ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ JNNCE ನಾವೀನ್ಯತೆ ಮತ್ತು ಉದ್ಯಮಶೀಲತೆ ಕೇಂದ್ರ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ವತಿಯಿಂದ ಉಪನ್ಯಾಸಕರಿಗಾಗಿ ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಪೇಟೆಂಟ್ ಫೈಲಿಂಗ್ ಮತ್ತು ಸಂಶೋಧನಾ ಪ್ರಸ್ತಾವನೆಗಳ ಬರವಣೆಗೆ ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದರು.

ಎಂಎಸ್ಎಂಇ ಮೂಲಕ ಸರ್ಕಾರ ಸಣ್ಣ ಮತ್ತು ಮಧ್ಯಮ ಉದ್ಯಮಶೀಲತೆ ಹೆಚ್ಚು ಬೆಂಬಲವನ್ನು ನೀಡುತ್ತಿದೆ. ವಿ.ಜಿ.ಎಸ್.ಟಿ, ಕೆ.ಎಸ್.ಸಿ.ಎಸ್.ಟಿ ಮೂಲಕ ನಾವೀನ್ಯ ಯೋಚನೆಗಳನ್ನು ಯೋಜನೆಗಳನ್ನಾಗಿ ಪರಿವರ್ತಿಸಲು ಉತ್ತೇಜನೆ ನೀಡುತ್ತಿದೆ ಎಂದು ಹೇಳಿದರು.
ಕೆ.ಎಸ್.ಸಿ.ಎಸ್.ಟಿ ಪೇಟೆಂಟ್ ಮಾಹಿತಿ ಕೇಂದ್ರದ ಎಂ.ಜಿ.ನಾಗಾರ್ಜುನ ಮಾತನಾಡಿ, ಕಲೆ ವಾಣಿಜ್ಯ ವಿಜ್ಞಾನ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಪೇಟೆಂಟ್ ಫೈಲಿಂಗ್ ಮಾಡಬಹುದಾಗಿದೆ. ಕೋಟ್ಯಾಂತರ ರೂಪಾಯಿ ಆರ್ಥಿಕ ವ್ಯವಹಾರ ಕೇವಲ ನಾವೀನ್ಯ ಯೋಚನೆಯ ಪೇಟೆಂಟ್ ಫೈಲಿಂಗ್ ಮಾಡುವುದರ ಮೂಲಕ ನಡೆಸುತ್ತಿರುವವರು ಅನೇಕರಿದ್ದಾರೆ. ನಾವೀನ್ಯ ಯೋಚನೆಗೆ ಅಂತಹ ಶಕ್ತಿಯಿದೆ. ದೇಶದ ಅಭಿವೃದ್ಧಿಯ ಪ್ರತಿಯೊಂದು ಹಂತದಲ್ಲಿ ನಾವೀನ್ಯ ಯೋಚನೆಗಳು ಸ್ಥಾನ ಪಡೆದಿದೆ ಎಂದು ಹೇಳಿದರು.
Also read: ಕ್ರೈಸ್ಟ್‌ಕಿಂಗ್ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮಾಹಿತಿ ಕಾರ್ಯಾಗಾರ
ಎನ್ಇಎಸ್ ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ ಮಾತನಾಡಿ, ಪ್ರೌಢಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಪೇಟೆಂಟ್ ಫೈಲಿಂಗ್ ಮಾಡಿದ ಅನೇಕ ಉದಾಹರಣೆಗಳಿವೆ. ಉಪನ್ಯಾಸಕರು ತಾಂತ್ರಿಕವಾಗಿ ಮತ್ತು ನಾವೀನ್ಯಯುತವಾಗಿ ಉನ್ನತಿಕರಣ ಹೊಂದಬೇಕಾದ ಅನಿವಾರ್ಯತೆಯಿದೆ ಎಂದು ಹೇಳಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















