ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸೇವ್ ರೀಚಾರ್ಜ್ ಎಂಬ ವೆಬ್’ಸೈಟ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಲಾಗಿದೆ ಎಂದು ಆರೋಪಿಸಿ ಹಲವಾರು ಗ್ರಾಹಕರು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.
ಸೇವ್ ರೀಚಾರ್ಜ್ ಎಂಬ ವೆಬ್ ಸೈಟ್ ಮೊಬೈಲ್ ಗ್ರಾಹಕರಿಗೆ ಪ್ರತೀ ತಿಂಗಳು 249 ರೂ. ರಿಚಾರ್ಜ್ ಮಾಡಿ, ಪ್ರತಿ ದಿನ 2 ಜಿಬಿ ಡಾಟಾ, ಅನ್ ಲಿಮಿಟೆಡ್ ಹೊರಹೋಗುವ ಕರೆ, 100 ಎಸ್’ಎಂಎಸ್ ಉಚಿತವಾಗಿ ನೀಡುತ್ತೇವೆ ಎಂದು ಮೊಬೈಲ್ ಗ್ರಾಹಕರಿಂದ ಒಂದು ವರ್ಷದ ರಿಚಾರ್ಜ್ ಮಾಡುತ್ತೇವೆಂದು ನಂಬಿಸಿ 1250 ರೂ. ವರ್ಷದ ಪ್ಯಾಕೇಜ್ ಎಂದು ಹೇಳಿ ಸೇವ್ ರಿಚಾರ್ಜ್ ವಾಲೆಟ್’ಗೆ ಹಣ ಹಾಕಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.
ವೆಬ್ ಸೈಟ್ ಮೋಸದ ಜಾಲ ಅರಿಯದೆ ನಾವು ಹಣ ನೀಡಿ ಪಿನ್ ಪಡೆದು ಗ್ರಾಹಕರಿಂದ ವಾಲೆಟ್’ಗೆ ಹಣ ಹಾಕಿಸಿರುತ್ತೇವೆ. ಒಂದೆರಡು ತಿಂಗಳು ರಿಚಾರ್ಜ್ ಮಾಡಿ ಇದೀಗ ವೆಬ್ ಸೈಟ್ ಅಪ್ ಗ್ರೇಡ್ ಹೆಸರಿನಲ್ಲಿ ರಿಚಾರ್ಜ್ ಮಾಡದೆ ನಿಲ್ಲಿಸಿರುತ್ತಾರೆ. ರಾಜ್ಯದಲ್ಲಿ ಈ ಕಂಪನಿ ನಂಬಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮೊಬೈಲ್ ಗ್ರಾಹಕರು ವರ್ಷದ ರಿಚಾರ್ಜ್ ಹಣ 1250 ರೂ. ಹಾಕಿದ್ದಾರೆ. ಕಂಪನಿಯ ಅವರು ಶಿವಮೊಗ್ಗ ಜಿಲ್ಲೆಯಾದ್ಯಂತ ಹಾಗೂ ಅಂತರ್ ಜಿಲ್ಲಾ ವ್ಯಾಪ್ತಿಯಲ್ಲಿ ಕಂಪನಿ ಪರವಾಗಿ ಪ್ರಚಾರ ಮಾಡಿ ರೀಚಾರ್ಜ್ ಮಾಡಲು ಪ್ರೇರೇಪಿಸಿ ಇದೀಗ ವಂಚನೆ ಮಾಡಿದ್ದಾರೆ. ರಿಚಾರ್ಜ್ ಬಗ್ಗೆ ಇವರನ್ನು ಕೇಳಿದರೆ ದೌರ್ಜನ್ಯದ ಮಾತನಾಡುತ್ತಿದ್ದಾರೆ. ವಾಲೆಟ್’ಗೆ ಹಣ ಹಾಕಿರುವ ಗ್ರಾಹಕರು ಅಂಗಡಿಗಳಿಗೆ ಬಂದು ಕೇಳುತ್ತಿದ್ದು, ಅನುವಾರ್ಯವಾಗಿ ನಾವೇ ರಿಚಾರ್ಜ್ ಮಾಡಿಕೊಡುವಂತಾಗಿದೆ. ಇದರಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಆಗಿರುವುದರಿಂದ ಕಂಪನಿ ಮುಟ್ಟುಗೋಲು ಹಾಕಿ ಸೂಕ್ತ ತನಿಖೆ ನಡೆಸಿ ನ್ಯಾಯ ಕೊಡಿಸಿ ಎಂದು ಗ್ರಾಹಕರು ಜಿಲ್ಲಾ ರಕ್ಷಣಾಧಿಕಾರಿಯವರಿಗೆ ದೂರ ನೀಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post