ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಂಕರ ಮಠ ರಸ್ತೆಯ ಸ್ನೇಹ ಕಾಂಪ್ಲೆಕ್ಸ್ ನಲ್ಲಿರುವ ಶಂಕರ ಕೃಪದಲ್ಲಿ ಸ್ನೇಹಾ ಡ್ರಾಯಿಂಗ್ ಅಕಾಡೆಮಿಯು ಎಪ್ರಿಲ್ ಒಂದರಿಂದ 11ರವರೆಗೆ 10 ದಿನಗಳ ಕಾಲ ಚಿತ್ರಕಲಾ ರಚನೆಯ ಉಚಿತ ಬೇಸಿಗೆ ಶಿಬಿರವನ್ನು ಆಯೋಜಿಸಿದೆ.
ಐದರಿಂದ ಹದಿನೆಂಟು ವರ್ಷದ ವಯೋಮಿತಿಯ ಮಕ್ಕಳು ಇದರಲ್ಲಿ ಭಾಗವಹಿಸಬಹುದಾಗಿದ್ದು, ಸಂಜೆ 4 ರಿಂದ 5 ರವರೆಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಚಿತ್ರ ರಚನಾ ಸ್ಪರ್ಧೆಯಲ್ಲಿ ಪ್ರಶಸ್ತಿ ಪುರಸ್ಕೃತರಾದ ಕು. ಸ್ನೇಹಾಶ್ರೀ ಎಸ್.ಜಿ. ಅವರು ಮಕ್ಕಳಿಗೆ ತರಬೇತಿ ನೀಡಲಿದ್ದಾರೆ.

Also read: ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ ಅರೆಸ್ಟ್ | ಆಕೆ ಹೇಳಿದ್ದೇನು?
ಆಸಕ್ತರು ಮಾರ್ಚ್ 28ರೊಳಗೆ ಈ ಕೆಳಕಂಡ ದೂರವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಲು ಹಾಗು ಹೆಸರು ನೊಂದಾಯಿಸಲು ಕೋರಲಾಗಿದೆ. 907160532 94806 72079 ಗೆ ಸಂಪರ್ಕಿಸಬಹುದು. ಸೀಮಿತ ಮಕ್ಕಳಿಗೆ ಮಾತ್ರ ಅವಕಾಶವಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post