ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ-ಬೆಂಗಳೂರು ನಡುವಿನ ರೈಲ್ವೆ #Shivamogga-Banglore Train ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿರುವ ಸಂಸದ ಬಿ.ವೈ. ರಾಘವೇಂದ್ರ, #MP B Y Raghavendra ಶೀಘ್ರದಲ್ಲೇ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ ಎಂದಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ವಂದೇ ಭಾರತ್ ರೈಲು #Vande Bharath Train ಸಂಚಾರ ಆರಂಭಕ್ಕೆ ರೈಲ್ವೆ ಇಲಾಖೆಗೆ ಮನವಿ ಮಾಡಲಾಗಿತ್ತು. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲೇ ಶಿವಮೊಗ್ಗ-ಯಶವಂತಪುರ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ ಎಂದಿದ್ದಾರೆ.
ಶಿವಮೊಗ್ಗ-ಚೆನ್ನೈ ನಡುವೆ ನೂತನ ರೈಲು
ಶಿವಮೊಗ್ಗ-ಚೆನ್ನೈ #Shivamogga-Chennai ನಡುವೆ ನೂತನ ಸೆಮಿಫಾಸ್ಟ್ ರೈಲು ಸಂಚಾರಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ #Ashwini Vaishnav ಹಸಿರು ನಿಶಾನೆ ತೋರಿದ್ದಾರೆ ಎಂದರು.
ಎಂದಿನಿಂದ ಆರಂಭ? ಸಮಯವೇನು?
ಈ ನೂತನ ರೈಲು ಸಂಚಾರ ಆರಂಭಕ್ಕೆ ದಿನಾಂಕ ಇನ್ನೂ ನಿಗದಿಯಾಗಬೇಕಿದ್ದು, ಅತಿ ಶೀಘ್ರದಲ್ಲೇ ಸಂಚಾರ ಆರಂಭವಾಗಲಿದೆ.
Also read: ಶಿವಮೊಗ್ಗಕ್ಕೆ ಮತ್ತೊಂದು ಹೊಸ ರೈಲು | ಎಲ್ಲಿಗೆ ಸಂಚಾರ? ಸಮಯ ಏನು? ಎಂದಿನಿಂದ ಆರಂಭ?
ಇನ್ನು, ಈ ರೈಲು ಪ್ರತಿದಿನ ಸಂಚರಿಸಲಿದೆ. ಶಿವಮೊಗ್ಗದಿಂದ ಸಂಜೆ 4 ಗಂಟೆಗೆ ಹೊರಡಲಿದ್ದು ಬೆಳಗ್ಗಿನ ಜಾವ 4-45 ಗೆ ಚೆನ್ನೈ ತಲುಪಲಿದೆ. ರಾತ್ರಿ 11-30 ಹೊರಟು ಮರುದಿನ 12 ಗಂಟೆಗೆ ಶಿವಮೊಗ್ಗ ತಲುಪಲಿದೆ
ಬೆಂಗಳೂರು ಪೇಟೆ, ಚೋಳಾರು ಗುಂಟೆಯ ಮೇಲೆ ಚೆನ್ನೈಗೆ ತಲುಪಲಿದೆ.
ಇದರೊಂದಿಗೆ ಜಿಲ್ಲೆಯ ಹಲವು ರೈಲ್ವೆ ಯೋಜನೆಗಳಿಗೆ ಸಚಿವರೊಂದಿಗೆ ಚರ್ಚಿಸಲಾಗಿದೆ. ಹೊಸ ರೈಲ್ವೆ ಸಂಪರ್ಕಗಳಿಗೆ ಸಹಕಾರ ನೀಡುತ್ತಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಜಿಲ್ಲೆಯ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post