ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮತದಾರರಿಗೆ ಯಾವುದೇ ರೀತಿಯಲ್ಲಿ ಆಮಿಷವೊಡ್ಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಹೇಳಿದ್ದಾರೆ.
ಈ ಕುರಿತಂತೆ ಆದೇಶ ಹೊರಡಿಸಿರುವ ಅವರು, ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ನಗ, ನಗದು ಇನ್ನಿತರ ಸಾಮಾಗ್ರಿಗಳನ್ನು ನೀಡಿ ಆಮಿಷ ಒಡ್ಡುವುದು ಹಾಗೂ ಅದನ್ನು ಪಡೆಯುವುದು ಅಪರಾಧವಾಗಿದ್ದು, ಅಂತಹ ಕೃತ್ಯಗಳು ಕಾನೂನು ಪ್ರಕಾರ ಶಿಕ್ಷಾರ್ಹವಾಗಿದೆ ಎಂದಿದ್ದಾರೆ.
ಏನೆಲ್ಲಾ ಆಮಿಷ ಅಪರಾಧ:
ಮತದಾರರಿಗೆ ಆಮಿಷ ಒಡ್ಡಲು ಯಾವುದೇ ರೀತಿಯಲ್ಲಿ ಹಣ ವರ್ಗಾಯಿಸುವುದು, ವಿವಿಧ ಸಾಧನ ಸಾಮಾಗ್ರಿಗಳ ವಿತರಣೆ, ಗಿಫ್ಟ್ ಓಚರ್ಗಳು, ಸಿಮ್ ಕಾರ್ಡ್ ಬ್ಯಾಲೆನ್ಸ್, ಪ್ರವಾಸಕ್ಕೆ ಏರ್ಪಾಡು ಮಾಡುವುದು, ಆಹಾರ ಪದಾರ್ಥಗಳ ವಿತರಣೆ, ಮದ್ಯ ಮತ್ತಿತರ ಪಾನೀಯಗಳ ವಿತರಣೆ, ವಾಹನಗಳಿಗೆ ಯಾವುದೇ ರೀತಿಯಲ್ಲಿ ಇಂಧನ ಭರಿಸುವುದು ಐಪಿಸಿ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ 1951 ಅಡಿ ಶಿಕ್ಷಾರ್ಹ ಅಪರಾಧವಾಗಿದೆ ಎಂದಿದ್ದಾರೆ.
Also read: ಕಣಿವೆ ರಾಜ್ಯದಲ್ಲಿ ಭಾರೀ ಸ್ಫೋಟ: ಸ್ಥಳದಲ್ಲಿ ಬೃಹತ್ ಕಾರ್ಯಾಚರಣೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post