ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿಗಳು ಪ್ರತಿದಿನ ಹೊಸತನ್ನು ಕಲಿಯುವ ಜೊತೆಯಲ್ಲಿ ನಿಮ್ಮ ಹತ್ತಿರ ಇರುವ ವಸ್ತುಗಳಲ್ಲೇ ಸದಾ ಸಂತೋಷವಾಗಿ ಇರುವುದನ್ನು ಕಲಿಯಬೇಕು ಎಂದು ಜೈನ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಎನ್. ಪ್ರಿಯದರ್ಶಿನಿ ಸಲಹೆ ನೀಡಿದರು.
ನಿದಿಗೆಯಲ್ಲಿರುವ ಪ್ರತಿಷ್ಠಿತ ಶಾಲೆ ‘ ಜೈನ್ ಪಬ್ಲಿಕ್ ಶಾಲೆಯಲ್ಲಿ `ಸಂಸ್ಕಾರದ ನಡೆಯೊಂದಿಗೆ’ ಎಂಬ ಆಶಯದಡಿಗೆ 2023-24 ಶಾಲಾ ವಾರ್ಷಿಕ ಪುನರಾರಂಭದ ಸಂದರ್ಭದಲ್ಲಿ ಅವರು ಮಾತನಾಡಿದರು.
ಮಕ್ಕಳು ಪ್ರತಿದಿನ ಹೊಸ ಹೊಸ ವಿಷಯವನ್ನು ಸದಾ ಕಲಿಯುತ್ತಿರಬೇಕು. ಇಲ್ಲದೇ ಇರುವ ವಸ್ತುಗಳ ಬಗ್ಗೆ ಕೊರಗುವುದಕ್ಕಿಂತಲೂ ಇರುವ ವಸ್ತುಗಳ ಬಗ್ಗೆಯೇ ಸಂತೋಷ ಪಡಬೇಕು. ನಮ್ಮದಲ್ಲದೆ ಇರುವ ವಸ್ತುಗಳ ಬಗ್ಗೆ ಯೋಚನೆ ಮಾಡಬಾರದು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
Also read: ಈಜಲು ನೀರಿಗಿಳಿದಿದ್ದ ಇಬ್ಬರು ಬಾಲಕರು ಮುಳುಗಿ ಸಾವು
ವಿದ್ಯಾರ್ಥಿಗಳು ದೀಪ ಬೆಳಗಿಸುವ ಮೂಲಕ ಈ ವರ್ಷದ ಮೊದಲನೇ ದಿನವನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯ ವರ್ಣ ರಂಜಿತವಾದ ಹಸ್ತ ಮುದ್ರಿಕೆಯ ಮೂಲಕ ಸುಂದರವಾದ ಜೆಜಿಐ ವೃP್ಷÀವನ್ನು ರಚಿಸುವ ಮೂಲಕ ಶಾಲಾ ಪುನರಾರಂಭವನ್ನು ಅತ್ಯಂತ ವಿಷಯವಾಗಿ ಆರಂಭಿಸಲಾಯಿತು.
ವಿದ್ಯಾರ್ಥಿಗಳಿಗಾಗಿ ರೂಪಿಸಿದ ಫೋಟೋ ಬೂತ್’ನಲ್ಲಿ ಛಾಯಾಚಿತ್ರ ಪಡೆಯುವ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಸ್ವಾಗತಿಸಲಾಯಿತು. ಇಂತಹ ಸುಸಂಸ್ಕೃತ ರೀತಿಯ ಕಾರ್ಯಕ್ರಮವನ್ನು ಆಯೋಜಿಸಿದ್ದ ಜೈನ್ ಪಬ್ಲಿಕ್ ಶಾಲೆಯು ತನ್ನ ವಿದ್ಯಾರ್ಥಿಗಳಿಗೆ ಸಂಸ್ಕೃತಿಯನ್ನು ಕಲಿಸುವುದರ ಜೊತೆಗೆ ಮರವನ್ನು ಬೆಳೆಸಿ ಪೋಷಿಸಬೇಕು ಪರಿಸರವನ್ನು ಕಾಪಾಡಬೇಕು ಎಂದು ಅರಿವು ಮೂಡಿಸುತ್ತಿದೆ.
ಈ ಸಂದರ್ಭದಲ್ಲಿ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post