚಾಗುತ್ತಿರುವ ಡೆಂಗ್ಯೂ ಜ್ವರದ ಕುರಿತಂತೆ ಕ್ರಮವಹಿಸಿ, ದಿನನಿತ್ಯ ಫಾಗಿಂಗ್ ವ್ಯವಸ್ಥೆ, ಸ್ಪ್ರೇ ಸಿಂಪಡಣೆ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ಆರೋಗ್ಯ ಅಧಿಕಾಗಳಿಗೆ ಶಾಸಕ ಚನ್ನಬಸಪ್ಪ #MLA Channabasappa ಸೂಚಿಸಿದರು.
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ #Shivamogga Mahanagara Palike ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ, ಅವರು ಮಾತನಾಡಿದರು.
ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ವಿವರ ಹೀಗಿದೆ:
- ಶಿವಮೊಗ್ಗ ನಗರದ ಗೋಪಾಲ, ಬೊಮ್ಮನಕಟ್ಟೆ, ಗಾಡಿಕೊಪ್ಪ ಹಾಗೂ ಸೋಮಿನಿಕೊಪ್ಪದ ಹೊರವಲಯ ಪ್ರದೇಶಗಳಲ್ಲಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ರುದ್ರಭೂಮಿಗೆ ಪ್ರತ್ಯೇಕ ಜಾಗ ಹಾಗೂ ಮೂಲಸೌಕರ್ಯಕ್ಕಾಗಿ ಕ್ರಮ ವಹಿಸುವಂತೆ ಸೂಚಿಸಿದರು.
- ಶಿವಮೊಗ್ಗ ಮಹಾನಗರ ಪಾಲಿಕೆಯ ವ್ಯಾಪ್ತಿಯ ರುದ್ರ ಭೂಮಿಗಳನ್ನು ಅಭಿವೃದ್ಧಿಪಡಿಸಲು ಸೂಚಿಸಿದರು.
- ಶಿವಮೊಗ್ಗ ನಗರದ ಶಿವಪ್ಪ ನಾಯಕ ಪ್ರತಿಮೆಯ ಬಳಿ ಇರುವ ಅಂಡರ್ ಪಾಸ್ ಅನ್ನು ಸಾರ್ವಜನಿಕರ ಉಪಯೋಗಕ್ಕೆ ತೆರೆಯಲು ಸೂಚಿಸಿದರು.
- ಶಿವಮೊಗ್ಗ ನಗರದಲ್ಲಿ ಬೀದಿ ನಾಯಿಗಳಿಂದ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
- ಶಿವಮೊಗ್ಗ ನಗರದ ಗಾಂಧಿ ಬಜಾರ್ ನಲ್ಲಿ ಪ್ರತಿ ಮಂಗಳವಾರ ನಡೆಯುವ ಸಂತೆಯನ್ನು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಬಳಿ ಇರುವ ಸಂತೆ ಮೈದಾನಕ್ಕೆ ಸ್ಥಳಾಂತರಿಸಲು ಆದೇಶಿಸಿದರು.
- ಶಿವಮೊಗ್ಗ ನಗರದ ಹೂವಿನ ಮಾರುಕಟ್ಟೆಯನ್ನು ಬಸ್ ಸ್ಟ್ಯಾಂಡ್ ನಿಂದ ಬಿ.ಹೆಚ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡಕ್ಕೆ ಸ್ಥಳಾಂತರಿಸಲು ಆದೇಶಿಸಿದರು.
Also read: ಹತ್ರಾಸ್ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಲ್ತುಳಿತ: ಸಂಘಟಕರ ವಿರುದ್ಧ ಪ್ರಕರಣ ದಾಖಲು
- ಪೌರಕಾರ್ಮಿಕರ ಭವನ ಮತ್ತು ಪೌರಕಾರ್ಮಿಕರಿಗೆ ನಿರ್ಮಿಸುತ್ತಿರುವ ಮನೆಗಳ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ, ಉದ್ಘಾಟಿಸಲು ಸೂಚಿಸಿದರು.
- ಶಿವಮೊಗ್ಗ ನಗರದಲ್ಲಿರುವ ಬೀದಿ ದೀಪಗಳ ಸಮಸ್ಯೆಗಳ ಕುರಿತು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.
- ನಗರದ ಹೊರವಲಯದಲ್ಲಿರುವ ತಂಬಾಕು ಗೋಡನನ್ನು ಗೋಶಾಲೆಗೆ ನೀಡುವಂತೆ ಸರ್ಕಾರಗೆ ಪ್ರಸ್ತಾವನೆ ಕಳಿಸಲು ಆದೇಶಿಸಿದರು.
- ಎಂಆರ್‌ಎಸ್ ಸರ್ಕಲ್ ನಲ್ಲಿ ಯುದ್ಧ ಟ್ಯಾಂಕರ್ ಸ್ಥಾಪಿಸುವ ಕುರಿತಂತೆ ಚರ್ಚೆ ನಡೆಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post