ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಅ.31ರ ಭಾನುವಾರ ಸಂಜೆ 6.30ಕ್ಕೆ ಕುವೆಂಪು ರಂಗಮಂದಿರದಲ್ಲಿ `ಅಮೃತ್ ನೋನಿ ಬೇಂದ್ರೆ ನಮನ’ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಜೆ.ರಾಮಾಚಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ವರಕವಿ ದ.ರಾ. ಬೇಂದ್ರೆಯವರ 125ನೇ ಜನ್ಮ ವರ್ಷದ ಅಂಗವಾಗಿ ಹಿರಿಯರ ಮತ್ತು ಕಿರಿಯರ ವಿಭಾಗದಲ್ಲಿ `ನಾ ಮೆಚ್ಚಿದ ಬೇಂದ್ರೆ ಕವನ’ ಎಂಬ ವಿಷಯವಾಗಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಇದರಲ್ಲಿ 300ಕ್ಕೂ ಹೆಚ್ಚು ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ಆರ್. ಅಚ್ಯುತರಾವ್ ಮಾತನಾಡಿ. ಅ. 31ರ ಭಾನುವಾರ ನಾಡಿನ ಖ್ಯಾತ ಗಾಯಕ ಪ್ರಹ್ಲಾದ ದೀಕ್ಷಿತ್ ಮತ್ತು ತಂಡದವರಿಂದ ಬೇಂದ್ರೆಯವರ ಸುವಿಖ್ಯಾತ ಗೀತೆಗಳ ಗಾಯನವನ್ನೂ ಏರ್ಪಡಿಸಲಾಗಿದ್ದು, ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇರುತ್ತದೆ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಎಸ್. ನಾಗೇಶ್, ನಿರ್ದೇಶಕರುಗಳಾದ ಹರೀಶ್ ಕಾರ್ಣಿಕ್, ಓಂ ಗಣೇಶ್, ಕೆ.ಎಸ್. ಚೇತನ್ ಪಾಲ್ಗೊಂಡಿದ್ದರು.
ಬಹುಮಾನ ವಿಜೇತರ ವಿವರ:
ಕಿರಿಯರ ವಿಭಾಗ:
ಪ್ರಥಮ ಭೂಮಿ ಕೆ. ಅಡಿದಂ ಶಿವಮೊಗ್ಗ, ದ್ವಿತೀಯ ಮೇಘನಾ ಶಿವಾನಂದ ನಾಯ್ಕ ಸಿದ್ದಾಪುರ, ತೃತೀಯ ರೇಖಾ ಆಸಂಗಿ ಬಾಗಲಕೋಟೆ. ಸಮಾಧಾನಕರ: ಇಂದುಮತಿ ಉಮೇಶ ಶೇಟ್ ಶಿವಮೊಗ್ಗ, ನೇಹಾ ಮಠದ ಶಿವಮೊಗ್ಗ.
ಹಿರಿಯರ ವಿಭಾಗ:
ಪ್ರಥಮ: ರಾಧಾಮಣಿ ಶಿವಮೊಗ್ಗ, ದ್ವಿತೀಯ: ವೀಣಾ ಪಿ. ಹರಿಹರ, ತೃತೀಯ: ಸುಮಾ ರಮೇಶ್ ಬೆಂಗಳೂರು, ಸಮಾಧಾನಕರ: ಪೂರ್ಣಿಮಾ ಕಮಲಶಿಲೆ, ಮಂಜುಳಾ ರಾಮಕೃಷ್ಣ ಮೈಸೂರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post