ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಒಳಮೀಸಲಾಯಿತುಯಲ್ಲಿ ಬಂಜಾರ ಸಮುದಾಯಕ್ಕೆ ಮೋಸವಾಗಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ಬಂಜಾರ ಸಂಘ ಪ್ರತಿಭಟನೆ #Protest by Banjara Sangha ನಡೆಸಿದೆ.
ಬಂಜಾರ ಕನ್ವೆನ್ಷನ್ ಹಾಲ್’ನಿಂದ ಕುವೆಂಪು ರಂಗಮಂದಿರದ ವರೆಗೂ ಪ್ರತಿಭಟನಾ ಜಾಥಾ ನಡೆಸಿ ಮುತ್ತಿಗೆ ಹಾಕಲು ಬಂಜಾರ ಮುಖಂಡರು ಯತ್ನಿಸಿದರು.
ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮುಖಂಡರು, ಒಳ ಮೀಸಲಾತಿಯಲ್ಲಿ ಬಂಜಾರ ಸಮುದಾಯಕ್ಕೆ ಸರ್ಕಾರ ಮೋಸ ಮಾಡಿದೆ. ರಾಜ್ಯ ಸರ್ಕಾರ ಬಂಜಾರ ಸಮುದಾಯಕ್ಕೆ ಮರಣ ಶಾಸನ ಬರೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಮತ್ತಿಗೆ ಹಾಕಲು ಯತ್ನ ನಡೆಸಲಾಗಿದ್ದು, ಕುವೆಂಪು ರಂಗ ಮಂದಿರ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ಜಿಲ್ಲಾಡಳಿತದಿಂದ ಕುವೆಂಪು ರಂಗಮಂದಿರದಲ್ಲಿ ಸೇವಾಲಾಲ್ ಜಯಂತಿ ನಡೆಯುತ್ತಿದ್ದ ಹಿನ್ನೆಲೆ ಮುತ್ತಿಗೆ ಯತ್ನ ನಡೆಸಲಾಗಿದ್ದು, ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿ ಸೇವಾಲಾಲ್ ಜಯಂತಿ ಆಚರಿಸುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















