ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಡಳಿತ ಮಂಡಳಿಯ ಸದಸ್ಯರ ಸಹಕಾರ, ಸಲಹೆ ಹಾಗೂ ಮಾಜಿ ಅಧ್ಯಕ್ಷರ ಮಾರ್ಗದರ್ಶನ ಸಾಧನೆಗೆ ಸಹಕಾರಿಯಾಗಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್. ವಾಸುದೇವ್ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋಕ್ಯಾಸ್ಟ್ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಮೂರು ವರ್ಷದ ಅಧ್ಯಕ್ಷ ಅವಧಿಯಲ್ಲಿ ತುಂಬಾ ವಿಶೇಷ ಕಾರ್ಯಕ್ರಮಗಳನ್ನು ಹಾಗೂ ಸಮಾಜಮುಖಿಯಾಗಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಆಹಾರ ಕಿಟ್‌ಗಳನ್ನು ಅತ್ಯಂತ ಕಷ್ಟದಲ್ಲಿ ಇರುವವರಿಗೆ ವಿತರಿಸುವ ಕೆಲಸ ಸಂಘದ ವತಿಯಿಂದ ಮಾಡಲಾಯಿತು. ಮೈಸೂರು ಮಹಾರಾಜರೊಂದಿಗೆ ಮಾಡಿದ ಸಂಸ್ಥಾಪನಾ ದಿನಾಚರಣೆ, ಜಿಎಸ್‌ಟಿ ಮತ್ತು ತೆರಿಗೆ ಕಾರ್ಯಾಗಾರಗಳನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಹೆಸರು ರಾಜ್ಯಮಟ್ಟದಲ್ಲಿ ಹೆಸರು ಗಳಿಸಿದೆ ಎಂದರು.
ಸೇವೆ ನಮ್ಮನ್ನು ಸದಾ ಕಾಪಾಡುತ್ತದೆ. ಸಂಘ ಸಂಸ್ಥೆಗಳಲ್ಲಿ ಇದ್ದಾಗ ಹಣದ ಜತೆ ಸಮಯವು ಕೂಡ ವ್ಯರ್ಥ ಆಗುತ್ತದೆ. ಆದರೆ ನಮ್ಮ ಜನ್ಮ ಸಾರ್ಥಕ ಆಗಬೇಕಾದರೆ ನಾವು ಸಮಾಜದ ಋಣ ತೀರಿಸುವ ಕಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ವಾಣಿಜ್ಯ ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರು ಅಧ್ಯಕ್ಷರನ್ನು ಸನ್ಮಾನಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಜೆ.ಆರ್. ವಾಸುದೇವ್ ಅವರ ಸೇವೆಯನ್ನು ಸದಸ್ಯರು ಕೊಂಡಾಡಿದರು. ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಾಜ್ಯದಲ್ಲಿಯೇ ಮಾದರಿ ಸಂಸ್ಥೆಯಾಗಿ ತನ್ನ ಕೊಡುಗೆಯನ್ನು ಮುಂದುವರೆಸಬೇಕು ಎಂದು ಆಶಿಸಿದರು.
ಸಮಾರಂಭದಲ್ಲಿ ಮಾಜಿ ಅಧ್ಯಕ್ಷ ಡಿ.ಎಂ. ಶಂಕರಪ್ಪ, ಉಪಾಧ್ಯಕ್ಷ ಪಿ. ರುದ್ರೇಶ್, ಎಸ್.ಎಸ್. ಉದಯ್‌ಕುಮಾರ್, ಕೆ.ವಿ. ವಸಂತ್‌ಕುಮಾರ್, ಕಾರ್ಯದರ್ಶಿ ಬಿ.ಆರ್. ಸಂತೋಷ್, ಗೋಪಿನಾಥ್, ಮಧುಸೂದನ್ ಐತಾಳ್, ಎಂ. ರಾಜು, ಮಥುರಾ ಗೋಪಿನಾಥ್, ಜಿ. ವಿಜಯ್‌ಕುಮಾರ್, ವಸಂತ್, ಸುಕುಮಾರ್, ಸಂದೀಪ್, ಜಗನ್ನಾಥ್, ಜಿ.ಎನ್.ಪ್ರಕಾಶ್, ಪ್ರತಾಪ್, ಲಕ್ಷ್ಮೀ ಕಾಂತ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post