ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಗವಂತನನ್ನು ಶ್ರದ್ಧೆಯಿಂದ ಆರಾಧಿಸಿದರೆ ಮಾತ್ರ ಸಾಕ್ಷತ್ಕಾರ ಸಾಧ್ಯ ಎಂದು ಶೃಂಗೇರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು #Vidhushekara Bharathi Shri of Shringeri Mutt ತಿಳಿಸಿದರು.
ಅವರು ಇಲ್ಲಿಯ ಶ್ರೀಶಂಕರ ಮಠ ಹಾಗೂ ಶ್ರೀಶಂಕರ ತತ್ವ ಪ್ರಸಾರ ಸಮಿತಿಗಳು ಜಂಟಿಯಾಗಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಭಗವಂತನನ್ನು ಆಶ್ರಯಿಸಿದ ಭಕ್ತರಿಗೆ ಅನುಗ್ರಹ ದೊರೆಯುತ್ತದೆ. ಭಗವಂತನ ನಾಮ ಸಂಕೀರ್ತನದಲ್ಲಿ ಅನೇಕ ವೈಶಿಷ್ಟ್ಯಗಳಿವೆ. ಮನುಷ್ಯ ಜೀವನ ಬೇಡದೆ ಹೋದ ಮಾತುಗಳ ಜಾಗದಲ್ಲಿ ಭಗವಂತನ ನಾಮ ಸ್ಮರಣೆ ಮಾಡಿದರೆ ಜೀವನ ಸಾಫಲ್ಯವಾಗುತ್ತದೆ ಎಂದು ಹೇಳಿದರು.
Also read: ಬಾಲಿವುಡ್’ಗೆ ಕನ್ನಡತಿ ಶ್ರೀಲೀಲಾ | ಚಾನ್ಸ್ ಹಿನ್ನೆಲೆ ತಿರುಪತಿ ತಿಮ್ಮಪ್ಪನ ದರ್ಶನ, ವಿಶೇಷ ಪೂಜೆ
ಮನುಷ್ಯ ಯಾವಾಗಲೂ ಸತ್ಸಂಗದಲ್ಲಿರಬೇಕು. ಸತ್ಪುರುಷರ ಸಹವಾಸದಲ್ಲಿರಬೇಕು. ಅಂದಾಗ ಅವರ ಗುಣಗಳು ಇವರಲ್ಲಿ ಬರುತ್ತದೆ. ಆದ್ದರಿಂದ ಸತ್ಪುಷರಾಗಿ ಜೀವನ ಸಾಗಿಸಬೇಕು ಎಂದು ಕಿವಿ ಮಾತುಹೇಳಿದರು.
ಆದಿಶಂಕರ ಭಗವತ್ಪಾದಾಚಾರ್ಯರು ನೀಡಿದ ಉಪದೇಶಗಳನ್ನು ಅಳವಡಿಸಿಕೊಳ್ಳುವುದರಿಂದ ಮನುಷ್ಯ ತನ್ನ ಜೀವನವನ್ನು ಸಾರ್ಥಕ ಮಾಡಿಕೊಳ್ಳಬಹುದು. ಮನುಷ್ಯ ನಿಷ್ಕಾಮವಾಗಿ ಪ್ರತಿನಿತ್ಯ ಭಗವಂತನ ಆರಾಧನೆ ಮಾಡಬೇಕು. ಪ್ರತಿಯೊಬ್ಬರು ಶ್ರೀಶಂಕರ ಸ್ತೂತ್ರಗಳನ್ನು ಪಠಿಸಬೇಕು. ಮಕ್ಕಳು ಚಿಕ್ಕವರಿದ್ದಾಗಲೇ ಅವರ ಜೀವನ ವಿಕಾಸಕ್ಕಾಗಿ ಆಧ್ಯಾತ್ಮ ವಿಚಾರವನ್ನು ಹೇಳಿಕೊಡಬೇಕು ಎಂದು ಸಲಹೆ ನೀಡಿದರು.
ಮನುಷ್ಯ ಆಳವಾದ ಜ್ಞಾನ ಹೊಂದಿರಬೇಕು. ಯಾವುದೇ ಸಂದರ್ಭದಲ್ಲೂ ಅದನ್ನು ಎದುರಿಸಲು ಸಾಮರ್ಥ್ಯ ಹೊಂದುತ್ತಾನೆ. ನಮ್ಮ ಧರ್ಮದ ಬಗ್ಗೆ ನಮಗೆ ಅಭಿಮಾನ ಇರಬೇಕು. ಈಗ ನಮ್ಮ ಧರ್ಮದ ಬಗ್ಗೆಯೇ ಸಂದೇಹ ಉಂಟಾಗುವಂತಾಗಿದೆ ಇದನ್ನು ಹೋಗಲಾಡಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಇದಕ್ಕೂ ಮುನ್ನ ಶ್ರೀಶಂಕರ ವತಿಯಿಂದ ಶ್ರೀಗಳಿಗೆ ಭಕ್ತಿ ಸಮರ್ಪಣೆಯನ್ನು ಅರ್ಪಿಸಲಾಯಿತು. ಶಿವಮೊಗ್ಗದ ಎಲ್ಲಾ ಶ್ರೀ ಶಾರದಾ ಶಂಕರ ಭಜನಾ ಮಂಡಳಿಗಳಿಂದ ಶ್ರೀ ಶಂಕರ ಭಗವತ್ಪಾದ ವಿರಚಿತ ‘ಕಲ್ಯಾಣವೃಷ್ಟಿಸ್ತವ ಸ್ತೋತ್ರ, ಶಿವಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರ ಹಾಗೂ ಶ್ರೀ ಲಕ್ಷ್ಮೀ ನೃಸಿಂಹ ಕರುಣಾರಸ ಸ್ತೋತ್ರಗಳ ಮಹಾ ಸಮರ್ಪಣೆ ನಡೆಯಿತು.
ಶ್ರೀಶಂಕರಮಠದ ಧರ್ಮಾಧಿಕಾರಿ ಡಾ.ಪಿ.ನಾರಾಯಣ, ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಟರಾಜ ಭಾಗವತ್, ಪ್ರೊ. ವೆಂಕಟೇಶಮೂರ್ತಿ, ಶಿವಶಂಕರ್ ಮೊದಲಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post