ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಬಿ.ಹೆಚ್.ರಸ್ತೆಯ ಮೈನ್ ಮಿಡ್ಲ್ ಸ್ಕೂಲ್ Shivamogga Main Middle School ಉಳುವಿಗಾಗಿ ಹಳೆ ವಿದ್ಯಾರ್ಥಿಗಳ ಸಂಘದಿಂದ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಚನ್ನವೀರಪ್ಪ ಗಾಮನಗಟ್ಟಿ ಮಾತನಾಡಿ, ಈ ಶಾಲೆಗೆ 134 ವರ್ಷಗಳ ಇತಿಹಾಸವಿದೆ. ಇದು 1ರಿಂದ 5ನೇ ತರಗತಿ ಕನ್ನಡ ಮಾಧ್ಯಮ ಹಾಗೂ 6 ಮತ್ತು 7ನೇ ತರಗತಿ ಕನ್ನಡ ಮತ್ತು ಆಂಗ್ಲ ಮಾಧ್ಯಮವಿದೆ. 1ರಿಂದ 5ನೇ ತರಗತಿ ಕನ್ನಡ ಮಾಧ್ಯಮವಿರುವುದರಿಂದ ಮಕ್ಕಳ ದಾಖಲಾತಿ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಹೇಳಿದರು.
ಹಿಂದೆ ಸಾವಿರಾರು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಈ ಶಾಲೆಯಲ್ಲಿ ಓದುತ್ತಿದ್ದರು, ಕೆಲವು ವರ್ಷಗಳಿಂದ ಆಂಗ್ಲ ಮಾಧ್ಯಮದ ಬರದಲ್ಲಿ ಕನ್ನಡ ಮಾಧ್ಯಮಕ್ಕೆ ಮಕ್ಕಳ ಸೇರುಸುವಿಕೆ ಕಡಿಮೆಯಾಗಿದೆ. ನಾಲ್ಕು ವರ್ಷಗಳ ಹಿಂದೆ 180ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದ ಶಾಲೆ 120 ನಂತರ 80 ಕಳೆದ ವರ್ಷ 60ರ ಮಕ್ಕಳ ಸಂಖ್ಯೆ, ಇಂದು 30ಕ್ಕೆ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಕ್ಕಳ ಸಂಖ್ಯೆ ಕಡಿಮೆ ಇರುವ ಎಷ್ಟೋ ಸರ್ಕಾರಿ ಶಾಲೆಗಳು ಮುಚ್ಚಿಹೋಗಿವೆ. ಇತಿಹಾಸವಿರುವ ಬ್ರಿಟಿಷ್ ಬಂಗಲೇಯ ಮೈನ್ ಮಿಡ್ಲ್ ಸ್ಕೂಲ್ ಗೆ ಕೆಪಿಎಸ್ ಅಡಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ಹಾಗೂ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮಕ್ಕೆ ಅವಕಾಶ ಕಲ್ಪಿಸಿ ಕೊಡಲು ಹಳೆ ವಿದ್ಯಾರ್ಥಿಗಳ ಸಂಘದಿಂದ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ನಾಳೆಯೇ ಬೆಂಗಳೂರಿನಲ್ಲಿ ಶಿಕ್ಷಣ ಸಚಿವರೊಂದಿಗೆ ಮಾತನಾಡುತ್ತೇನೆ. ಯಾವುದೇ ಕಾರಣಕ್ಕೂ ಶಾಲೆಗಳ ಮುಚ್ಚಲು ಬಿಡುವುದಿಲ್ಲ ಎಂದರು.
Also read: ಮೂಕ ಪ್ರಾಣಿಗಳ ನೆರವಿಗೆ ಬಂದ ಅಮೆರಿಕದ ಕನ್ನಡತಿ ಜ್ಯೋತಿ ಗಂಗಾಧರ್
ಹಳೆ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಪರಶುರಾಮ, ಪ್ರಧಾನ ಕಾರ್ಯದರ್ಶಿ ಯತೀಶ್ ರಾಜ್, ಕಾರ್ಯದರ್ಶಿ ಕೆ. ಸವಿತಾ, ಸಹ ಕಾರ್ಯದರ್ಶಿ ಜೆ. ವಿಶ್ವನಾಥ್, ಖಜಾಂಚಿ ಪ್ರಕಾಶ್, ಸದಸ್ಯರಾದ ಕೆ. ಚಂದ್ರಶೇಖರ, ಪರಮೇಶ್, ವಸಂತ್ ನಾಯ್ಕ್ ಹಾಗೂ ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post