No Result
View All Result
11-Year-Old Mysuru Girl Writes Children's Ramayana in Just 15 Days
English Articles

11-Year-Old Mysuru Girl Writes Children’s Ramayana in Just 15 Days

by kalpa News
July 27, 2026
1

Kalpa Media House  |  Mysuru  | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
  • Advertise With Us
  • Grievances
  • About Us
  • Contact Us
Wednesday, July 29, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

130ಕ್ಕೂ ಅಧಿಕ ಸ್ಥಾನ ಗಳಿಸಿ ಬಿಜೆಪಿ ಮತ್ತೆ ಅಧಿಕಾರಕ್ಕೆ: ಸಂಸದ ತೇಜಸ್ಷಿ ಸೂರ್ಯ ಭವಿಷ್ಯ

ಬಿಜೆಪಿ ಯುವ ಮೋರ್ಚಾ ಶಿವಮೊಗ್ಗ ವತಿಯಿಂದ ಯುವ ಸಂಕಲ್ಪ ಸಮಾವೇಶ

kalpa News by kalpa News
March 11, 2023
in ಶಿವಮೊಗ್ಗ
0
130ಕ್ಕೂ ಅಧಿಕ ಸ್ಥಾನ ಗಳಿಸಿ ಬಿಜೆಪಿ ಮತ್ತೆ ಅಧಿಕಾರಕ್ಕೆ: ಸಂಸದ ತೇಜಸ್ಷಿ ಸೂರ್ಯ ಭವಿಷ್ಯ
Share on FacebookShare on TwitterShare on WhatsApp
ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |
ಸೇವೆಯೇ ಸಂಘಟನೆ ಎಂಬ ಆಧಾರದ ಮೇಲೆ ಬಿಜೆಪಿ ಯುವಮೋರ್ಚಾ ಕಾರ್ಯಮಾಡುತ್ತಿದ್ದು, ಚುನಾವಣೆ ಹತ್ತಿರ ಬಂದಾಗ ಪಂಚರತ್ನ ಎಂದು ಓಡುವ ಪಾರ್ಟಿ ಬಿಜೆಪಿ ಅಲ್ಲ. ಪಂಚವರ್ಷಗಳಿಂದಲೂ ಸಾಮಾಜಿಕ, ಅಭಿವೃದ್ಧಿ ಮಾಡುವ ಪಕ್ಷ ಬಿಜೆಪಿಯಾಗಿದ್ದು, ಜಿಲ್ಲೆಯ 7 ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ 130ಕ್ಕೂ ಅಧಿಕ ಸ್ಥಾನ ಪಡೆಯುವುದರ ಮೂಲಕ ಮತ್ತೆ ಬಿಜೆಪಿ ಅಧಿಕಾರಕ್ಕೇರಲಿದೆ ಎಂದು ರಾಷ್ಟ್ರೀಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಅವರು ಇಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಯುವ ಮೋರ್ಚಾ ಶಿವಮೊಗ್ಗ ವತಿಯಿಂದ ಹಮ್ಮಿಕೊಂಡಿದ್ದ ಯುವ ಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಬೇರೆ ಪಕ್ಷಗಳು ಚುನಾವಣೆಗೆ 2 ತಿಂಗಳು ಇರುವಾಗ ಸುಣ್ಣ ಬಣ್ಣ ಹೊಡೆದು ಒಟ್ಟಾಗುತ್ತವೆ. ಆದರೆ ಬಿಜೆಪಿ ಚುನಾವಣೆ ಇರಲಿ ಬಿಡಲಿ ಜನರ ಮಧ್ಯೆ ಹೋಗಿ ಜನಪರ ಕೆಲಸವನ್ನು ಮಾಡುತ್ತಾ ಇರುತ್ತದೆ. ರಾಜ್ಯದ ಯಾವ ತಾಲ್ಲೂಕಿಗೆ ಹೋದರು ಡಬಲ್ ಇಂಜಿನ್ ಸರ್ಕಾರದಿಂದ ಹಿಂದೆಂದೂ ಕಾಣದ ಅಭಿವೃದ್ಧಿಯಾಗಿದೆ ಎಂದು ಯುವಕರು ಮತದಾರರು ಹೇಳುತ್ತಾರೆ. ಸ್ವಾತಂತ್ರ್ಯ ಬಂದು 70 ವರ್ಷಗಳಲ್ಲಿ ಆಗದ ಅಭಿವೃದ್ಧಿಯನ್ನು ಕೇವಲ 8 ವರ್ಷದಲ್ಲಿ ಮೋದಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡುತ್ತಾ ಬಂದಿದೆ ಎಂದರು.

ರಸ್ತೆ, ರೈಲ್ವೆ, ವಿಮಾನ ಸೇರಿದಂತೆ ಎಲ್ಲಾ ಸಂಪರ್ಕ ಕ್ರಾಂತಿಯನ್ನು ಮಾಡಿ ಭಾರತ್ ಜೋಡೊ ಮಾಡಿದ ಹೆಗ್ಗಳಿಕೆ ಬಿಜೆಪಿ ಸರ್ಕಾರದ್ದು, ದೇಶದಲ್ಲೇ ಅತೀ ಹೆಚ್ಚು ವಿಮಾನ ನಿಲ್ದಾಣ ಕರ್ನಾಟಕದಲ್ಲಿ ಆಗುತ್ತಿದೆ. ರೈತರಿಗೆ ಕೇಂದ್ರದ 6 ಸಾವಿರ ಮತ್ತು ರಾಜ್ಯದ 4 ಸಾವಿರ ಸೇರಿಸಿ ನೀಡಿದ ಮೊಟ್ಟ ಮೊದಲ ರಾಜ್ಯ ಕರ್ನಾಟಕ. ನಾಳೆ ಪ್ರಧಾನಿ ಮೋದಿಯವರು ಮೈಸೂರು, ಬೆಂಗಳೂರು, ರಾಷ್ಟ್ರೀಯ ಹೆದ್ದಾರಿ ಲೋಕಾರ್ಪಣೆಗೆ ಬರುತ್ತಿದ್ದು, ಜೆಡಿಎಸ್, ಕಾಂಗ್ರೆಸ್‌ನವರು ಅದು ನಮ್ಮ ಕನಸು ಎಂದು ಹೇಳುತ್ತಿದ್ದಾರೆ. ಆ 2 ಪಕ್ಷಗಳು ಕನಸು ಕಾಣುತ್ತಿದ್ದಾರೆ. ನನಸು ಮಾಡಿದ್ದು, ಬಿಜೆಪಿ ಶಂಕು ಸ್ಥಾಪನೆಯನ್ನು ಮಾಡಿ ಲೋಕಾರ್ಪಣೆಯನ್ನು ಮಾಡುವ ಸರ್ಕಾರವಿದ್ದರೆ ಅದು ಬಿಜೆಪಿ ಸರ್ಕಾರ. 1976ರಲ್ಲಿ ಶಂಕು ಸ್ಥಾಪನೆ ಮಾಡಿದ ಹೆದ್ದಾರಿಗಳು 2016ರ ವರೆಗೆ ಪೂರ್ಣಗೊಳ್ಳದೆ ಕುಂಟುತ್ತಾ ಸಾಗಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ 3ಲಕ್ಷ ಕಿ.ಮೀ. ಹೆದ್ದಾರಿ ನಿರ್ಮಾಣವಾಗಿದೆ ಎಂದರು.
ಮಳೆ ಬರುವ ಮೊದಲು ಮೋಡ ಕಾಣುವಂತೆ ಕಾಂಗ್ರೆಸ್‌ಗೆ ಸೋಲಿನ ಭಯದ ಮುನ್ಸೂಚನೆ ಸಿಕ್ಕಿದೆ. ಅದಕ್ಕಾಗಿಯೇ ಇವಿಯಂ ಸರಿಯಿಲ್ಲ ಎಂದು ಹೊಸರಾಗ ಶುರುಮಾಡಿದ್ದಾರೆ. ಸೋಲು ಬರುವುದು ಇವಿಯಂನಿಂದಲ್ಲ. ಮತದಾರರ ನಿರ್ಧಾರದಿಂದ ಎಂಬುದನ್ನು ಕಾಂಗ್ರೆಸ್ಸಿನವರು ತಿಳಿಯಬೇಕು. ಇಡೀ ರಾಜ್ಯದಲ್ಲಿ ವಾತಾವರಣ ನಮ್ಮ ಪರವಾಗಿದೆ. ಯುವಮೋರ್ಚಾ ನಿರಂತರವಾಗಿ ಪಕ್ಷದ ಕೆಲಸ ಕಾರ್ಯಗಳಲ್ಲಿ ತೊಡಗಿಸಬೇಕು ಎಂದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಮಾತನಾಡಿ, ಎಲ್ಲಾ ಮೋರ್ಚಾಗಳು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಮಾವೇಶ ಮಾಡಿ ಡಬಲ್ ಇಂಜಿನ್ ಸರ್ಕಾರದ ಸಾಧನೆಯನ್ನು ಮನೆ ಮನೆಗೆ ಮುಟ್ಟಿಸಬೇಕು. ನಮ್ಮ ಕರ್ತವ್ಯ ಶುರುವಾಗುವುದು ಇನ್ನು ಮೇಲೆ. ಪಕ್ಷ ಅಧಿಕಾರಕ್ಕೆ ಬರಲು ಮಾನದಂಡ ಯಾವುದೆಂದರೆ ಯುವಮೋರ್ಚಾದ ಉತ್ಸಾಹ. 100 ಸಧೃಢ ಯುವಕರನ್ನು ನೀಡಿ ಬಲಿಷ್ಠ ಭಾರತ ಕಟ್ಟುತ್ತೇನೆ ಎಂದು ವಿವೇಕಾನಂದರು ಹೇಳಿದ್ದರು. ಅತಿ ಹೆಚ್ಚು ಯುವಕರಿರುವ ಭಾರತದಲ್ಲಿ ದೇಶ ಕಟ್ಟುವ ಕೆಲಸಕ್ಕೆ ಯುವಕರು ಮುಂದಾಗಬೇಕು ಎಂದರು.
ಮೋದಿಯವರಂತಹ ರಾಜಕೀಯ ಮುತ್ಸದ್ದಿಗಳು ಮಾತ್ರ ಮುಂದಿನ ಪೀಳಿಗೆಗಳ ಬಗ್ಗೆ ಯೋಚನೆ ಮಾಡಿ ಯುವಶಕ್ತಿಗೆ ಭರವಸೆ ನೀಡಿದ್ದಾರೆ. ಆರ್ಟಿಕಲ್ 370 ಕಾಂಗ್ರೆಸ್ ಪಕ್ಷದ ಪಾಪದ ಕೂಸಾಗಿದ್ದು, ಲಕ್ಷಾಂತರ ಯೋಧರನ್ನು ಬಲಿತೆಗೆದುಕೊಂಡಿತ್ತು. ಆದರೆ ಮೋದಿ ಸರ್ಕಾರ ಕಾಶ್ಮೀರದಲ್ಲಿ ಆರ್ಟಿಕಲ್ 370 ಬುಡ ಸಮೇತ ಕಿತ್ತುಹಾಕಿದೆ. ಈಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಾಲ್‌ಚೌಕದಲ್ಲಿ ಭಾರತ ಧ್ವಜ ಹಾರಿಸಿ ಭಾರತ್ ಜೋಡೊ ಸಂಭ್ರಮದಲ್ಲಿದ್ದಾರೆ. ಅದಕ್ಕೆ ಶಕ್ತಿ ನೀಡಿದ್ದು ನರೇಂದ್ರ ಮೋದಿ. ಐಐಟಿಗಳನ್ನು ಸ್ಥಾಪಿಸಿ ಹೊಸ ಶಿಕ್ಷಣ ನೀತಿಗಳ ಮೂಲಕ ಯುವಕರ ಪರವಾದ ಚಿಂತನೆಯನ್ನು ಮಾಡಿ ಅನೇಕ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಮಾಡಿದೆ. ರಾಜ್ಯದಲ್ಲಿ ಇದರ ಫಲವಾಗಿ 8ರಿಂದ 10 ಲಕ್ಷ ಗ್ಲೋಬಲ್ ಇನ್‌ವೆಸ್ಟ್‌ಮೆಂಟ್ ಒಡಂಬಡಿಕೆಯಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಲಕ್ಷಾಂತರ ಯುವಕರಿಗೆ ಉದ್ಯೋಗ ಸಿಗಲಿದೆ. ಆರುವ ದೀಪ ಜೋರಾಗಿ ಉರಿಯುತ್ತದೆ ಎಂಬಂತೆ ಕಾಂಗ್ರೆಸ್ಸಿಗರು ರಾಹುಲ್‌ಗಾಂಧಿ ಪ್ರಧಾನಿಯಾಗುವ ಹಗಲು ಕನಸು ಕಾಣುತ್ತಿದ್ಧಾರೆ. ಬುಡ ಸಮೇತ ಕಾಂಗ್ರೆಸ್‌ನ್ನು ಕಿತ್ತು ಹಾಕುವ ಕೆಲಸ ಜನ ಮಾಡುತ್ತಿದ್ದಾರೆ. ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ. ತ್ರಿಬಲ್ ತಲಾಖ್ ಹೊಡೆದುಹಾಕಿ ಮಹಿಳೆಗೆ ಸಮಾನ ಹಕ್ಕು ನೀಡಿ ಸ್ವಾಭಿಮಾನದ ಬದುಕನ್ನು ಕೊಟ್ಟಿದ್ದು ಮೋದಿ ಸರ್ಕಾರ ಎಂದರು.
ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಿ ಯುವಕರನ್ನು ಅವಿದ್ಯಾವಂತರನ್ನಾಗಿಸಿ ಬಡವರನ್ನು ಬಡವರಾಗಿಯೇ ಇರುವಂತೆ ಮಾಡಿದ್ದು ಮತ್ತು ಇಡೀ ದೇಶವನ್ನೇ ಕೊಳ್ಳೆಹೊಡೆದಿದ್ದು, ಕಾಂಗ್ರೆಸ್ ಸಾಧನೆ ಅವರಿಂದ ನಾವು ನೈತಿಕತೆಯ ಪಾಠ ಕಲಿಯುವ ಅವಶ್ಯಕತೆಯಿಲ್ಲ ಎಂದರು.

ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಡಾ.ಸಂದೀಪ್ ಕುಮಾರ್ ಮಾತನಾಡಿ, ಎಲ್ಲಾ ಮೂಲಭೂತ ಸೌಲಭ್ಯಗಳನ್ನು ನೀಡಿ ಅಭಿವೃದ್ಧಿ ಮಾಡಿದ ಸರ್ಕಾರ ಬಿಜೆಪಿಯದ್ದು, 70 ವರ್ಷಗಳಲ್ಲಿ ಆಗದ ಅಭಿವೃದ್ಧಿ ಕೇವಲ 8 ವರ್ಷಗಳಲ್ಲಿ ಆಗಿದೆ. ಯಾರು ಕುಂಕುಮ ಕೇಸರಿ ಕಂಡರೆ ಅಲರ್ಜಿ ಎನ್ನುತ್ತಾರೋ ಹಿಂದೂ ವಿರೋಧಿ ನೀತಿ ಅನುಸರಿಸಿ ಅಲ್ಪಸಂಖ್ಯಾತರ ತುಷ್ಟಿಕರಣ ಮಾಡುತ್ತಾರೋ ಅವರನ್ನು ದೂರವಿರಿಸಿ ನವ ಮತದಾರರನ್ನು ಆಕರ್ಷಿಸಿ ರಾಷ್ಟ್ರ ನಿರ್ಮಾಣ ಕಾರ್ಯದ ಜವಾಬ್ದಾರಿಯನ್ನು ನಿರ್ವಹಿಸೋಣ ಎಂದರು.

ಬಿಜೆಪಿ ಯುವಮೋರ್ಚಾದ ವತಿಯಿಂದ ಬಡ ಮಹಿಳೆಯೊಬ್ಬರಿಗೆ ಮನೆ ನಿರ್ಮಾಣ ಮಾಡಿಕೊಟ್ಟಿದ್ದು, ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಎಂ.ಬಿ.ಹರಿಕೃಷ್ಣ, ಶಾಸಕ ಕೆ.ಬಿ.ಅಶೋಕ್‌ನಾಯ್ಕ್, ಡಿ.ಎಸ್.ಅರುಣ್, ಆಯನೂರು ಮಂಜುನಾಥ್, ಸಂಸದ ಬಿ.ವೈ.ರಾಘವೇಂದ್ರ, ಸಿದ್ಧರಾಮಣ್ಣ, ಜ್ಯೋತಿಪ್ರಕಾಶ್, ಡಾ. ಧನಂಜಯ ಸರ್ಜಿ, ಮೇಯರ್ ಶಿವಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಕೆ.ಈ.ಕಾಂತೇಶ್, ಲಲಿತಾಗೌಡ, ಸಾಯಿವರಪ್ರಸಾದ್, ಅನೂಪ್‌ಕುಮಾರ್, ನವೀನ್ ಕುಮಾರ್, ದರ್ಶನ್ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಯುವಮೋರ್ಚಾ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: KannadaNewsKannadaNewsLiveKannadaNewsOnline ShivamoggaKannadaNewsWebsiteKannadaWebsiteLatestNewsKannadaLocalNewsMalnadNewsNewsinKannadaNewsKannadaShimogaShivamoggaNewsಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share238Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಟ್ರಾನ್ಸ್ ಫಾರ್ಮಾರ್ ಸ್ಫೋಟ: ಲಕ್ಷಾಂತರ ರೂ. ಮೌಲ್ಯದ ದಿನಬಳಕೆ ವಸ್ತುಗಳು ಬೆಂಕಿಗಾಹುತಿ

Next Post

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ನಿಧನಕ್ಕೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಂತಾಪ

kalpa News

kalpa News

Next Post
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ನಿಧನಕ್ಕೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಂತಾಪ

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ನಿಧನಕ್ಕೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಂತಾಪ

Leave a Reply Cancel reply

Your email address will not be published. Required fields are marked *

No Result
View All Result
11-Year-Old Mysuru Girl Writes Children's Ramayana in Just 15 Days
English Articles

11-Year-Old Mysuru Girl Writes Children’s Ramayana in Just 15 Days

by kalpa News
July 27, 2026
1

Kalpa Media House  |  Mysuru  | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL