ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಿಗಂಧೂರು ಸೇತುವೆ #Sigandhuru Bridge ನಿರ್ಮಾಣದ ಮೂಲಕ ಶರಾವತಿ ಮುಳುಗಡೆ ಸಂತ್ರಸ್ಥರ ಏಳು ದಶಕದ ಕನಸು ನನಸಾಗಿದ್ದು, ಕೆಎಸ್‌ಆರ್‌ಟಿಸಿ #KSRTC ಶಿವಮೊಗ್ಗ ವಿಭಾಗವು ಈಗ ಹೆಚ್ಚುವರಿ ಬಸ್ ಸೇವೆಗಳನ್ನು ಒದಗಿಸಲು ಯೋಜಿಸುತ್ತಿದೆ.
ಸಾಗರದ ಅಂಬರಗೋಡ್ಲು ಮತ್ತು ಕಳಸವಳ್ಳಿ ಗ್ರಾಮ ಸಂಪರ್ಕಿಸುವ ಶರಾವತಿ ಹಿನ್ನೀರಿನಲ್ಲಿ #Sharavathi Backwater ನಿರ್ಮಿಸಿದ ಭಾರತದ ಎರಡನೇ ಅತಿದೊಡ್ಡ ಕೇಬಲ್ ಸೇತುವೆ ಉದ್ಘಾಟನೆಯ ನಂತರ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಸಿಗಂದೂರಿಗೆ ತಲುಪಲು ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಕೆಎಸ್‌ಆರ್‌ಟಿಸಿಯ ಶಿವಮೊಗ್ಗ ವಿಭಾಗವು ಈಗ ಹೆಚ್ಚುವರಿ ಬಸ್ ಸೇವೆಗಳನ್ನು ಯೋಜಿಸುತ್ತಿದೆ.

ಇಷ್ಟು ವರ್ಷಗಳ ಕಾಲ ರಾತ್ರಿಯ ಸಮಯದಲ್ಲಿ ಲಾಂಚ್ ಪ್ರಯಾಣ ಸೇವೆ ಇಲ್ಲದ ಕಾರಣಕ್ಕೆ ಸಂಜೆ 7.30 ರವರೆಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈಗ ಸೇತುವೆಯಾದ ನಂತರ ರಾತ್ರಿ 9 ಗಂಟೆಯವರೆಗೂ ಚೌಡೇಶ್ವರಿ ತಾಯಿ ದರ್ಶನಕ್ಕೆ ದೇವಸ್ಥಾನ ಆಡಳಿತ ಮಂಡಳಿ ಅವಕಾಶ ಕಲ್ಪಿಸಿಕೊಟ್ಚಿದೆ. ಭಕ್ತರು ಇದರ ಉಪಯೋಗ ಪಡೆಯಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post