ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಧಿಕ ಮಾಸದ Adhikamasa ಪುಣ್ಯಕಾಲದ ಅಂಗವಾಗಿ ಗುರುಭಕ್ತರಿಗೆ ಆಧ್ಯಾತ್ಮಿಕ ರಸದೌತಣ ನೀಡುವ ಉದ್ದೇಶದಿಂದ ನಗರದ ರವೀಂದ್ರನಗರದಲ್ಲಿರುವ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಇದೇ ತಿಂಗಳ 5ರಿಂದ 11ರವರೆಗೆ ಪ್ರತಿದಿನ ಸಂಜೆ 6.30ರಿಂದ 8ರವರೆಗೆ ವಿಶೇಷ ಪ್ರವಚನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಪ್ರವಚನ ಮಾಲಿಕೆಯಲ್ಲಿ ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳವರ ಜೀವನದ ಅಪರೂಪದ ಸನ್ನಿವೇಶಗಳನ್ನು ಒಳಗೊಂಡ ಸಮಗ್ರ ಚರಿತ್ರೆಯನ್ನು ಶ್ರವಣ ಮಾಡುವ ಅವಕಾಶ ಭಕ್ತರಿಗೆ ಲಭಿಸಲಿದೆ.
ಹೊಸಪೇಟೆಯ ಚಿಂತಾಮಣಿ ಮಠದ Chinthamani Mutt of Hosapete 31ನೇ ಪೀಠಾಧಿಪತಿಗಳಾದ ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳವರು ದಿವ್ಯ ಸಾನ್ನಿಧ್ಯ ವಹಿಸಿ ಸಪ್ತಾಹದ ಪ್ರವಚನ ನೀಡಲಿದ್ದಾರೆ.
Also read: ನೈಋತ್ಯ ರೈಲ್ವೆಯಲ್ಲಿ ವಂಚಿಸುತ್ತಿದ್ದ ನಕಲಿ ಟಿಟಿಇ ಶಿವಮೊಗ್ಗದ ರಕೀಬುದ್ದೀನ್ ಬಂಧನ
ಪವಾಡ ಪುರುಷರು, ಸಂತರು, ಮಹಾತ್ಮರು, ಶ್ರೇಷ್ಠ ಗುರುಗಳು, ಅವದೂತರು ಎಂಬ ಹಲವು ಬಿರುದುಗಳಿಂದ ಪ್ರಸಿದ್ಧರಾದ ಶ್ರೀ ಶ್ರೀಧರ ಸ್ವಾಮಿಗಳವರ ಜೀವನ, ಸಾಧನೆ ಹಾಗೂ ಸಾರ್ಥಕತೆಯ ಕುರಿತು ಈ ಕಾರ್ಯಕ್ರಮದಲ್ಲಿ ವಿಶದವಾಗಿ ವಿವರಣೆ ನೀಡಲಾಗುತ್ತದೆ.
ಈ ಕಾರ್ಯಕ್ರಮವನ್ನು ಶಿವಮೊಗ್ಗದ ಶ್ರೀ ಶ್ರೀಧರ ಸೇವಾ ಸಮಿತಿ, ಅರ್ಚಕ ವೃಂದ ಹಾಗೂ ವಿವಿಧ ಸಂಘ ಸಂಸ್ಥೆಗಳು ಮತ್ತು ಗುರುಭಕ್ತರು ಸೇರಿ ಭಕ್ತಿಭಾವದಿಂದ ಆಯೋಜಿಸುತ್ತಿದ್ದಾರೆ.
ಶಿವಮೊಗ್ಗದ ಗುರುಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಗುರುಗಳ ಚರಿತ್ರೆ ಶ್ರವಣ ಮಾಡುವ ಮೂಲಕ ಪುಣ್ಯವನ್ನು ಸಂಪಾದಿಸಬೇಕು ಎಂದು ಸಮಿತಿ ಮನವಿ ಮಾಡಿಕೊಂಡಿದೆ.
ಹೆಚ್ಚಿನ ಮಾಹಿತಿಗಾಗಿ ಜಿ. ಅರುಣ್ ಕುಮಾರ್ (ಮೊ. 98444 44820) ಅವರನ್ನು ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















