No Result
View All Result
ಶಿವಮೊಗ್ಗದಲ್ಲಿ ಕ್ರೀಡಾಪಟುಗಳ ಸಾಧನೆ | ದಕ್ಷಿಣ ಭಾರತ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಇಬ್ಬರಿಗೆ ಚಿನ್ನ
English Articles

Shivamogga: Two Wrestlers Win Gold at South India Championship

by ಕಲ್ಪ ನ್ಯೂಸ್
June 8, 2026
0

Kalpa Media House  |  Shivamogga   | Two athletes from the District Youth Empowerment and Sports Department Sports School in Shivamogga...

Read moreDetails
ಫಿಲಿಪೈನ್ಸ್‌ನಲ್ಲಿ ಭೂಕಂಪ | 7.8 ತೀವ್ರತೆಯ ಕಂಪನಕ್ಕೆ 12 ಸಾವು | ಹಲವು ದೇಶಗಳಲ್ಲಿ ಸುನಾಮಿ ಎಚ್ಚರಿಕೆ

Magnitude 7.8 Earthquake Hits Southern Philippines, Kills 12; Tsunami Alerts Issued

June 8, 2026
ದೇಶದ ಭದ್ರತೆಗೆ ಪೂರಕವಾದ ಜೋಜಿಲಾ ಸುರಂಗ ಕಾಮಗಾರಿ ಅಂತಿಮ ಘಟ್ಟಕ್ಕೆ | ಏನಿದರ ವಿಶೇಷತೆ?

Zojila Tunnel Nears Completion | A Milestone in India’s Infrastructure & National Security

June 8, 2026
ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ | ಭಾರತಕ್ಕೆ ಭರ್ಜರಿ ಜಯ, ಚಿನ್ನದ ಪದಕ ಗೆದ್ದ ಹೀನಾ ರಾಜಗೋರ್!

World Yogasana Championships 2026: Hosts India extend lead at top of medals tally with 22 gold

June 7, 2026
ಮೈಸೂರು ರೈಲ್ವೆ ಸಂಗ್ರಹಾಲಯದಲ್ಲಿ ಐತಿಹಾಸಿಕ ತೂಕದ ಯಂತ್ರ ಅನಾವರಣ | ಏನಿದರ ವಿಶೇಷತೆ?

Heritage Weighing Machine Restored, Unveiled at Mysuru Railway Museum

June 7, 2026
  • Advertise With Us
  • Grievances
  • About Us
  • Contact Us
Tuesday, June 9, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಎಂಟೂವರೆ ವರ್ಷದ ಬಾಲಕ ಇನ್‍ಸ್ಪೆಕ್ಟರ್ ಆಗಿ ಕಾರ್ಯನಿರ್ವಹಣೆ: ಹಲವು ವೈಶಿಷ್ಟ್ಯಗಳಿಗೆ ನಾಂದಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
August 17, 2023
in ಶಿವಮೊಗ್ಗ
0
ಎಂಟೂವರೆ ವರ್ಷದ ಬಾಲಕ ಇನ್‍ಸ್ಪೆಕ್ಟರ್ ಆಗಿ ಕಾರ್ಯನಿರ್ವಹಣೆ: ಹಲವು ವೈಶಿಷ್ಟ್ಯಗಳಿಗೆ ನಾಂದಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   | ಶಿವಮೊಗ್ಗ |

ಹೃದಯ ಮಿಡಿದ ಘಟನೆಯೊಂದು ನಿನ್ನೆ ಸಂಜೆ ದೊಡ್ಡಪೇಟೆ ಠಾಣೆಯಲ್ಲಿ ಅಧಿಕಾರಿಗಳ ಮತ್ತು ಸಾರ್ವಜನಿಕರ ಮುಂದೆ ಸಾಕ್ಷಿಯಾಯಿತು.

ಕೇವಲ ಎಂಟೂವರೆ ವರ್ಷದ ಹೃದಯ ಸಂಬಂಧಿ ಕಾಯಿಲೆಗ ಇರುವ ಬಾಲಕನೊಬ್ಬ ದೊಡ್ಡಪೇಟೆ ಠಾಣೆ ಇನ್‍ಸ್ಪೆಕ್ಟರ್ ಆಗಿ ಒಂದು ಗಂಟೆ ಕಾರ್ಯನಿರ್ವಹಿಸಿ ಹಲವು ವೈಶಿಷ್ಟ್ಯಗಳಿಗೆ ನಾಂದಿ ಹಾಡಿದ್ದಾನೆ.
ಮೂಲತಃ ಶಿವಮೊಗ್ಗ ನಗರದ ಸೂಳೆಬೈಲ್ ನಿವಾಸಿ ಹಾಗೂ ಹಾಲಿ ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನಲ್ಲಿ ವಾಸವಾಗಿರುವ ತಬ್ರೇಜ್ ಖಾನ್ ದಂಪತಿಯ ದ್ವಿತೀಯ ಪುತ್ರ ಆಜಾನ್ ಖಾನ್ ದೊಡ್ಡಪೇಟೆ ಠಾಣೆ ಇನ್‍ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ ಬಾಲಕ.

ಮೂರು ತಿಂಗಳ ಮಗು ಇದ್ದಾಗಲೇ ಅಜಾನ್ ಖಾನ್‍ಗೆ ಈ ಕಾಯಿಲೆ ಕಂಡುಬಂದಿತ್ತು. ಸ್ಥಳೀಯ ವೈದ್ಯರ ಬಳಿ ತೋರಿಸಲಾಗಿತ್ತು. 8 ವರ್ಷದ ಬಳಿಕ ಮತ್ತೊಂದು ಆಪರೇಷನ್ ಮಾಡಬೇಕೆಂದು ವೈದ್ಯರು ಹೇಳಿದ್ದರು. ಅದರಂತೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಕೂಡ ಮಾಡಿಸಲಾಯಿತು. ಹೃದಯ ಮತ್ತು ಶ್ವಾಸಕೋಶವನ್ನು ಒಟ್ಟಿಗೆ ಕಸಿ ಮಾಡಬೇಕಿದೆ. ಆಜಾನ್ ಖಾನ್‍ನ ವಯಸ್ಸಿನ ದಾನಿಗಳಿಗೆ ಪಾಲಕರು ಹುಡುಕಾಟ ನಡೆಸುತ್ತಿದ್ದಾರೆ.

ಇದೀಗ ಬಾಲಕ ತನ್ನ ಆಸೆಯಂತೆ ಒಂದು ಗಂಟೆ ಖಾಕಿ ತೊಟ್ಟು ಸಂಭ್ರಮಪಟ್ಟಿದ್ದಾನೆ. ಇದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹಾಗೂ ಇಲಾಖೆಯ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆ.
ಪೊಲೀಸ್ ಇನ್‍ಸ್ಪೆಕ್ಟರ್ ಸಮವಸ್ತ್ರ ಧರಿಸಿ ಜೀಪ್‍ನಲ್ಲಿ ಠಾಣೆಗೆ ಆಗಮಿಸಿದ ಅಜಾನ್ ಖಾನ್‍ಗೆ ಎಸ್ಪಿ ಜಿ.ಕೆ. ಮಿಥುನ್‍ಕುಮಾರ್ ಹೂಗುಚ್ಛ ನೀಡಿ ಸ್ವಾಗತಿಸಿದರು. ಇನ್‍ಸ್ಪೆಕ್ಟರ್ ಖುರ್ಚಿಯಲ್ಲಿ ಆಸೀನನಾಗಿ ಐಪಿಸಿ ಸೆಕ್ಷನ್‍ಗೆ ಸಂಬಂಧಿಸಿದ ಪುಸ್ತಕದ ಕೆಲ ಹಾಳೆಗಳನ್ನು ತಿರುವಿ ಹಾಕಿ ಬಾಲಕ ಪೊಲೀಸ್ ಅಧಿಕಾರಿಯಂತೆಯೇ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಸಂತಸ ಪಟ್ಟ. ನಂತರ ಸಮಸ್ಯೆಗಳನ್ನು ಆಲಿಸಿ ಒಬ್ಬರಿಗೆ ಸಾಂದರ್ಭಿಕ ರಜೆ ಮಂಜೂರು ಮಾಡಿದ್ದಲ್ಲದೆ, ಸೆಲ್‍ಗಳನ್ನು ಪರಿಶೀಲಿಸಿದ್ದು ವಿಶೇಷವಾಗಿತ್ತು.

Also read: PESITM ಕಾಲೇಜಿನಲ್ಲಿ ಐದು ದಿನಗಳ ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಂಗೆ ಚಾಲನೆ

ಚೆನ್ನಾಗಿ ಓದಿ ಮುಂದೆ ನಾನು ಪೊಲೀಸ್ ಇನ್‍ಸ್ಪೆಕ್ಟರ್ ಆಗುತ್ತೇನೆ. ಪೊಲೀಸ್ ಅಧಿಕಾರಿ ಆಗುವುದು ನನ್ನ ಕನಸು. ಪೊಲೀಸ್ ಇಲಾಖೆಗೆ ಸೇರಿ ಕಳ್ಳರನ್ನು ಮಟ್ಟಹಾಕುತ್ತೇನೆ. ಕಳ್ಳರು ಸಿಕ್ಕರೆ ಶಿಕ್ಷಿಸುತ್ತೇನೆ. ದೇಶಸೇವೆ ಮಾಡುವುದು ನನ್ನ ಕನಸು.ಇನ್‍ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದಕ್ಕೆ ಖುಷಿಯಾಯಿತು. ರಿಯಲ್ ಪೊಲೀಸ್ ತರಹ ಕಾಣುತ್ತೇನೆ. ದೊಡ್ಡವನಾದ ಮೇಲೆ ಎಸ್ಪಿ ಆಗುತ್ತೇನೆ ಎಂದು ಆಜಾನ್ ಖಾನ್ ಮುಂದಿನ ಕನಸನ್ನು ಬಿಚ್ಚಿಟ್ಟ.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‍ಕುಮಾರ್ ಮಾತನಾಡಿ, ಆಜಾನ್ ಖಾನ್ ತಂದೆ-ತಾಯಿ ಶಿವಮೊಗ್ಗದವರು. ಈಗ ಬಾಳೆಹೊನ್ನೂರಿನಲ್ಲಿ ನೆಲೆಸಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಪೊಲೀಸ್ ಇನ್‍ಸ್ಪೆಕ್ಟರ್ ಆಗಬೇಕೆಂದು ಹಂಬಲಿಸುತ್ತಿರುವ ಬಗ್ಗೆ ಪಾಲಕರು ಮನವಿ ಮಾಡಿದ್ದರು. ವೈಯಕ್ತಿಕ ಮತ್ತು ಇಲಾಖೆಯಿಂದ ಆತನಿಗೆ ಅವಕಾಶ ಕೊಟ್ಟಿದ್ದು ಖುಷಿಯಾಗಿದೆ ಎಂದರು.

ಬಾಲಕನ ತಂದೆ ತಾಬ್ರೇಜ್ ಖಾನ್, ಮಗ ಇನ್‍ಸ್ಪೆಕ್ಟರ್ ಆಗುವ ಕನಸು ಕಂಡಿದ್ದ. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ನಟ ಸುದೀಪ್ ಅವರನ್ನು ಭೇಟಿಯಾಗುವ ಕನಸು ಕಂಡಿದ್ದ. ಅವರ ಆಸೆಯಂತೆ ಸುದೀಪ್ ಮನೆಗೆ ಕರೆದುಕೊಂಡು ಹೋಗಿ ಭೇಟಿ ಮಾಡಿಸಿದ್ದೆವು. ಇನ್‍ಸ್ಪೆಕ್ಟರ್ ಆಗಬೇಕು ಎಂದಿದ್ದ. ಹೃದಯ ಮತ್ತು ಶ್ವಾಸಕೋಶದ ಕಸಿ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

http://kalpa.news/wp-content/uploads/2023/05/VID-20230516-WA0005.mp4

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Kalahamsa Infotech private limited

Tags: KannadaNewsKannadaNewsLiveKannadaNewsOnline ShivamoggaKannadaNewsWebsiteKannadaWebsiteLatestNewsKannadaLocalNewsMalnadNewsNewsinKannadaNewsKannadaShimogaShivamoggaNewsಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share208Tweet123Send
Previous Post

PESITM ಕಾಲೇಜಿನಲ್ಲಿ ಐದು ದಿನಗಳ ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಂಗೆ ಚಾಲನೆ

Next Post

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ, 3.25ಲಕ್ಷ ರೂ. ದಂಡ ವಿಧಿಸಿದ ಕೋರ್ಟ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಶಿಮುಲ್ ಅಧ್ಯಕ್ಷಗಾದಿ ಚುನಾವಣೆ ಅಸಿಂಧು: ಎಸಿ ಸೇರಿ ಇಬ್ಬರಿಗೆ ಕೋರ್ಟ್ ದಂಡ

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ, 3.25ಲಕ್ಷ ರೂ. ದಂಡ ವಿಧಿಸಿದ ಕೋರ್ಟ್

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026: ಜಾಗತಿಕ ವೇದಿಕೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಭಾರತ

ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026: ಜಾಗತಿಕ ವೇದಿಕೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಭಾರತ

June 8, 2026
5 ದಿನಗಳ ‘ಕಾಯಕ ಸೇತು’ ಉದ್ಯೋಗ ಮೇಳಕ್ಕೆ ಚಾಲನೆ: 2,000ಕ್ಕೂ ಹೆಚ್ಚು ಮಹಿಳೆಯರಿಗೆ ಅವಕಾಶ

5 ದಿನಗಳ ‘ಕಾಯಕ ಸೇತು’ ಉದ್ಯೋಗ ಮೇಳಕ್ಕೆ ಚಾಲನೆ: 2,000ಕ್ಕೂ ಹೆಚ್ಚು ಮಹಿಳೆಯರಿಗೆ ಅವಕಾಶ

June 8, 2026
ಕೆಸಿಇಟಿ ಫಲಿತಾಂಶ | ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಅತ್ಯುತ್ತಮ ಸಾಧನೆ

ಕೆಸಿಇಟಿ ಫಲಿತಾಂಶ | ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಅತ್ಯುತ್ತಮ ಸಾಧನೆ

June 8, 2026
ಮದ್ಯ ಸೇವಿಸಿ ಶಾಲಾ ವಾಹನ ಚಾಲನೆ : ನಾಲ್ವರು ಚಾಲಕರ ವಿರುದ್ಧ ಕೇಸ್

ಮದ್ಯ ಸೇವಿಸಿ ಶಾಲಾ ವಾಹನ ಚಾಲನೆ : ನಾಲ್ವರು ಚಾಲಕರ ವಿರುದ್ಧ ಕೇಸ್

June 8, 2026
ಶಿವಮೊಗ್ಗದಲ್ಲಿ ಕ್ರೀಡಾಪಟುಗಳ ಸಾಧನೆ | ದಕ್ಷಿಣ ಭಾರತ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಇಬ್ಬರಿಗೆ ಚಿನ್ನ

Shivamogga: Two Wrestlers Win Gold at South India Championship

June 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL