ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದ ಅನಿಕೇತನ ಸೇವಾ ಟ್ರಸ್ಟ್ (ರಿ) ವತಿಯಿಂದ ನ.6ರಂದು ಪುನೀತ್ ರಾಜಕುಮಾರ್ ಅವರ ಸ್ಮರಣೆಗಾಗಿ ಅಪ್ಪು ಅಮರ ಗೀತ ನಮನ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಗರದ ಕುವೆಂಪು ರಂಗಮಂದಿರಲ್ಲಿ ಅಂದು ಸಂಜೆ 5.30ಕ್ಕೆ ಅನಾಥಾಶ್ರಮ ಮತ್ತು ಅಂಧಾಶ್ರಮದಲ್ಲಿ ಇರುವ ಮಕ್ಕಳು, ವೃದ್ಧಾಶ್ರಮದಲ್ಲಿರುವ ನಿವಾಸಿಗಳು ಹಾಗೂ ಸೇವಾ ಮನೋಭಾವವನ್ನು ಒಳಗೊಂಡಿರುವಂತಹ ವ್ಯಕ್ತಿಗಳನ್ನು ಒಳಗೊಂಡ ಸಾರ್ವಜನಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಶಿವಮೊಗ್ಗದಲ್ಲಿ ಇರುವಂತಹ ಎಲ್ಲಾ ನಾಗರಿಕರು, ಅಭಿಮಾನಿಗಳು, ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರೆಯದ ಮಾಣಿಕ್ಯನಿಗೆ ನಮನ ಸಲ್ಲಿಸಬೇಕಾಗಿ ಅನಿಕೇತನ ಸೇವಾ ಟ್ರಸ್ಟ್ ಅಧ್ಯಕ್ಷರು ಹಾಗೂ ಕುವೆಂಪು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು ಆಗಿರುವ ರಮೇಶ್ ಬಾಬು ವಿನಂತಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಪ್ರತಿಷ್ಠಿತ ಗಾಯಕರು ಪುನೀತ್ ರಾಜಕುಮಾರ ಅಭಿನಯಿಸಿದ ಚಿತ್ರ ಗೀತೆಗಳ ಗಾಯನವನ್ನು ಹಾಡಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post