ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಣ್ಣಾಮಲೈ #Annamalai ಓರ್ವ ಅಯೋಗ್ಯ, ರಾಜ್ಯದ ಪೆನ್ಷನ್ ತೆಗೆದುಕೊಂಡು ಅಲ್ಲಿ ಹೋಗಿ ರಾಜಕೀಯ ಮಾಡುತ್ತಾರೆ ಎಂದು ಸಚಿವ ಮಧು ಬಂಗಾರಪ್ಪ #Madhu Bangarappa ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕ ಅಣ್ಣಾಮಲೈ ಅವರು ತಮ್ಮ ಬಗ್ಗೆ ಟ್ವೀಟ್ ಮಾಡಿರುವ ಕುರಿತಾಗಿ ಪ್ರತಿಕ್ರಿಯಿಸಿ ಅವರು ಮಾತನಾಡಿದರು.
ಇನ್ನು, ನಗರದಲ್ಲಿ ನಡೆದ ಗ್ಯಾಂಗ್ ವಾರ್’ಗೆ ಮೂವರು ಬಲಿಯಾಗಿರುವ ಘಟನೆ ಕುರಿತಂತೆ ಪೊಲೀಸ್ ಇಲಾಖೆ ವೈಫಲ್ಯವಾಗಿದ್ದರೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.
Also read: 75 ಕಡೆ ಝೀರೋ ರಿಸಲ್ಟ್ ಬಂದಿದ್ದರೂ ಬಿಗಿಯಾಗಿ ಪರೀಕ್ಷೆ ನಡೆಸಿದ್ದು ಇದಕ್ಕಾಗಿ: ಶಿಕ್ಷಣ ಸಚಿವರು ಹೇಳಿದ್ದೇನು
ನಗರದಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಗ್ಯಾಂಗ್ ವಾರ್’ಗೆ 3 ಬಲಿಯಾಗಿದೆ. ಸ್ಥಳೀಯ ಶಾಸಕರು ಪೊಲೀಸ್ ವೈಫಲ್ಯ ಎಂದು ದೂರಿದ್ದಾರೆ ಎಂಬ ಪ್ರಶ್ನೆಗೆ ಆ ಶಾಸಕರ ಬಗ್ಗೆ ಹೆಚ್ಚಾಗಿ ಏನು ಹೇಳುವುದಿಲ್ಲ ಎಂದರು.
ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ ನೀಡಿದ್ದೇನೆ. ಈಗಾಗಲೇ ಸೂಕ್ತ ಕ್ರಮಕೈಗೊಂಡಿದ್ದಾರೆ. 19 ಜನರ ಬಂಧನವಾಗಿದೆ. ಹಾಗೇನಾದರೂ ವೈಫಲ್ಯಗಳಿದ್ದಲ್ಲಿ ಅಥವಾ ಇಲಾಖೆಗೆ ಮೊದಲೇ ಸುಳಿವು ಗೊತ್ತಿದ್ದು, ಕ್ರಮ ಕೈಗೊಂಡಿಲ್ಲವಾಗಿದ್ದರೆ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುತ್ತೇನೆ ಎಂದರು.
ನೈರುತ್ಯ ಪದವೀಧರಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ನಾಯಕರೊಬ್ಬರು ಪಕ್ಷೇತರರಾಗಿ ಸ್ಪರ್ಧಿಸುತ್ತಿz್ದÁರಲ್ಲ ಎಂಬ ಪ್ರಶ್ನೆಗೆ ಈ ಬಗ್ಗೆ ಪಕ್ಷ ಅವರ ಮೇಲೆ ಸೂಕ್ತ ಕ್ರಮಕೈಗೊಳ್ಳಲಿದೆ ಎಂದರು.
ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post