ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಧಾನಿ ನರೇಂದ್ರ ಮೋದಿ PM Narendra Modi ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆಯು Agnipath Project ಯುವಕರು ತಮ್ಮನ್ನು ತಾವು ದೇಶಸೇವೆಗೆ ಸಮರ್ಪಿಸಿಕೊಳ್ಳಲು ಪ್ರೇರಣೆಯಾಗಿದೆ ಎಂದು ಎಪಿಎಂಸಿ ಹಾಗೂ ಸೂಡಾ ಮಾಜಿ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದ ಯುವ ಜನತೆಗೆ ಭರಪೂರ ಉದ್ಯೋಗಾವಕಾಶ ಕಲ್ಪಿಸುವುದರ ಜೊತೆಗೆ ದೇಶ ಸೇವೆಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳಲು ಐತಿಹಾಸಿಕ “ಅಗ್ನಿಪಥ” ಯೋಜನೆ ಜಾರಿಗೆ ತಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನಾರ್ಹರು ಎಂದಿದ್ದಾರೆ.
ಈ ಯೋಜನೆಯಡಿ 17.5 ವರ್ಷ ದಾಟಿದ ಹಾಗೂ 21 ವರ್ಷ ಮೀರದ ಯುವ ಸಮೂಹವನ್ನು ಸೇನೆಯ ಮೂರು ವಿಭಾಗಗಳಾದ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆ ಗಳಲ್ಲಿ ಸೇರ್ಪಡೆ ಮಾಡಿಕೊಳ್ಳುವ ಮಹತ್ವಾಕಾಂಕ್ಷೆ ಯೋಜನೆಯೆ “ಅಗ್ನಿಪಥ” ಯೋಜನೆಯಾಗಿದ್ದು, ನಾಲ್ಕು ವರ್ಷ ದ ಸೇವೆಗೆ ಆಯ್ಕೆಯಾಗುವ ಯೋಧರನ್ನು “ಅಗ್ನಿವೀರರು” ಎಂದು ಕರೆಯಲ್ಪಡುವ ಮೂಲಕ ದೇಶ ಸೇವೆಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳಲು ಪ್ರೇರೇಪಿಸಿದೆ ಎಂದಿದ್ದಾರೆ.
ಕನಿಷ್ಠ ಪ್ರೌಢ ಶಿಕ್ಷಣ ಮುಗಿಸಿದ ಕನಿಷ್ಠ ಪದವಿ ಪೂರ್ವ ಶಿಕ್ಷಣ ಪೂರೈಸಿದ ವಾರ್ಷಿಕ 46,000 ಕ್ಕೂ ಅಧಿಕ “ಅಗ್ನಿವೀರರನ್ನು” ಏಕಕಾಲದಲ್ಲಿ ದೇಶದಾದ್ಯಂತ ನಡೆಸುವ ಲಿಖಿತ ಪರೀಕ್ಷೆಯ ಮೂಲಕ ನೇಮಕ ಪ್ರಕ್ರಿಯೆ ಮಾಡಿಕೊಳ್ಳಲ್ಲಿದ್ದು, ಆರು ತಿಂಗಳ ಕಠಿಣ ತರಬೇತಿ ನಂತರ ಮೊದಲ ವರ್ಷ ದಲ್ಲಿ ಮಾಸಿಕ 30,000 ಸಾವಿರ ವೇತನದೊಂದಿಗೆ ನಾಲ್ಕು ವರ್ಷ ಗಳ ತಮ್ಮ ಸೇವಾ ಅವಧಿಯಲ್ಲಿ 40,000 ಸಾವಿರದ ವರೆಗೆ ವೇತನ ಪಡೆಯಲು ಅರ್ಹರಾಗಿರುತ್ತಾರೆ. ಈ ಒಂದು ಸೇವಾ ಅವಧಿಯಲ್ಲಿ ಯಾವುದೇ ಪಿಂಚಣಿ ಸೌಲಭ್ಯ ಇರದ ಕಾರಣ ತಿಂಗಳ ವೇತನದಲ್ಲಿ ರೂ. 9,000 ಸಾವಿರ ಮೂಲ ವೇತನದಲ್ಲಿ ಕಡಿತ ಮಾಡಿ ಅಷ್ಟೇ ಪ್ರಮಾಣದ ಹಣವನ್ನು ಕೇಂದ್ರ ಸರ್ಕಾರ “ಅಗ್ನಿವೀರ ನಿಧಿ” ಸ್ಥಾಪಿಸಿ ಅದಕ್ಕೆ ಸಮರ್ಪಿಸುವ ಮೂಲಕ ನಾಲ್ಕು ವರ್ಷದ ತಮ್ಮ ದೇಶ ಸೇವೆಯನ್ನು ಸಲ್ಲಿಸಿದ ತರುವಾಯ ಸುಮಾರು 11.70 ಲಕ್ಷ ತೆರಿಗೆ ರಹಿತ ಸೇವಾ ನಿಧಿ ಕೊಡುವ ಉದ್ದೇಶ ಹೊಂದಿದ್ದು ಇದರೊಂದಿಗೆ ಸೇವಾ ಅವಧಿಯಲ್ಲಿ ಸುಮಾರು 48 ಲಕ್ಷ ವಿಮೆ ಮೊತ್ತವು ಒಳಗೊಂಡಿರುವುದು ಪ್ರಮುಖ ಅಂಶವಾಗಿದೆ. ಒಮ್ಮೆಲೆ ನೇಮಕವಾಗುವ ಸೈನಿಕರು ನಾಲ್ಕು ವರ್ಷಗಳ ಸೇವೆ ಮುಗಿಸಿದ ನಂತರ ಪ್ರತಿ ತಂಡದಲ್ಲಿರುವ ಶೇಕಡಾ 25 ರಷ್ಟು ಸೈನಿಕರನ್ನು ಅವರ ದೈಹಿಕ ಸಾಮಥ್ರ್ಯಕ್ಕೆ ಅನುಗುಣವಾಗಿ ಸೇನೆಯಲ್ಲಿ ಮುಂದುವರೆಯಲು ಅವಕಾಶ ಕಲ್ಪಿಸಲಾಗುತ್ತದೆ, ಇಂತಹ ಅವಕಾಶವನ್ನು ಯುವಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ನೂರಾರು ನೂತನ ವಿನೂತನ ಯೋಜನೆಗಳು ಜಾರಿಗೆ ತಂದು ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಸ್ವಾಭಿಮಾನದಿಂದ ಜೀವನ ಸಾಗಿಸಬೇಕು ಎಂಬ ಆಶಯ ಹೊಂದಿರುವುದು ನಮಗೆಲ್ಲ ತಿಳಿದಿರುವ ವಿಚಾರ. ಪ್ರತಿಯೊಂದು ಯೋಜನೆಗಳನ್ನು ಜಾರಿಗೆ ತರುವ ಮುನ್ನ ಕೂಲಂಕುಶವಾಗಿ ಪರಿಶೀಲನೆ ನಡೆಸಿ ಅದರ ಸಾಧಕ ಭಾದಕಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ನಿರ್ವಹಿಸುವ ಅಪ್ರತಿಮ ನಾಯಕ ಸನ್ಮಾನ್ಯ ಮೋದಿ ಎಂದರೆ ಉತ್ಪ್ರೇಕ್ಷೆ ಆಗಲಾರದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
Also read: ಜೂನ್ 29ರಂದು ಬೆಂಗಳೂರಿನಲ್ಲಿ ನಡೆಯಲಿದೆ ನಂದನಾರ್ ಚರಿತ್ರಂ ಕೂಚಿಪುಡಿ ಅಪರೂಪದ ನೃತ್ಯನಾಟಕ
ಅದರಲ್ಲೂ ರಕ್ಷಣಾ ಪಡೆಗೆ ನೀಡುತ್ತಿರುವ ಆದ್ಯತೆ, “ಆತ್ಮನಿರ್ಭಿರ ಭಾರತ” ಪರಿಕಲ್ಪನೆಯಡಿ ಸೇನಾ ವಲಯದಲ್ಲಿ ಸ್ವಾವಲಂಬಿ ರಾಷ್ಟ್ರ ನಿರ್ಮಾಣ ಮಾಡುವ ಮೂಲಕ ಅವಲಂಬಿತ ರಾಷ್ಟ್ರ ಎಂಬ ಹಣೆ ಪಟ್ಟಿಯನ್ನು ದೂರ ಮಾಡಲು ಇಟ್ಟಿರುವ ದಿಟ್ಟ ಹೆಜ್ಜೆ ನಿಮ್ಮ ನಾಯಕತ್ವ ಗುಣವನ್ನು ಸಾರುತ್ತದೆ. ಅಂತೆಯೇ “ಅಗ್ನಿಪಥ” ಯೋಜನೆ ಹಿಂದಿನ ಉದ್ದೇಶ ಬಹಳ ಸ್ಪಷ್ಟವಾಗಿದ್ದು ಸೈನಿಕರ ಪಿಂಚಣಿ ಉಳಿಕೆ, ಯುವಕರಲ್ಲಿ ದೇಶ ಭಕ್ತಿ ಮೂಡಿಸುವುದು, ಸೈನಿಕರಾಗಿ ಸೇವೆ ಸಲ್ಲಿಸುವುದು, ಸೇನೆಯ ಸಾಮಥ್ರ್ಯವನ್ನು ಮತ್ತಷ್ಟು ಹೆಚ್ಚಿಸುವುದು, ಶತ್ರು ರಾಷ್ಟ್ರಗಳ ವಿರುದ್ಧ ಇನ್ನಷ್ಟು ಗಟ್ಟಿತನದಿಂದ ಹೋರಾಡುವುದು ಹಾಗೆಯೇ ಪ್ರಮುಖವಾಗಿ ದೇಶದಲ್ಲಿ ಉದ್ಯೋಗಾವಕಾಶ ಸೃಷ್ಟಿ ಮಾಡುವ ಮೂಲ ಉದ್ದೇಶ ಸ್ವಾಗತಾರ್ಹ ಎಂದಿದ್ದಾರೆ.
ಹಾಗೆಯೇ ಮುಂದಿನ 18 ತಿಂಗಳ ಅವಧಿಯಲ್ಲಿ ಕೇಂದ್ರದ ಸುಪರ್ದಿಗೆ ಬರುವ ನೂರಾರು ಇಲಾಖೆಯಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಸೂಚನೆ ನೀಡಿದ್ದು, ದೇಶದ ಇತಿಹಾಸದಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಲಿದೇ ಜೊತೆಗೆ ಕಾಂಗ್ರೆಸ್ ಪಕ್ಷವು ದೇಶದಲ್ಲಿ ಉದ್ಯೋಗಾವಕಾಶ ಸೃಷ್ಟಿ ಆಗುತ್ತಿಲ್ಲ ಎಂಬ ಅಪಪ್ರಚಾರಕ್ಕೆ ತೆರೆ ಬೀಳಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಈ ಮೂಲಕ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜಾನಾಥ ಸಿಂಗ್, ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಸಂಪುಟದ ಎಲ್ಲಾ ಸಚಿವರಿಗೆ ಧನ್ಯವಾದ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post