ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಎಗ್ಗಿಲ್ಲದಂತೆ ಎಲ್ಲೆಡೆ ಅಬ್ಬರಿಸುತ್ತಾ ಸಾಲು ಸಾಲು ಜನರನ್ನು ಬಲಿ ಪಡೆಯುತ್ತಿರುವ ಕೊರೋನಾ ಸೋಂಕಿಗೆ ನಗರದಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ತಾಯಿ ಹಾಗೂ ಮಗ ಬಲಿಯಾಗಿರುವ ಧಾರುಣ ಘಟನೆ ನಡೆದಿದೆ.
ಇಲ್ಲಿನ ಬಸವನಗುಡಿ ನಿವಾಸಿಯೊಬ್ಬರು ಕಳೆದ 8 ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಯಿಂದ ಅವರು ಚೇತರಿಸಿಕೊಂಡಿದ್ದರೂ, ಸೋಮವಾರದ ವೇಳೆಗೆ ಅವರ ಸ್ಥಿತಿ ಗಂಭೀರವಾಗತೊಡಗಿತು. ಇವರ ಸ್ಥಿತಿ ಗಂಭೀರವಾಗಿರುವ ವಿಚಾರ ತಿಳಿದು ಆಘಾತಕ್ಕೊಳಗಾಗಿದ ಅವರ ತಾಯಿಯವರು ಸಂಜೆ ವೇಳೆಗೆ ತಮ್ಮ ಮನೆಯಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ.
ತಮ್ಮ ತಾಯಿ ಕೊನೆಯುಸಿರೆಳೆದ ವಿಚಾರ ಆಸ್ಪತ್ರೆಯಲ್ಲಿದ್ದ ಮಗನಿಗೆ ತಿಳಿದಿರಲಿಲ್ಲ. ಆದರೆ ತಾಯಿ ಮೃತಪಟ್ಟ ಐದು ಗಂಟೆ ಕಳೆಯುವುದರಲ್ಲಿ ಮಗನೂ ಸಹ ಕೊರೋನಾಗೆ ಬಲಿಯಾಗಿದ್ದಾರೆ.
(ಸಾಮಾಜಿಕ ಕಳಕಳಿಯ ದೃಷ್ಠಿಯಿಂದ ಹೆಸರುಗಳನ್ನು ಪ್ರಕಟಿಸಿಲ್ಲ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post