ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಮಮಂದಿರ Ramamandira ಉದ್ಘಾಟನೆಗಾಗಿ ಅಯೋಧ್ಯೆಗೆ Ayodhya ತೆರಳುವವರ ಮೇಲೆ ಗೋದ್ರಾ Godra ಘಟನೆ ರೀತಿಯಲ್ಲಿ ಮರುಕಳಿಸಬಹುದು ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ KSEshwarappa ಆಗ್ರಹಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಗೋದ್ರಾ ರೀತಿಯ ಘಟನೆ ನಡೆಯಬಹುದು ಎಂದು ಹರಿಪ್ರಸಾದ್ ಹೇಳಿದ್ದಾರೆ. ಹರಿಪ್ರಸಾದ್’ಗೆ ಈ ಬಗ್ಗೆ ಪೂರ್ಣ ಮಾಹಿತಿ ಗೊತ್ತಿದ್ದರೆ ಅವರನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದರು.
ಹರಿಪ್ರಸಾದ್ ಅವರಿಗೆ ಎಲ್ಲವೂ ಗೊತ್ತಿದೆಯೇ? ಅವರು ಈ ರೀತಿ ಹೇಳಿಕೆ ನೀಡುತ್ತಾರಾದರೆ ಅವರಿಗೆ ಯಾರೊಂದಿಗೆ ಸಂಪರ್ಕವಿದೆ? ಇಷ್ಟು ಬಹಿರಂಗವಾಗಿ ಇಂತಹ ಹೇಳಿಕೆ ನೀಡಿರುವ ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಬೇಕು. ಈ ಕುರಿತಂತೆ ಗೃಹ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
Also read: ಕಾಂಗ್ರೆಸ್ ಪಕ್ಷಕ್ಕೆ ಕಡೆಗಾಲ ಬಂದಿದೆ: ಕೆ.ಎಸ್. ಈಶ್ವರಪ್ಪ ಕಟಕಿ
ಹರಿಪ್ರಸಾದ್ ಅವರ ಹೇಳಿಕೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಸುಮ್ಮನಿದ್ದು, ಏನಾದರೂ ಅನಾಹುತವಾದರೆ ಅದಕ್ಕೆ ಅವರೇ ಹೊಣೆ ಆಗುತ್ತಾರೆ ಎಂದು ಎಚ್ಚರಿಸಿದರು.
ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಿ
ಇನ್ನು, 32 ವರ್ಷಗಳ ಹಿಂದಿನ ಪ್ರಕರಣದಲ್ಲಿ ಈಗ ಕರಸೇವಕರನ್ನು ಬಂಧಿಸಿರುವುದು ಅಕ್ಷಮ್ಯ. ಹುಬ್ಬಳ್ಳಿಯಲ್ಲೇ 600 ಕಡತ ಬಾಕಿ ಇದೆ ಎಂದು ಸರ್ಕಾರ ಹೇಳುತ್ತದೆ. ಆದರೆ, ಇವೆಲ್ಲವನ್ನೂ ಬಿಟ್ಟು ಕರಸೇವಕರ ಫೈಲ್ ಮಾತ್ರ ತೆಗೆದುಕೊಂಡಿದ್ದು ಯಾಕೆ? ಕರಸೇವಕನನ್ನು ಬಂಧಿಸಿರುವ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಕರಸೇವಕರ ವಿರುದ್ದದ ಕ್ರಮ ಹಾಗೂ ಅಧಿಕಾರಿಯ ಅಮಾನತು ಮಾಡಲು ನಾವು ಹೋರಾಟ ಮಾಡುತ್ತಿದ್ದೇವೆ. ಶ್ರೀಕಾಂತ್ ಪೂಜಾರಿ ಅವರೊಂದಿಗೆ ಇನ್ನಾವುದೇ ಕರಸೇವಕರನ್ನು ಬಂಧಿಸಿದ್ದರೆ ಅವರನ್ನೂ ಸಹ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post