ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಶ್ವ ಪ್ರಸಿದ್ಧ ಜೋಗ ಜಲಪಾತದ ಸೌಂದರ್ಯವನ್ನು ನೋಡಬೇಕು ಎಂದು ಸ್ವತಃ ರಾಜ್ಯಪಾಲರಿಗೂ ಹಂಬಲವಿದ್ದ ಕಾರಣ ಕಾರ್ಯಕ್ರಮದ ನಿಮಿತ್ತ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅವರು ಜಲಪಾತದ ವೀಕ್ಷಣೆಗಾಗಿಯೇ ಬ್ರಿಟೀಷ್ ಬಂಗ್ಲೋದಲ್ಲಿ ವಾಸ್ತವ್ಯ ಹೂಡಿದ್ದರು.
ರಾಜ್ಯಪಾಲರು ಜಲಪಾತ ವೀಕ್ಷಿಸುವ ಸಂದರ್ಭದಲ್ಲಿ ಹೆಚ್ಚಿನ ನೀರು ಇರಬೇಕು ಎಂಬ ಆಕಾಂಕ್ಷೆಯಿಂದ ಬತ್ತಿ ಹೋಗಿದ್ದ ಜಲಪಾತವನ್ನು ಸುಂದರವಾಗಿಸಲು ಕೆಪಿಸಿಯಿಂದ ನೀರು ಬಿಡಲಾಗಿತ್ತು. ಆದರೆ ರಾಜ್ಯಪಾಲರು ಜಲಪಾತ ವೀಕ್ಷಿಸುವ ವೇಳೆ ಕೆಪಿಸಿಯವರು ಅಂದುಕೊಂಡಂತೆ ಜಲಪಾತಕ್ಕೆ ನೀರು ಬರಲೇ ಇಲ್ಲ. ಅಲ್ಪ ಸ್ಪಲ್ಪ ಇದ್ದ ನೀರನ್ನು ನೋಡಿ ಅದರಲ್ಲಿಯೇ ಫೋಟೋಗೆ ಫೋಸು ನೀಡಿ ರಾಜ್ಯಪಾಲರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.
ರಾಜ್ಯಪಾಲರು ಹಿಂದಿರುಗಿದ ಎರಡು ತಾಸಿನ ನಂತರ ಜೋಗ ಜಲಪಾತ ಮೈ ದುಂಬಿ ಹರಿಯತೊಡಗಿತು. ರಾಜ್ಯಪಾಲರನ್ನು ಖುಷಿ ಪಡಿಸಲು ಬಿಟ್ಟ ನೀರು ಜಲಪಾತ ವೀಕ್ಷಣೆಗೆ ಬಂದ ಸಾಮಾನ್ಯ ಪ್ರವಾಸಿಗರನ್ನು ರಂಜಿಸುವಂತಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post