ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗುರುಗುಹ ವಾಗ್ಗೇಯ ಪ್ರತಿಷ್ಠಾನ ಟ್ರಸ್ಟ್ ಹಾಗೂ ಗುರುಗುಹ ಸಂಗೀತ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಫೆ.17ರಿಂದ 21ರವರೆಗೆ ಜಯನಗರದ ಶ್ರೀರಾಮ ಮಂದಿರದಲ್ಲಿ ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರ ಹಾಗೂ ಸದ್ಗುರು ಶ್ರೀ ತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವವನ್ನು ಆಯೋಜಿಸಲಾಗಿದೆ.
ಫೆ.17 ಮತ್ತು 18ರಂದು ಪ್ರತಿದಿನ ಸಂಜೆ 5:30ಕ್ಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ದೇವರನಾಮಗಳ ಗೋಷ್ಠಿ ಗಾಯನ ಇರುತ್ತದೆ. 7ರಿಂದ ಶ್ರೀ ಪುರಂದರ ದಾಸರ ನವರತ್ನ ಮಾಲಿಕೆಗಳ ಗೋಷ್ಠಿ ಗಾಯನ ಇರುತ್ತದೆ. 19ರಂದು ಬೆಳಿಗ್ಗೆ 6-30ಕ್ಕೆ ರವೀಂದ್ರ ನಗರದ ಶ್ರೀ ಪ್ರಸನ್ನಗಣಪತಿ ದೇವಸ್ಥಾನದಿಂದ ಜಯನಗರದ ರಾಮಮಂದಿರದ ವರೆಗೆ ನಗರ ಸಂಕೀರ್ತನೆ ಆಯೋಜಿಸಲಾಗಿದೆ. ಬೆಳಿಗ್ಗೆ 8:30ಕ್ಕೆ ಶಿಬಿರಾರ್ಥಿ ಮಾತೆಯರಿಂದ ದೇವರನಾಮ ಇರುತ್ತದೆ. 11:30ಕ್ಕೆ ಸ್ಥಳೀಯ ಕಲಾವಿದರಿಂದ ಪಂಚರತ್ನ ಕೃತಿಗಳ ಗೋಷ್ಠಿ ಗಾಯನವಿರುತ್ತದೆ. ಸಂಜೆ 6:30ಕ್ಕೆ ಪ್ರಾಕಾರೋತ್ಸವವಿರುತ್ತದೆ.
20ರಂದು ಸಂಜೆ 5:30ಕ್ಕೆ ದೇವರನಾಮಗಳ ಗೋಷ್ಠಿ ಗಾಯನ, 6ಕ್ಕೆ ಶಿವಮೊಗ್ಗೆಯ ಮಂಗಳ ವಾದ್ಯ ಕಲಾವಿದರಿಂದ ನಾದಸ್ವರ ಹಾಗೂ ಸ್ಯಾಕ್ಸೋಫೋನಿನ ಮಂಗಳ ವಾದ್ಯೋತ್ಸವವಿರುತ್ತದೆ. 21ರಂದು ಸಂಜೆ 5:30ರಿಂದ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ದೇವರ ನಾಮದ ಗೋಷ್ಠಿಗಳನ್ನು ಆಯೋಜಸಲಾಗಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಸಂಗೀತಾಸಕ್ತರು ಆಗಮಿಸಬೇಕು ಎಂದು ಪ್ರತಿಷ್ಠಾನ ಟ್ರಸ್ಟ್ ಹಾಗೂ ಸಂಗೀತ ಮಹಾವಿದ್ಯಾಲಯದ ಪ್ರಮುಖರು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post