ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೃತಕ ಬುದ್ಧಿವಂತಿಕೆ(ಎಐ) ತಂತ್ರಜ್ಞಾನ #AITechnology ವೈದ್ಯಕೀಯ ಕ್ಷೇತ್ರಕ್ಕೆ ಸಹಕಾರಿಯಾಗಿದ್ದು, ಪ್ರಮುಖವಾಗಿ ಒಳರೋಗಿಗಳ ಸೇವೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ವಿನಯ ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ.
ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ಸುಬ್ಬಯ್ಯ ಲಿಟರರಿ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿವಂತಿಕೆ(ಎಐ) #AI ವರದಾನವೇ? ಶಾಪವೇ ಎಂಬ ಕುರಿತಾಗಿ ಚರ್ಚಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾವುದೇ ತಂತ್ರಜ್ಞಾನವನ್ನು #Technology ಸಮಾಜಕ್ಕೆ ವಿಶೇಷವಾಗಿ ಬಡವರಿಗೆ ಉಪಯುಕ್ತವಾಗಿಸುವುದು ಆದ್ಯತೆಯಾಗಬೇಕು. ಹೀಗಾಗಿ, ಇಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಬಡಜನರಿಗೆ ಚಿಕಿತ್ಸೆ ನೀಡುವಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದರು.
Also read: ರಾಜ್ಯ ಬಜೆಟ್ | ಪೌರಾಡಳಿತ ಇಲಾಖೆಗೆ ಸಿಕ್ಕಿದ್ದೇನು? ಯಾವೆಲ್ಲಾ ನಗರಗಳಿಗೆ ಅನುದಾನ?
ವೈದ್ಯರಿಗೆ ಎಐ ಉತ್ತಮ ಸಹಾಯಕವಾಗಿರುತ್ತದೆ. ಆದರೆ ಇದು ವೈದ್ಯರನ್ನು ಬದಲಿಸಲು ಸಾಧ್ಯವಿಲ್ಲ, ಆದರೆ ಮಾನವ ಸಂವಹನವು ನಿರ್ಣಾಯಕವಾಗಿಸುವ ಮಾರ್ಗದರ್ಶಿ ಸಾಧನವಾಗಿದೆ. ಬೇಗನೆ ನಿರ್ಧಾರ ತೆಗೆದುಕೊಳ್ಳಬಹುದು, ಹೆಚ್ಚು ನಿಖರವಾಗಿರಬಹುದು. ಕೆಲವು ಸಂದರ್ಭಗಳಲ್ಲಿ ಹೆಚ್ಚು ಸಮಯವಿರುವ ಪರೀಕ್ಷೆಗಳಿಗೆ ಹೋಗದೆ ಆರೈಕೆಯ ವೆಚ್ಚವನ್ನು ಕಡಿಮೆಯಾಗಬಹುದು ಎನ್ನುವ ಅಭಿಪ್ರಾಯ ವೈದ್ಯಕೀಯ ಕ್ಷೇತ್ರದಲ್ಲಿ ಚರ್ಚೆಯಾಗಿದೆ ಎಂದರು.

ಪರವಿರೋಧ ಚರ್ಚೆಯಲ್ಲಿ ಪಾಲ್ಗೊಂಡ ಸುಮಾರು 12 ವಿದ್ಯಾರ್ಥಿಗಳು ಕೃತಕ ಬುದ್ದಿವಂತಿಕೆ ವಿಚಾರದಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದರು.
ಮುಂದುವರೆದ ತಂತ್ರಜ್ಞಾನವಾದ ಎಐನಿಂದ ವೈದ್ಯಕೀಯ #AIinMedical ಕ್ಷೇತ್ರಕ್ಕೆ ಹೆಚ್ಚಿನ ಪ್ರಯೋಜನವಿದೆ. ಈ ತಂತ್ರಜ್ಞಾನವನ್ನು ಆಧರಿಸಿ ರೋಗಿಗಳಿಗೆ ಶೀಘ್ರ ಹಾಗೂ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ಸಾಧ್ಯವಿದೆ ಎಂದು ಕೆಲವು ವಿದ್ಯಾರ್ಥಿಗಳು ವಾದ ಮಂಡಿಸಿದರು.

ಪರ ವಿರೋಧ ಚರ್ಚಾ ಕಾರ್ಯಕ್ರಮದ ತೀರ್ಪುಗಾರರಾಗಿ ಮಕ್ಕಳ ವಿಭಾಗದ ಎಚ್’ಒಡಿ ಡಾ.ವಿಕ್ರಂ ಹಾಗೂ ದಂತ ವೈದ್ಯಕೀಯ ಕಾಲೇಜಿನ ಉಪಪ್ರಾಂಶುಪಾಲ ಡಾ.ಮಿಥುನ್ ನಿರ್ವಹಿಸಿದರು.
ದಂತ ವೈದ್ಯಕೀಯ ಕಾಲೇಜಿನ ಎಚ್’ಒಡಿ ಡಾ. ಡಾ.ಪ್ರಮೋದ್ ಕೃಷ್ಣ, ಉಪಪ್ರಾಂಶುಪಾಲ ಡಾ.ಎಚ್.ಎಂ. ಶಿವಮೂರ್ತಿ, ಜೈವಿಕ ರಸಾಯನಶಾಸ್ತ್ರ ವಿಭಾಗದ ಎಚ್’ಒಡಿ ಡಾ. ಚಂದ್ರಕಾಂತ್, ಮಕ್ಕಳ ಚಿಕಿತ್ಸಾ ವಿಭಾಗದ ಹಿರಿಯ ವೈದ್ಯ ಡಾ. ಮಂಜುನಾಥ್ ಸ್ವಾಮಿ, ಸಮುದಾಯ ವೈದ್ಯಕೀಯ ಸಹಾಯಕ ಪ್ರಾಧ್ಯಾಪಕ ಡಾ. ದಿವಾಕರ್, ದಂತ ವೈದ್ಯೆ ಡಾ. ಹರ್ಷಿತಾ, ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post