ಅವರು ಇಂದು ಕುವೆಂಪು ವಿಶ್ವವಿದ್ಯಾಲಯ, Kuvempu University ಸಹ್ಯಾದ್ರಿ ವಿಜ್ಞಾನ ಕಾಲೇಜು (ಸ್ವಾಯತ್ತ) ಕಾಲೇಜಿನ ಶ್ರೀ ಜಯಚಾಮರಾಜೇಂದ್ರ ಒಡೆಯರ್ ವೇದಿಕೆಯಲ್ಲಿ ಏರ್ಪಡಿಸಿದ 11ನೇ ವಾರ್ಷಿಕ ಪದವಿ ಪ್ರಧಾನ ಸಮಾರಂಭದಲ್ಲಿ ಪದವಿ ಪ್ರಧಾನ ಮಾಡಿ ಮಾತನಾಡಿದರು.
ಕುವೆಂಪು ವಿವಿಯ ವಿದ್ಯಾರ್ಥಿಗಳು ಜಗದಗಲ ಮುಗಿಲಗಲ ಎನ್ನುವಂತೆ ಈಡೀ ವಿಶ್ವದಲ್ಲಿ ಪಸರಿಸಿ ಉನ್ನತ ಸ್ಥಾನಕ್ಕೇರಿದ್ದಾರೆ. ಕುವೆಂಪು ವಿವಿ ವಿಶ್ವದ ಅನೇಕ ಪ್ರಸಿದ್ಧ ವಿವಿಯ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಸಾಧನೆ ನಿಲ್ಲಬಾರದು. ಎಜುಕೇಟೆಡ್ ಕ್ಲಾಸ್ ನಿರ್ಮಾಣ ಆಗಬೇಕಿದೆ. ಉನ್ನತ ಶಿಕ್ಷಣಕ್ಕೆ ಬರುವವರ ಸಂಖ್ಯೆ ನಮ್ಮ ದೇಶದಲ್ಲಿ ಸ್ವಾತಂತ್ರ್ಯ ದೊರೆತು 75ವರ್ಷ ಕಳೆದರೂ ಕೂಡ ಕಡಿಮೆ ಪ್ರಮಾಣದಲ್ಲಿದೆ. 100 ವರ್ಷ ಸ್ವಾತಂತ್ರ್ಯ ಪೂರೈಸಿದ ಸಂದರ್ಭದಲ್ಲಾದರೂ ಶೇ.50ರಷ್ಟು ಉನ್ನತ ಶಿಕ್ಷಣ ಎಲ್ಲರೂ ಪಡೆಯುವಂತಾಗಲಿ ಎಂದರು.
ನಮ್ಮ ದೇಶದ ಹಸಿವು, ಬಡತನ, ಸಾಮಾಜಿಕ ದಾರಿದ್ರ್ಯಕ್ಕೆ ಮುಖ್ಯ ಕಾರಣ. ಉನ್ನತ ಶಿಕ್ಷಣದಿಂದ ವಂಚಿತರಾಗಿರುವುದು. ಇದನ್ನು ಹೋಗಲಾಡಿಸಲು ಯುವಕರು ಪ್ರಯತ್ನಿಸಬೇಕು. ಪ್ರೀತಿ,ಪ್ರೇಮ, ಸಹಕಾರ ಇರುವ ಸಮಾಜ ನಿರ್ಮಾಣಕ್ಕೆ ಉನ್ನತ ಶಿಕ್ಷಣದಿಂದ ಸಾಧ್ಯ. ಶಿಕ್ಷಣ ಪಡೆದವರು ಸಮಾಜ, ಸಮುದಾಯ, ಪ್ರಜಾಪ್ರಭುತ್ವ ಕುಟ್ಟುವ ಕೆಲಸ ಮಾಡಬೇಕು. ಕೌಶಲ್ಯಭರಿತರಾಗಬೇಕು. ಯಾರೂ ಕೂಡ ಬಡತನದಲ್ಲಿ ಸಾಯಬಾರದು. ಅಂಬೇಡ್ಕರ್ ಹೇಳಿದ ಹಾಗೆ ಎಲ್ಲರೂ ಅಧಿಕಾರ ಗದ್ದುಗೆ ಹಿಡಿಯಬೇಕಾದರೆ ಶಿಕ್ಷಣ ಅತೀ ಮುಖ್ಯ. ನಿಮ್ಮ ಮೇಲೆ ದೊಡ್ಡ ಜವಾಬ್ದಾರಿಯಿದೆ. ಆ ಜವಾಬ್ದಾರಿಯಿಂದ ಹಿಂದೆ ಸರಿದರೆ ದೇಶದ್ರೋಹ ಮಾಡಿದ ಹಾಗೆ. ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಯಾಗಲು ಅದೃಷ್ಟವಿರಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಪಿ.ಸುಬ್ರಮಣ್ಯ ಯಡಪಡಿತ್ತಾಯ ಮಾತನಾಡಿ, ಸೂರ್ಯಸ್ತಮಾನವಾಯಿತೆಂದು ಕೊರಗುತ್ತಾ ಕುಳಿತರೆ ರಾತ್ರಿಯ ನಕ್ಷತ್ರ ನೋಡುವ ಅವಕಾಶ ಸಿಗಲ್ಲ. ಯಾರಿಗೂ ಕೀಳರಿಮೆ ಬೇಡ. ವಿದ್ಯೆ ಮತ್ತು ಬುದ್ಧಿ ಎರಡು ಚಕ್ರದಂತೆ ಜೊತೆಯಾಗಿ ಸಾಗಿದಾಗ ಗುರಿಮುಟ್ಟಲು ಸಾಧ್ಯ. ವಿದ್ಯಾರ್ಜನೆ ಮೂಲಕ ಶ್ರೇಷ್ಟ ಗುಣ ಹೊರತರುವುದು ಉನ್ನತ ಶಿಕ್ಷಣ ಸಂಸ್ಥೆಯ ನೈತಿಕ ಹೊಣೆಯಾಗಿದೆ ಎಂದರು.
Discussion about this post