ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೊಡಗಿನ ಬಾನೆ ಭೂಮಿಗೆ ಮಾಲಿಕತ್ವ ನೀಡುವ ಮಾದರಿಯಲ್ಲೆ ಮಲೆನಾಡಿನ ಸೊಪ್ಪಿನಬೆಟ್ಟ, ಕಾನೂಭೂಮಿ ಸಾಗುವಳಿದಾರರಿಗೆ ಮಾಲಿಕತ್ವ ನೀಡಲು ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವ ಕೃಷ್ಣ ಭೈರೇಗೌಡರನ್ನು ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎ.ರಮೇಶ್ ಹೆಗ್ಡೆ ಒತ್ತಾಯಿಸಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ 2011ರಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್ 2(20) ಹಾಗೂ ಸೆಕ್ಷನ್ 80ಕ್ಕೆ ತಿದ್ದುಪಡಿಯನ್ನು ತಂದು ಕೊಡುಗಿನ ಬಾನೆ ಭೂಮಿಗೆ ಕಂದಾಯ ನಿರ್ಧರಣೆಗೆ ಹಾಗೂ ಮಾಲಿಕತ್ವ ಮಂಜೂರು ಮಾಡುವ ಅವಕಾಶ ಕಲ್ಪಿಸಲಾಗಿದೆ. ಈ ತಿದ್ದುಪಡಿಗೆ 2013ರಲ್ಲಿ ರಾಷ್ಟ್ರಪತಿಗಳ ಅಂಕಿತ ದೊರಕಿದೆ ಎಂದರು.

Also read: ಸುಮೊಟೋ ದೂರು | ಈಶ್ವರಪ್ಪ ಬಂಧನಕ್ಕಾಗಿ ಬೀದಿಗಿಳಿದ ಕಾಂಗ್ರೆಸ್ ನಾಯಕರು
ನಮೂನೆ 53 ಮೂಲಕ ವಿಶೇಷ ಹಕ್ಕುಳ್ಳ ಭೂಮಿಗಳಲ್ಲಿ ಅಡಿಕೆ, ಕಾಫಿ, ಏಲಕ್ಕಿ, ಮೆಣಸು ಹಾಗೂ ಇನ್ನಿತರ ಬೆಳೆಗಳನ್ನು ಬೆಳೆದ ಪ್ರದೇಶಗಳನ್ನು ಸಕ್ರಮಗೊಳಿಸಲು 1998ರಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಈ ಕಾನೂನಿನಿಂದ ಮಲೆನಾಡಿನ ಸಾವಿರಾರು ಜನ ಸೊಪ್ಪಿನ ಬೆಟ್ಟ ಹಾಗೂ ಕಾನೂ ಭೂಮಿ ಸಾಗುವಳಿದಾರರು ಮಾಲಿಕತ್ವ ಪಡೆದಿದ್ದಾರೆ ಎಂದರು.

ಆದ್ದರಿಂದ ಸೊಪ್ಪಿನ ಬೆಟ್ಟ ಹಾಗೂ ಕಾನೂ ಭೂಮಿಗಳ ಸಾಗುವಳಿ ಮತ್ತು ವಸತಿ ಹಕ್ಕಿನ ನಿರೀಕ್ಷೆಯಲ್ಲಿರುವ ಸಾವಿರಾರು ರೈತರಿಗೆ ಭೂಮಿ ಹಕ್ಕನ್ನು ಮಂಜೂರು ಮಾಡಬೇಕು ಎಂದು ಕಂದಾಯ ಸಚಿವರಲ್ಲಿ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಇಕ್ಕೇರಿ ರಮೇಶ್, ಡಿ.ಸಿ.ನಿರಂಜನ್, ಎಸ್.ದಯಾನಂದ್, ನೆರಲೆಕೆರೆ ದಯಾನಂದ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news    
 
	    	


 Loading ...
 Loading ... 
							



 
                
Discussion about this post