ಕಲ್ಪ ಮೀಡಿಯಾ ಹೌಸ್ | ಕುಂಸಿ(ಶಿವಮೊಗ್ಗ) |
ಇಲ್ಲಿನ ರೈಲ್ವೆ ಹಳಿ ಮೇಲೆ ಆನಂದಪುರಂ ರೈಲ್ವೆ ಸ್ಟೇಷನ್ ಮಾಸ್ಟರ್ #RailwayStationMaster ಶವ ಪತ್ತೆಯಾಗಿದ್ದು, ರೈಲಿಗೆ ತಲೆ ಕೊಟ್ಟು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಆನಂದಪುರಂ ರೈಲ್ವೆ ಸ್ಟೇಷನ್ ಮಾಸ್ಟರ್ ಅರುಣ್ ಕುಮಾರ್ ಮೃತ ದುರ್ದೈವಿಯಾಗಿದ್ದು, ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ನಿಖರ ಮಾಹಿತಿ ತಿಳಿದುಬಂದಿಲ್ಲ.
ಇಂದು ಬೆಳಿಗ್ಗೆ ಬೆಂಗಳೂರಿನಿಂದ ತನ್ನ ಮಾವನ ಜೊತೆ ಬರುತ್ತಿದ್ದ ಅರುಣ್ ಕುಮಾರ್ ಕುಂಸಿ #Kumsi ರೈಲ್ವೆ ನಿಲ್ದಾಣದಲ್ಲಿ ಕೆಳಗೆ ಇಳಿದು ಹೋಗಿದ್ದಾರೆ. ಆನಂತರ ತಾವು ತೆರಳುತ್ತಿದ್ದ ರೈಲಿಗೆ ತಲೆಕೊಟ್ಟು ಸಾವನ್ನಪ್ಪಿರುವುದಾಗಿ ಹೇಳಲಾಗಿದೆ.
ಬಿಹಾರ #Bihar ಮೂಲದ ಅರುಣ್ ಕುಮಾರ್ ಕಳೆದ ಐದು ದಿನ ರಜೆಯಲ್ಲಿದ್ದರು. ಆದರೆ, ಇಂದು ಕರ್ತವ್ಯಕ್ಕೆ ವಾಪಾಸ್ ಆಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















