ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ- ಭದ್ರಾವತಿ ನಡುವಿನ ಲೆವೆಲ್ ಕ್ರಾಸಿಂಗ್ ನಂ.43, 46 ಹಾಗೂ 47 ಗಳನ್ನು ಪರೀಕ್ಷೆಗಾಗಿ ಏಳು ದಿನಗಳ ಕಾಲ ಮುಚ್ಚಲಾಗುತ್ತಿದ್ದು, ಸಾರ್ವಜನಿಕರು ಬದಲಿ ರಸ್ತೆಗಳಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ.
ಈ ಕುರಿತಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಮೂರೂ ಲೆವೆಲ್ ಕ್ರಾಸಿಂಗ್ ಗೇಟ್’ಗಳನ್ನು ಅಕ್ಟೋಬರ್ 28ರಿಂದ ನವೆಂಬರ್ 3ರವರೆಗೂ ಮುಚ್ಚಲಾಗುತ್ತದೆ. ಈ ದಿನಗಳಂದು ವಾಹನಗಳು ಹಾಗೂ ಸಾರ್ವಜನಿಕರು ತಾತ್ಕಾಲಿಕವಾಗಿ ಸಮೀಪದ ಬದಲಿ ಮಾರ್ಗಗಳಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ.
ಎಸ್’ಸಿ 43 – ಯಲವಟ್ಟಿ ರಸ್ತೆ ಅ. 28 ರ ಬೆಳಗ್ಗೆ 8 ರಿಂದ ಅ. 29 ರ ಸಂಜೆ 6 ರವರೆಗೆ, ಎಸ್’ಸಿ 46 ಮುಖಾಂತರ -ಹೊಸೊಡಿ ರಸ್ತೆ, ಯಲವಟ್ಟಿ ರಸ್ತೆ ಸಂಪರ್ಕ ಬದಲಿ ಮಾರ್ಗ. ಎಲ್’ಸಿ 46 – ಚಿತ್ರದುರ್ಗ ರಸ್ತೆ- ಅ.30 ರ ಬೆಳಗ್ಗೆ 8 ರಿಂದ ಅ. 31 ರ ಸಂಜೆ 6 ರವರೆಗೆ ಹೊಸದಾಗಿ ನಿರ್ಮಿಸಿದ ಮೇಲ್ಸೇತುವೆ ಚಿತ್ರದುರ್ಗ ಸಂಪರ್ಕ ರಸ್ತೆ ಮಾರ್ಗ.
ಇನ್ನು, ಎಸ್’ಸಿ 47 – ಮಲ್ಲೇಶ್ವರ ನಗರ ರಸ್ತೆ -ನವೆಂಬರ್ 2 ರ ಬೆಳಗ್ಗೆ 8 ರಿಂದ ನ. 3 ರ ಸಂಜೆ 6 ರವರೆಗೆ ಮಲ್ಲೇಶ್ವರ ನಗರ ರಸ್ತೆ- ಹೊನ್ನಾಳಿ ರಸ್ತೆ- ಸಂಗೊಳ್ಳಿ ರಾಯಣ್ಣ ಸರ್ಕಲ್ – ಶಂಕರಮಠ ಸಂಪರ್ಕ ಎಲ್’ಸಿ 47 ರ ಮಾರ್ಗವಿರುತ್ತದೆ.
ಹಾಗೆಯೇ, ಮಲ್ಲೇಶ್ವರನಗರ ರಸ್ತೆಯು ಕಚ್ಚಾಮಣ್ಣಿನ ರಸ್ತೆಯಾಗಿದ್ದು, ದ್ವಿಚಕ್ರ ವಾಹನಗಳು ಸಂಚರಿಸುವುದಕ್ಕ ಅವಕಾಶ ಕಲ್ಪಿಸಲಾಗಿದೆ. ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಸಾರ್ವಜನಿಕರ ಹಿತದೃಷ್ಠಿಯಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್’ಗಳ ತಾಂತ್ರಿಕ ಪರಿಶೀಲನೆ ಕಾಮಗಾರಿ ತ್ವರಿತಗತಿಯಿಂದ ಪೂರ್ಣಗೊಳ್ಳಬೇಕಾಗಿರುವುದರಿಂದ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ರ ಅನ್ವಯ ಕೋಷ್ಟಕದಲ್ಲಿ ವಿವರಿಸಿದಂತೆ ತಾತ್ಕಾಲಿಕವಾಗಿ ಆಯಾ ದಿನಾಂಕಗಳಂದು ಮಾತ್ರ ಪರ್ಯಾಣ ಮಾರ್ಗಗಳಲ್ಲಿ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಿ ಆದೇಶಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















